• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, November 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಬೆಂಗಳೂರಿಗರೇ ಗಮನಿಸಿ:ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ; ಹೊಸ ರೂಟ್ ಜಾರಿ!

Shivakumar by Shivakumar
November 5, 2026
in ಕರ್ನಾಟಕ
0
ಬೆಂಗಳೂರಿಗರೇ ಗಮನಿಸಿ:ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ; ಹೊಸ ರೂಟ್ ಜಾರಿ!
Share on WhatsAppShare on FacebookShare on Telegram

ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲೊಂದಾದ ಬಳ್ಳಾರಿ ರಸ್ತೆಯಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 6ರಿಂದ ಮುಂದಿನ 18 ತಿಂಗಳವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಕಾಮಗಾರಿ ನಡೆಯುವ ಅವಧಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಂಚಾರ ಪೊಲೀಸರು ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ.

ADVERTISEMENT

 

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವತಿಯಿಂದ ಯುಎಎಸ್ ಸ್ಟಾಫ್ ಕ್ವಾರ್ಟರ್ಸ್‌ನಿಂದ ಮೇಖ್ರಿ ಸರ್ಕಲ್‌ವರೆಗೆ ನಾಲ್ಕು ಪಥಗಳ ಎಲಿವೇಟೆಡ್ ಕಾರಿಡಾರ್ ನಿರ್ಮಿಸಲಾಗುತ್ತಿದೆ. ಈ ಕಾಮಗಾರಿಯ ಹಿನ್ನೆಲೆಯಲ್ಲಿ ಸದಾಶಿವನಗರ ಮತ್ತು ಸಂಜಯನಗರ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.

Priyank Kharge : ಹಳ್ಳಿಗುಗ್ಗು ಎಂದ ಪ್ರಿಯಾಂಕ್ ಖರ್ಗೆಗೆ ಕುಮಾರಸ್ವಾಮಿ ತಿರುಗೇಟು #pratidhvani

ಬಳ್ಳಾರಿ ರಸ್ತೆಯಲ್ಲಿ ಯಾವ ವಾಹನಗಳಿಗೆ ನಿರ್ಬಂಧ?

ಕಾಮಗಾರಿ ಹಿನ್ನೆಲೆಯಲ್ಲಿ ಬಳ್ಳಾರಿ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು, ಖಾಸಗಿ ಬಸ್‌ಗಳು ಹಾಗೂ ಎಲ್ಲ ಮಾದರಿಯ ಸರಕು ಸಾಗಣೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಲಘು ಸರಕು ವಾಹನಗಳು (LGV), ಮಧ್ಯಮ ಸರಕು ವಾಹನಗಳು (MGV) ಮತ್ತು ಭಾರಿ ಸರಕು ವಾಹನಗಳು (HGV) ಕೂಡ ಈ ನಿರ್ಬಂಧದ ವ್ಯಾಪ್ತಿಗೆ ಬರಲಿವೆ.

 

ವಿಮಾನ ನಿಲ್ದಾಣಕ್ಕೆ ತೆರಳುವವರು ಹಾಗೂ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಬರುವವರು ಸಂಚಾರ ಪೊಲೀಸರ ಸೂಚನೆಯಂತೆ ಪರ್ಯಾಯ ಮಾರ್ಗಗಳನ್ನು ಬಳಸಬೇಕು.

 

ವಿಮಾನ ನಿಲ್ದಾಣಕ್ಕೆ ತೆರಳುವವರಿಗೆ ಪರ್ಯಾಯ ಮಾರ್ಗಗಳು

 

ಮಾರ್ಗ 1: ಓಲ್ಡ್ ಹೈಗ್ರೌಂಡ್ಸ್ ಜಂಕ್ಷನ್‌ನಿಂದ ಕಲ್ಪನಾ ಜಂಕ್ಷನ್, ಓಲ್ಡ್ ಉದಯ ಟಿವಿ ಜಂಕ್ಷನ್, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಟ್ಯಾನರಿ ರಸ್ತೆ ಹಾಗೂ ನಾಗವಾರ ರಸ್ತೆ ಮೂಲಕ ವಿಮಾನ ನಿಲ್ದಾಣ ತಲುಪಬಹುದು.

 

ಮಾರ್ಗ 2: ಯಶವಂತಪುರ ಕಡೆಯಿಂದ ವಿಮಾನ ನಿಲ್ದಾಣಕ್ಕೆ ತೆರಳುವವರು ಮತ್ತಿಕೆರೆ ರಸ್ತೆ ಮೂಲಕ ಬಿಇಎಲ್ ವೃತ್ತ ತಲುಪಬೇಕು. ಅಲ್ಲಿಂದ ಬಲ ತಿರುವು ಪಡೆದು ರಿಂಗ್ ರಸ್ತೆಯ ಮೂಲಕ ವಿಮಾನ ನಿಲ್ದಾಣಕ್ಕೆ ತೆರಳಬಹುದು.

