ಅರಬ್ಬಿ ಸಮುದ್ರದಲ್ಲಿ ವಾಯುಬಾರ ಕುಸಿತದಿಂದ ತೌಕ್ತೆ ಚಂಡಮಾರುತದ ಪ್ರಭಾವ ಕರ್ನಾಟಕದ ಮೇಲೂ ಬೀರಿದ್ದು, ಕರಾವಳಿ ಮತ್ತು ಮಲೆನಾಡುಭಾಗದಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದೆ. ಜೊತೆಗೆ ರೆಡ್ ಅಲರ್ಟ್ ಕೂಡ ಘೋಷಣೆ ಮಾಡಲಾಗಿದೆ. ಜಲಾಶಯಗಳ ನದಿದಂಡೆ ಪ್ರದೇಶದಲ್ಲಿ ನೆಲೆನಿಂತ ಜನರಿಗೆ ಎಚ್ಚರಿಕೆ ನೀಡಲಾಗಿದ್ದು, ಮೀನುಗಾರರಿಗೆ ಒಂದು ವಾರಗಳಕಾಲ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಈ ಮಧ್ಯೆ ಉಡುಪಿಯ ಕಾಪುವಿನಲ್ಲಿ ಸಮುದ್ರ ಮಧ್ಯೆ ಬೋಟ್ ಒಂದು ಸಿಲುಕಿಗೊಂಡಿದ್ದು, ಅದರಲ್ಲಿದ್ದ 9 ಜನ ಸಿಬ್ಬಂದಿಗಳು ಅಪಾಯದಲ್ಲಿದ್ದಾರೆ.
ಸಮುದ್ರದ ದೈತ್ಯ ಅಲೆಗಳ ಹೊಡೆತಕ್ಕೆ ಬಂಡೆ ಮಧ್ಯೆ ಸಿಲುಕಿದ ಬೋಟ್ ಮುಳುಗುವ ಅಪಾಯದಲ್ಲಿದ್ದು, ಕಡಲು ಪ್ರಕ್ಷುಬ್ಧಗೊಂಡ ಕಾರಣ ರಕ್ಷಣಾ ಕಾರ್ಯಚರಣೆಗೂ ಅಡಿಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಬೋಟ್‌ನಲ್ಲಿ ಒಟ್ಟು 9 ಜನ ಸಿಬ್ಬಂದಿಗಳಲ್ಲಿದ್ದು, ಪ್ರಾಣಾಪಾಯದಲ್ಲಿರುವ ಅವರು ವಿಡಿಯೋ ಮಾಡಿ ತಕ್ಷಣ ನಮ್ಮನ್ನು ರಕ್ಷಿಸುವಂತೆ ಅಂಗಲಾಚಿಕೊಂಡಿದ್ದಾರೆ. ಏರ್‌ಲಿಫ್ಟ್ ಮೂಲಕ ಸಿಬ್ಬಂದಿಯನ್ನು ರಕ್ಷಿಸುವಂತೆ ಕೊಚ್ಚಿಯ ಕೋಸ್ಟ್ ಗಾರ್ಡ್ ಕಚೇರಿಗೆ ಮನವಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.