ಗರ್ಭವಸ್ಥೆಯಲ್ಲಿ ಹೆಣ್ಣು ಮಕ್ಕಳು ತಮ್ಮ ಆರೋಗ್ಯ ಮಾತ್ರವಲ್ಲದೆ ಮಗುವಿನ ಆರೋಗ್ಯದ ಬಗ್ಗೆ ಕೂಡ ಕಾಳಜಿಯನ್ನು ವಹಿಸುವುದು ಉತ್ತಮ. ಅದರಲ್ಲೂ ಸರಿಯಾದ ರೀತಿಯಲ್ಲಿ ಪೋಷಕಾಂಶಗಳು ಸಿಕ್ಕರೆ ಮಗುವಿನ ಬೆಳವಣಿಗೆಗೆ ಸಹಾಯಕಾರಿಯಾಗುತ್ತದೆ. ಅದ್ರಲ್ಲೂ ಮಗುವಿನ ತೂಕ ಹೆಚ್ಚಾಗಲು ಸಹಾಯಕಾರಿಯಾಗುವಂತ ಈ ಪ್ರದಾರ್ಥವನ್ನು ತಪ್ಪದೆ ಸೇವಿಸಬೇಕು.!

ಹಣ್ಣುಗಳು
ಗರ್ಭಾವಸ್ಥೆಯಲ್ಲಿ ಹಣ್ಣುಗಳನ್ನ ಸೇವಿಸುವುದು ಅತ್ಯಂತ ಅವಶ್ಯಕ ಅದರಲ್ಲೂ ಬಾಳೆಹಣ್ಣು ಸೇಬು ಹಾಗೂ ಬೆರಿ ಹಣ್ಣುಗಳನ್ನ ತಪ್ಪದೇ ಸೇವಿಸಬೇಕು. ಕಾರಣ ಇವುಗಳಲ್ಲಿ ಪೊಟ್ಯಾಶಿಯಂ , ಕಾರ್ಬೋಹೈಡ್, ಪ್ಲೋಲೆಟ್ ಮತ್ತು ಫೈಬರ್ ಅಂಶ, ಆಂಟಿ ಆಕ್ಸಿಡೆಂಟ್ ಪ್ರಾಪರ್ಟಿ ಅಧಿಕವಾಗಿರುತ್ತದೆ ಮತ್ತು ಹೆಲ್ದಿ ಬ್ಲಡ್ ಶುಗರ್ ಅನ್ನ ಇದು ಮೇಂಟೈನ್ ಮಾಡುತ್ತದೆ.

ಡೈರಿ ಉತ್ಪನ್ನಗಳು
ಡೈರಿ ಉತ್ಪನ್ನಗಳು ಅಂದ್ರೆ ಮುಖ್ಯವಾಗಿ ಹಾಲು ಮೊಸರು ತುಪ್ಪ ಹಾಗೂ ಚೀಸ್ ಸೇವಿಸುವುದು ಒಳ್ಳೆಯದು. ಇದರಲ್ಲಿ ಕ್ಯಾಲ್ಸಿಯಂ ಅಂಶ ಹಾಗೂ ಪ್ರೋಟೀನ್ ಅಂಶ ಅಧಿಕವಾಗಿರುತ್ತದೆ. ಹಾಲಿನಲ್ಲಿರುವಂತಹ ವಿಟಮಿನ್ ಡಿ ಹಾಗೂ ವಿಟಮಿನ್ b12 ಅಂಶ ಮಗುವಿನ ಮೂಳೆ ಬೆಳವಣಿಗೆಗೆ ಸಹಾಯಕಾರಿ. ಮತ್ತು ಮೊಸರಿನಲ್ಲಿರುವಂತಹ ಪ್ರೊಬಯಟಿಕ್ ಅಂಶ ಮಗುವಿನ ಬೆಳವಣಿಗೆ ಹಾಗೂ ಉತ್ತಮ.

ನಟ್ಸ್ ಅಂಡ್ ಸೀಡ್ಸ್
ಬಾದಾಮಿ,ವಾಲ್ನಟ್ ಮತ್ತು ಚಿಯಾ ಸೀಡ್ಸ್ ನ ಸೇವನೆ ಒಳ್ಳೆಯದು. ಇವುಗಳಲ್ಲಿ ಪೌಷ್ಟಿಕ-ದಟ್ಟವಾದ ಆಹಾರಗಳಾಗಿವೆ, ಅವು ಭ್ರೂಣದ ಬೆಳವಣಿಗೆ ಅಗತ್ಯವಾದ ಜೀವಸತ್ವಗಳು, ಖನಿಜಗಳು ಮತ್ತು ಆರೋಗ್ಯಕರ ಕೊಬ್ಬನ್ನು ಒದಗಿಸುತ್ತವೆ.