ವಿಮಾನ ನಿಲ್ದಾಣದಿಂದ ನಗರಕ್ಕೆ ಬರುವವರಿಗೆ ಪರ್ಯಾಯ ಮಾರ್ಗಗಳು

K.V. Prabhakar Exclusive Podcast : ಸಿದ್ದರಾಮಯ್ಯ ಶಕ್ತಿ ಬಗ್ಗೆ ಹೈಕಮಾಂಡ್ ನಾಯಕರಿಗೆ ಚೆನ್ನಾಗಿ ಗೊತ್ತಿದೆ..!

ಮಾರ್ಗ 1: ವಿಮಾನ ನಿಲ್ದಾಣದಿಂದ ನಗರದ ಕೇಂದ್ರ ಭಾಗಕ್ಕೆ ಬರುವವರು ಹೆಬ್ಬಾಳದಲ್ಲಿ ಎಡ ತಿರುವು ಪಡೆದು ನಾಗವಾರ ಜಂಕ್ಷನ್ ತಲುಪಬೇಕು. ಅಲ್ಲಿಂದ ಬಲ ತಿರುವು ಪಡೆದು ಬಂಬೂ ಬಜಾರ್ ಮತ್ತು ಕ್ವೀನ್ಸ್ ರಸ್ತೆ ಮೂಲಕ ನಗರದ ಕಡೆಗೆ ಸಂಚರಿಸಬಹುದು.

 

ಮಾರ್ಗ 2: ಹೆಬ್ಬಾಳದಲ್ಲಿ ಬಲ ತಿರುವು ಪಡೆದು ಹೆಬ್ಬಾಳ ರಿಂಗ್ ರಸ್ತೆ, ಕುವೆಂಪು ಸರ್ಕಲ್ ಹಾಗೂ ಗೊರಗುಂಟೆಪಾಳ್ಯ ಜಂಕ್ಷನ್ ತಲುಪಬೇಕು. ಅಲ್ಲಿಂದ ಎಡ ತಿರುವು ಪಡೆದು ಡಾ. ರಾಜ್‌ಕುಮಾರ್ ರಸ್ತೆಯ ಮೂಲಕ ನಗರದ ಕಡೆಗೆ ತೆರಳಬಹುದು.

 

ಯಶವಂತಪುರದಿಂದ ನಗರದ ಕೇಂದ್ರ ಭಾಗಕ್ಕೆ ಬರುವವರಿಗೆ ಸೂಚನೆ:ಯಶವಂತಪುರ ಕಡೆಯಿಂದ ನಗರದ ಕೇಂದ್ರ ಭಾಗಕ್ಕೆ ತೆರಳುವ ವಾಹನ ಸವಾರರು ಬಿಎಚ್‌ಇಎಲ್ ಜಂಕ್ಷನ್‌ನಿಂದ ಮಾರುತಿ ಸರ್ಕಲ್ ಬಳಿ ಬಲ ತಿರುವು ಪಡೆದು ಮಾರ್ಗೋಸಾ ರಸ್ತೆಯ ಮೂಲಕ ಸಂಚರಿಸಬಹುದು.ಹೆಬ್ಬಾಳದಿಂದ ನಗರಕ್ಕೆ ಬರುವವರಿಗೆ ಪರ್ಯಾಯ ಮಾರ್ಗ

ಹೆಬ್ಬಾಳ ಕಡೆಯಿಂದ ನಗರದ ಕಡೆಗೆ ಬರುವ ವಾಹನ ಸವಾರರು ಹೆಬ್ಬಾಳ ಮೇಲ್ಸೇತುವೆಯಿಂದ ಇಳಿದ ಬಳಿಕ ಬ್ಯಾಪ್ಟಿಸ್ಟ್ ಆಸ್ಪತ್ರೆಯ ಮುಂಭಾಗದ ಸರ್ವಿಸ್ ರಸ್ತೆಯನ್ನು ಬಳಸಬೇಕು. ಆನಂದನಗರ ಕ್ರಾಸ್ ಅಥವಾ ಸಿಬಿಐ ಜಂಕ್ಷನ್ ಬಳಿ ಎಡ ತಿರುವು ಪಡೆದು ಆನಂದನಗರ ಮುಖ್ಯರಸ್ತೆ ಸೇರಬಹುದು. ಅಲ್ಲಿಂದ ಆರ್.ಟಿ.ನಗರ ಹಾಗೂ ಜಯಮಹಲ್ ರಸ್ತೆಯ ಕಡೆಗೆ ತೆರಳಬಹುದು.

