
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಮತ್ತೆ ಇಬ್ಬರು ಆರೋಪಿಗಳಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.ಪ್ರಕರಣ A15 ಕಾರ್ತಿಕ್ ಹಾಗೂ A17 ಆರೋಪಿ ನಿಖಿಲ್ಗೆ ಹೈಕೋರ್ಟ್ ಜಾಮೀನು ನೀಡಿದೆ. ಸಾಕ್ಷಿಗಳಿಗೆ ಬೆದರಿಕೆ ಹಾಕದಂತೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಕೊಲೆ ಕೇಸ್ನಲ್ಲಿ ಮೊದಲು A-16 ಕೇಶವ ಮೂರ್ತಿ ಎಂಬುವವನಿಗೆ ಕೋರ್ಟ್ ಜಾಮೀನು ನೀಡಿದೆ. ಕೊಲೆ ಕೇಸ್ನಲ್ಲಿ ಈ ಮೂವರ ಪಾತ್ರವಿಲ್ಲ. ಹಣದ ಆಸೆಗೆ ಹೋಗಿ ಪೊಲೀಸರಿಗೆ ಸರೆಂಡರ್ ಆಗಿದ್ದಾರೆ ಎಂದು ಆರೋಪಿಗಳ ಪರ ವಕೀಲರಾದ ರಂಗನಾಥ್ ರೆಡ್ಡಿ ಅವರು ವಾದ ಮಂಡಿಸಿದ್ದಾರೆ.
ಮೇಲ್ನೋಟಕ್ಕೆ ಜಾಮೀನು ಮಂಜೂರು ಮಾಡಬಹುದು ಎಂದು ವಿಶೇಷ ಅಭಿಯೋಜಕರೂ ಸಹ ಜಾಮೀನು ಮಂಜೂರಿಗೆ ಒಪ್ಪಿಗೆ ನೀಡಿದ್ದಾಗಿ ರಂಗನಾಥ್ ರೆಡ್ಡಿ ಅವರು ತಿಳಿಸಿದರು. ಈ ಜಾಮೀನು ಮಂಜೂರಾತಿಗಳ ಸಾಮ್ಯತೆ ಆಧಾರದ ಮೇರೆಗೆ ಉಳಿದ ಆರೋಪಿಗಳ ಜಾಮೀನು ಬಗ್ಗೆ ಮುಂದುವರಿಯಲಾಗುವುದು ಎಂದರು.









