
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಡಿ ಗ್ಯಾಂಗ್‌ನ 16ನೇ ಆರೋಪಿ ಕೇಶವಮೂರ್ತಿಗೆ ಜಾಮೀನು ಸಿಕ್ಕಿದೆ. ಈ ಮೂಲಕ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮೊದಲ ಜಾಮೀನು ಸಿಕ್ಕಂತಾಗಿದೆ. ಕೇಶವಮೂರ್ತಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಕೇಶವಮೂರ್ತಿ ಪರ ವಕೀಲ ರಂಗನಾಥ್ ರೆಡ್ಡಿ ವಕಾಲತ್ತು ವಹಿಸಿದ್ದರು. ಪ್ರಕರಣದಲ್ಲಿ 16ನೇ ಆರೋಪಿ ಆಗಿರುವ ಕೇಶವಮೂರ್ತಿ ವಿರುದ್ಧ ಸಾಕ್ಷಿ ನಾಶ ಆರೋಪ ಕೇಳಿಬಂದಿತ್ತು.
ಜಾಮೀನು ನೀಡಲು ಒಬ್ಬ ಶ್ಯೂರಿಟಿ ಹಾಗೂ ಸಾಕ್ಷಿ ನಾಶಪಡಿಸದಂತೆ ಕೋರ್ಟ್ ಸೂಚನೆ ನೀಡಿದೆ. (Darshan Thoogudeepa)

ಬೆಂಗಳೂರು ಮೂಲದ ಕೇಶವಮೂರ್ತಿ, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪೊಲೀಸರಿಗೆ ಶರಣಾಗಿದ್ದನು. ಆ ಬಳಿಕ ಕೊಲೆ ಕೇಸ್‌ನಲ್ಲಿ ವಿಚಾರಣೆ ನಡೆಸಿದಾಗ ದರ್ಶನ್ ಹೆಸರನ್ನು ಹೇಳಿದ್ದೇ ಕೇಶವಮೂರ್ತಿ ಎನ್ನಲಾಗಿದೆ. ಶರಣಾಗತಿ ಬಳಿಕ ದರ್ಶನ್ ಹೆಸರು ಹೇಳಿದ್ದ ಕೇಶವ ಮೂರ್ತಿ, ಕೊಲೆ ಕೇಸ್‌ನಲ್ಲಿ ದರ್ಶನ್ (Darshan) ಲಿಂಕ್ ಬಾಯ್ಬಿಟ್ಟಿದ್ದನು ಎನ್ನಲಾಗಿದೆ.
