ಸಿಎಂ ಸಿದ್ದರಾಮಯ್ಯ ಚುನಾವಣಾ ಪ್ರಚಾರದ ವೇಳೆ ಗನ್ ಜೊತೆಗೆ ಬಂದು ಸಿಎಂಗೆ ಹಾರ ಹಾಕಿರುವ ಘಟನೆ ನಡೆದಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಪ್ರಚಾರದ ವೇಳೆ ಭೈರಸಂದ್ರದ ಪ್ರಚಾರದ ವೇಳೆ ಘಟನೆ ನಡೆದಿದೆ. ಸೊಂಟದಲ್ಲಿ ಗನ್ ಇಟ್ಟುಕೊಂಡು ಬಂದವನು ಕ್ಯಾಂಟರ್ ಮೇಲೇರಿ ಸಿಎಂ ಸಿದ್ದರಾಮಯ್ಯಗೆ ಹಾರ ಹಾಕಿದ್ದಾನೆ. ಆತನ ಬಳಿ ಗನ್ ಇದ್ದರೂ ಪೊಲೀಸರು ಗಮನಿಸಿಲ್ಲ ಅನ್ನೋದು ವಿಶೇಷ.

ಚುನಾವಣಾ ಘೋಷಣೆ ಆದ ಬಳಿಕ ಲೈಸೆನ್ಸ್ ಗನ್ ಇದ್ದರೂ ಪೊಲೀಸ್ ಠಾಣೆಗೆ ತಂದು ಒಪ್ಪಿಸಬೇಕು. ಆದರೆ ಇಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಪೊಲೀಸರಿಗೆ ಒಪ್ಪಿಸಿಲ್ಲ ಅನ್ನೋದ್ರ ಜೊತೆಗೆ ಸೊಂಟದಲ್ಲಿ ಗನ್ ಇಟ್ಟುಕೊಂಡು ಸಿಎಂ ಎದುರಿಗೆ ಬಂದಿದ್ದಾರೆ. ಅಷ್ಟು ಸಾಲದು ಎಂಬಂತೆ ಸಿಎಂ ಸಿದ್ದರಾಮಯ್ಯಗೆ ಹಾರ ಹಾಕಿದ್ದಾರೆ. ಇದು ಭದ್ರತಾ ವೈಫಲ್ಯ ಪ್ರಕರಣವಾಗಿದೆ.
ಸಿಎಂ ಸಿದ್ದರಾಮಯ್ಯ ಚುನಾವಣಾ ಪ್ರಚಾರದ ವೇಳೆ ಹಾರ ಹಾಕುವ ವ್ಯಕ್ತಿಯನ್ನು ರಿಯಾಜ್ ಎಂದು ಗುರ್ತಿಸಲಾಗಿದೆ. ಎಲೆಕ್ಷನ್ ಟೈಮ್‌ನಲ್ಲಿ ಗನ್ ಸರೆಂಡರ್ ಮಾಡದೆ ಇರಲು ಪರ್ಮಿಷನ್ ಪಡೆದಿದ್ದ ಎನ್ನಲಾಗಿದೆ. ಜೀವಭಯವಿದೆ ಅಂತಾ ಅರ್ಜಿ ಹಾಕಿ ಗನ್ ಸರೆಂಡರ್ ಮಾಡದೆ ಇರಲು ಒಪ್ಪಿಗೆ ಪಡೆದುಕೊಂಡಿದ್ದ. ಗನ್ ಸರೆಂಡರ್ ಮಾಡದಿರಲು ಪರ್ಮೀಷನ್ ಪಡೆದಿದ್ದ ರಿಯಾಜ್, ಸಿಎಂ ಬಳಿಗೆ ಹೋಗುವಾಗ ಗನ್ ತೆಗೆದುಕೊಂಡು ಹೋಗಬಾರದಿತ್ತು ಎನ್ನುವುದು ಪೊಲೀಸ್ ಮೂಲಗಳ ಮಾಹಿತಿ.
Z ಸೆಕ್ಯುರಿಟಿ ಭದ್ರತೆ ಹೊಂದಿರುವ ಸಿಎಂ ಸಿದ್ದರಾಮಯ್ಯ ಬಳಿಗೆ ಬರುವವರನ್ನ ತಪಾಸಣೆ ನಡೆಸಿ ಬಿಡಬೇಕಿತ್ತು. ಅದೂ ಅಲ್ಲದೆ ಗನ್ ಲೈಸೆನ್ಸ್ ಪಡೆದ ವ್ಯಕ್ತಿ ಸಾರ್ವಜನಿಕವಾಗಿ ಪ್ರದರ್ಶನ ಮಾಡುವಂತಿಲ್ಲ. ಹೀಗಾಗಿ ರಿಯಾಜ್ ಗನ್ ಮುಟ್ಟುಗೋಲು ಹಾಕಿಕೊಳ್ಳುವಂತೆ ಡಿಸಿಪಿಗೆ ಸೂಚನೆ ಕೊಡಲಾಗಿದೆ. ರಿಯಾಜ್ ಗನ್ ಸೀಜ್ ಮಾಡುವಂತೆ ಹಿರಿಯ ಅಧಿಕಾರಿಗಳು ದಕ್ಷಿಣ ವಿಭಾಗ ಡಿಸಿಪಿಗೆ ಸೂಚನೆ ಬಂದಿದೆ ಎನ್ನಲಾಗಿದೆ.