Bommanahalli Babu : ವಿಪಕ್ಷಗಳಿಗೆ ನಡುಕ ಹುಟ್ಟಿಸಿದ ಸಮಾಜ ಸೇವಕ ಬೊಮ್ಮನ ಹಳ್ಳಿ ಬಾಬು..! #byelection

ನವೆಂಬರ್ 6ರಿಂದ 18 ತಿಂಗಳು ಕಾಮಗಾರಿ

ಬಳ್ಳಾರಿ ರಸ್ತೆಯಲ್ಲಿ ನಾಲ್ಕು ಪಥಗಳ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಕಾಮಗಾರಿ 2026ರ ನವೆಂಬರ್ 6ರಿಂದ ಆರಂಭವಾಗಿ ಮುಂದಿನ 18 ತಿಂಗಳ ಕಾಲ ನಡೆಯಲಿದೆ ಎಂದು ಸಂಚಾರ ಪೊಲೀಸ್ ಪ್ರಕಟಣೆ ತಿಳಿಸಿದೆ.ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಮುಂಚಿತವಾಗಿ ಪ್ರಯಾಣ ಯೋಜನೆ ರೂಪಿಸಿಕೊಳ್ಳುವುದು ಉತ್ತಮ. ವಿಶೇಷವಾಗಿ ವಿಮಾನ ನಿಲ್ದಾಣಕ್ಕೆ ತೆರಳುವವರು ಸಂಚಾರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚುವರಿ ಸಮಯ ಮೀಸಲಿಡಬೇಕು. ಸಂಚಾರ ಪೊಲೀಸರ ಸೂಚನೆಗಳನ್ನು ಪಾಲಿಸಿ, ನಿಗದಿಪಡಿಸಿರುವ ಪರ್ಯಾಯ ಮಾರ್ಗಗಳಲ್ಲೇ ಸಂಚರಿಸುವಂತೆ ಮನವಿ ಮಾಡಲಾಗಿದೆ.

 

Tags: bangalore newsBangalore Traffic UpdateBDABellary Road TrafficBengaluru Airportbengaluru trafficElevated Corridorkarnataka newsMekhri CirclesadashivanagarSanjaynagarTraffic Diversion
Previous Post

ವಿಗ್ರಹ ಮಾರಾಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಮಠಕ್ಕೆ ಬೀಗ ಹಾಕಿ ಸ್ವಾಮೀಜಿ ನಾಪತ್ತೆ

Related Posts

ವಿಗ್ರಹ ಮಾರಾಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಮಠಕ್ಕೆ ಬೀಗ ಹಾಕಿ ಸ್ವಾಮೀಜಿ ನಾಪತ್ತೆ
ಕರ್ನಾಟಕ

ವಿಗ್ರಹ ಮಾರಾಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಮಠಕ್ಕೆ ಬೀಗ ಹಾಕಿ ಸ್ವಾಮೀಜಿ ನಾಪತ್ತೆ

by Shivakumar
November 5, 2026
0

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾಳೆಕುದ್ರು ಮಠದಲ್ಲಿ ಪೂಜಿಸಲ್ಪಡುತ್ತಿದ್ದ ಪುರಾತನ ವಿಗ್ರಹಗಳನ್ನು ಮಾರಾಟ ಮಾಡಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಮಠದ ಸ್ವಾಮೀಜಿ ಹಾಗೂ ಸಿಬ್ಬಂದಿ ವಿರುದ್ಧ...

Read moreDetails
State Cabinet gives the green signal for several projects, including ₹20000 crore for road development and the introduction of robotic surgery!

ರಾಜ್ಯದಲ್ಲಿ ರಸ್ತೆ ಅಭಿವೃದ್ಧಿಗೆ ₹20,000 ಕೋಟಿ, ರೋಬೋಟಿಕ್ ಸರ್ಜರಿ ಸೇರಿ ಹಲವು ಯೋಜನೆಗಳಿಗೆ ಸಚಿವ ಸಂಪುಟ ಗ್ರೀನ್ ಸಿಗ್ನಲ್ ! 

November 5, 2026
Kannada is the only language that views a human being as a human being: T.S. Nagabharana

ಮನುಷ್ಯನನ್ನು ಮನುಷ್ಯನಂತೆ ಕಾಣುವ ಏಕೈಕ ಭಾಷೆ ಕನ್ನಡ: ಟಿ.ಎಸ್. ನಾಗಾಭರಣ

November 5, 2026
Rahul Gandhi’s style is ‘no data, only commotion’: BJP national spokesperson Sambit Patra launches an attack

ರಾಹುಲ್ ಗಾಂಧಿ ಅವರದ್ದು ‘ನೋ ಡಾಟಾ, ಓನ್ಲಿ ಗಲಾಟ’: ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ವಾಗ್ದಾಳಿ

November 5, 2026
Are you doing your Diwali shopping using a credit card? If so, don't forget these 4 precautions!

ಕ್ರೆಡಿಟ್ ಕಾರ್ಡ್ ಬಳಸಿ ದೀಪಾವಳಿ ಶಾಪಿಂಗ್ ಮಾಡುತ್ತಿದ್ದೀರಾ? ಹಾಗಾದರೆ ಈ 4 ಎಚ್ಚರಿಕೆಗಳನ್ನು ಮರೆಯದಿರಿ!

November 5, 2026
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada