ಗರ್ಭಿಣಿಯಾಗಿದ್ದಾಗ ತಮ್ಮ ಬಗ್ಗೆ ತಾವು ಕಾಳಜಿ ವಹಿಸುವುದು ಅತ್ಯಂತ ಅವಶ್ಯಕ.ಅದರಲ್ಲೂ ಆಹಾರದ ಬಗ್ಗೆ ಹೆಚ್ಚು ಕೇರ್ ತೆಗೆದುಕೊಳ್ಳುವುದು ಉತ್ತಮ..ಹಾಗೂ ತಾಯಿ ಯಾವ ಆಹಾರವನ್ನ ಸೇವಿಸ್ತಾಳೋ, ಅದರಲ್ಲಿರುವ ಪೋಷಕಾಂಶಗಳು ಮಗುವಿನ ಬೆಳವಣಿಗೆಯ ಮೇಲೆ ಪ್ರಭಾವವನ್ನು ಬೀರುತ್ತದೆ. ಹಾಗಾಗಿ ಆರೋಗ್ಯ ಮತ್ತು ಆಹಾರದ ಮೇಲೆ ಹೆಚ್ಚು ಕಾಳಜಿಯನ್ನ ವಹಿಸಬೇಕು.ಈ ಸಮಯದಲ್ಲಿ ಹೆಚ್ಚಿನ ಮಟ್ಟದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದು ಉತ್ತಮ..ಗರ್ಭಿಣಿಯಾದ ೧-೧೨ ವಾರದ ತನಕ ಯಾವ ಫುಡ್ ಸೇವಿಸುವುದು ಉತ್ತಮ ಅನ್ನುವ ಮಾಹಿತಿ ಹೀಗಿದೆ..
ಫೋಲೇಟ್ ಭರಿತ ಆಹಾರಗಳು
ಲೀಫಿ ಗ್ರೀನ್ಸ್ ವೆಜಿಟೆಬಲ್ಸ್ ಪಾಲಕ್, ಕೇಲ್, ಕೊಲಾರ್ಡ್ ಸೇವಿಸುವುದು ಉತ್ತಮ. ದ್ವಿದಳ ಕಾಳುಗಳು ಕಪ್ಪು ಬೀನ್ಸ್ ಮಸೂರ ದಾಲ್, ಕಡಲೆ. ಸಿಟ್ರಸ್ ಅಂಶ ಇರುವಂತಹ ಕಿತ್ತಳೆ, ದ್ರಾಕ್ಷಿಹಣ್ಣು, ನಿಂಬೆ,ಸ್ಟ್ರಾಬೆರಿ ಹಾಗೂ ಮುಖ್ಯವಾಗಿ ಆವಕಾಡೊಗಳನ್ನು ಸೇವಿಸಿ.
ಪ್ರೋಟೀನ್ ಅಂಶ ಹೆಚ್ಚಿರುವ ಪದಾರ್ಥಗಳು
ಡೈರಿ ಪ್ರಾಡಕ್ಟ್ ಆದಂತಹ ಹಾಲು, ಮೊಸರು ಪನ್ನೀರ್ ಬೆಣ್ಣೆ, ತುಪ್ಪ. ಮೀನು ಮತ್ತು ಚಿಕನ್ ನಲ್ಲೂ ಕೂಡ ಪ್ರೋಟೀನ್ ಅಂಶ ಹೆಚ್ಚಿರುತ್ತದೆ. ನಟ್ಸ್ ಮತ್ತು ಸೀಟ್ಸ್ ಅಂತ ಹೋದಾಗ ಅದರಲ್ಲಿ ಬಾದಾಮಿ,ಸೂರ್ಯಕಾಂತಿ ಬೀಜಗಳು ,ಹಾಗೂ ಚಿಯಾ ಸೀಡ್ಸ್ ನ ಸೇವಿಸಬಹುದು.
ಕಬ್ಬಿನಾಂಶ
ಗರ್ಭಿಣಿಯರು ಸೇವಿಸುವ ಆಹಾರದಲ್ಲಿ ಕಬ್ಬಿನಾಂಶ ಕೂಡ ಹೆಚ್ಚಿರಬೇಕು. ಕಬ್ಬಿನಾಂಶ ದೇಹದಲ್ಲಿ ಜಾಸ್ತಿ ಆಗಬೇಕು ಅಂದರೆ ಉತ್ತಮ ರೆಡ್ ಮೀಟ್ ಹೆಚ್ಚಿನ ಮಟ್ಟದಲ್ಲಿ ತಿನ್ನಬೇಕು. ಹಾಗೂ ಸಾಲ್ಮನ್,ಪೋರ್ಕ್ ಸೇವಿಸುವುದು ಒಳ್ಳೆಯದು.