ಮಹಾರಾಷ್ಟ್ರ ಪುಣೆ ಜಿಲ್ಲೆಯ ಪಿಂಪ್ರಿ-ಚಿಂಚ್ವಾಡ್ ಪಟ್ಟಣದ ಚಿಲ್ಲಿ ಪ್ರದೇಶದ ಪೂರ್ಣ ನಗರದಲ್ಲಿರುವ ಪೂಜಾ ಹೈಟ್ಸ್ ಕಟ್ಟಡದಲ್ಲಿ ಬುಧವಾರ (ಆಗಸ್ಟ್ 30) ಅಗ್ನಿ ದುರಂತ ಸಂಭವಿಸಿದೆ ಒಂದೇ ಕುಟುಂಬದ ನಾಲ್ವರು ಮೃತದ್ದಾರೆ.
ಮುಂಜಾನೆ 5 ಗಂಟೆ ಸುಮಾರಿಗೆ ವಸತಿ ಕಟ್ಟಡದ ನೆಲ ಮಹಡಿಯಲ್ಲಿರುವ ಎಲೆಕ್ನಿಕ್ ಹಾರ್ಡ್ವೇರ್ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
‘ಮೃತರಲ್ಲಿ ಇಬ್ಬರು ಬಾಲಕರು ಇದ್ದಾರೆ. ನಾಲ್ವರೂ ಹಾರ್ಡ್ವೇರ್ ಅಂಗಡಿಯಲ್ಲೇ ಮಲಗಿದ್ದರು. ಮೃತದೇಹಗಳನ್ನು ಹೊರತೆಗೆಯಲಾಗಿದೆ’ಎಂದು ಪಿಂಪ್ರಿ ಚಿಂಚ್ವಾಡ್ ಮುನ್ಸಿಪಲ್ ಕಾರ್ಪೊರೇಶನ್ನ ಅಗ್ನಿಶಾಮಕ ಅಧಿಕಾರಿ ತಿಳಿಸಿದ್ದಾರೆ.
ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅನಾಹುತ ಸಂಭವಿಸಿರುಬಹುದು ಎಂದು ಶಂಕಿಸಲಾಗಿದೆ. ಆದರೂ ತನಿಖೆ ನಡೆಸಲಾಗುತ್ತಿದ್ದು, ಸದ್ಯ ಬೆಂಕಿಯನ್ನು ಸಂಪೂರ್ಣ ನಂದಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರನ್ನು ಚಿಮ್ಮಾರಾಮ್ ಚೌಧರಿ (48), ನಮ್ರತಾ ಚಿಮ್ಮಾರಾಮ್ ಚೌಧರಿ (40), ಭವೇಶ್ ಚೌಧರಿ (15) ಮತ್ತು ಸಚಿನ್ ಚೌಧರಿ (13) ಎಂದು ಗುರುತಿಸಲಾಗಿದೆ ಎಂದು ಮಹಾರಾಷ್ಟ್ರ ಅಧಿಕಾರಿಗಳು ತಿಳಿಸಿದ್ದಾರೆ.