ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಕನ್ನಡಪರ ಹೋರಾಟಗಾರರನ್ನು ಗುರಿಯಾಗಿರುವ ಸಂಬಂಧಿಸಿದಂತೆ ಸಾಹಿತಿಗಳು ಮತ್ತು ಹಿರಿಯ ಹೋರಾಟಗಾರರ ನಿಯೋಗ ಇಂದು ಬೆಂಗಳೂರು ನಗರ ಕಮಿಷನರ್ ಕಛೇರಿಗೆ ತೆರಳಿ ದೂರಿನ ಪತ್ರ ನೀಡಿದ್ದಾರೆ.
ಹೌದು, ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿಯು ನೀಡಿದ ದೂರಿನ ಅದಾರದ ಮೇಲೆ FIR ದಾಖಲು ಮಾಡಬೇಕು. ಕುವೆಂಪು ಹೋರಾಟ ಸಮಿತಿ ಕಾರ್ಯಕ್ರಮದಲ್ಲಿ ಮಹಿಳಯರೊಂದಿಗೆ ಅಸಭ್ಯವಾಗಿ ವರ್ತಿಸಿ, ಕುವೆಂಪು-ಅಂಬೇಡ್ಕರ್ ಅವರಬಗ್ಗೆ ಪ್ರಚೋದನಕಾರಿಯಾಗಿ ಮಾತನಾಡಿ ಗಲಭೆಗೆ ಸಂಚು ರೂಪಿಸಿದ್ದ ಮತ್ತು ಹರೀಶ್ ಭೈರಪ್ಪ, ದೀಪು ಗೌಡ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲು ಮಾಡಲು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಸೂಚಿಸಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೂರಿನ ಪತ್ರದಲ್ಲಿ, ವಿಷಯಕ್ಕೆ ಸಂಬಂಧಿಸಿದಂತ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ವಿರುದ್ಧ ಮತ್ತು ನಾಡಗೀತೆಯನ್ನು ವಿರೂಪಗೊಳಿಸಿ ರಾಷ್ಟ್ರಕವಿ ಕುವೆಂಪು ಅವರನ್ನು ಅಪಮಾನಿಸಿ ನಾಡ ಧ್ವಜವನ್ನು ಅವಹೇಳನ ಮಾಡಿದ ರೋಹಿತ್ ಚಕ್ರ ತೀರ್ಥ ಬಂಧನಕ್ಕಾಗಿ ದಿನಾಂಕ 18 6 2022ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಮಾವೇಶಕ್ಕೆ ಬಂದಿದ್ದ ವ್ಯಕ್ತಿಯೊಬ್ಬ ಕಾಲೇಜು ವಿದ್ಯಾರ್ಥಿನಿಯರು ಮತ್ತು ಮಹಿಳೆಯರನ್ನು ಅಸಭ್ಯ ರೀತಿಯ ಪ್ರಶ್ನೆಗಳನ್ನು ಕೇಳಿ ಮುಜುಗರ ಮಾಡುತ್ತಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಭಿಕರು ವ್ಯಕ್ತಿಯ ವರ್ತನೆಯನ್ನು ಪ್ರಶ್ನಿಸಿದ್ದ ಕ್ಕಾಗಿ ಉದ್ಧಟತನದಿಂದ ಪ್ರತ್ಯುತ್ತರ ನೀಡಿದ. ಇದರಿಂದ ಕೆರಳಿದ ಸಾರ್ವಜನಿ ಕರು ಹೊರಾಟವನ್ನು ಹಾಳುಮಾಡಲು ಬಂದಿರುವ ಕಿಡಿಗೇಡಿ ಯನ್ನು ಹೊರಗಡೆ ಹೋಗಲು ಸೂಚಿಸಿದರು ಆತ ನಿರ್ಲಕ್ಷಸಿ ಮತ್ತಷ್ಟು ಗೊಂದಲ ಮೂಡಿಸಲು ಮುಂದಾದ. ಈ ಸಮಯದಲ್ಲಿ ನೆರೆದಿದ್ದವರು ಆತನನ್ನು ವೇದಿಕೆಯಿಂದ ಹೊರಗೆ ದೂಡಲು ಯತ್ನಿಸಿದಾಗ ಗದ್ದಲದ ವಾತಾವರಣ ನಿರ್ಮಾಣವಾಗಿ ಹರೀಶ್ ಭೈರಪ್ಪ ಮತ್ತು ದೀಪು ಗೌಡ ಅದನ್ನು ತಿಳಿಗೊಳಿಸಲು ಮುಂದಾದಾಗ ಕಿಡಿಗೇಡಿ ಇಬ್ಬರನ್ನು ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ. ನಂತರ ಪೊಲೀಸರು ಮಧ್ಯ ಪ್ರವೇಶಿಸಿ ಆತನನ್ನು ಎಳೆದೊಯ್ದರು. ನಂತರ ಆತನ ವಿರುದ್ಧ ಕಾರ್ಯಕ್ರಮ ಮುಗಿದ ನಂತರ ಸಮಿತಿಯ ಪರವಾಗಿ ಫ್ರೀಡಂಪಾರ್ಕ್ ಪೊಲೀಸ್ ಚೌಕಿಯಲ್ಲಿದ್ದ ಉಪ್ಪಾರಪೇಟೆ ಪೊಲೀಸ್ ಠಾಣೆ ಇನ್ಸ ಕ್ಟರ್ ಅವರಿಗೆ ಸುಮಾರು 5 ಗಂಟೆಗೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ಲಿಖಿತವಾಗಿ ದೂರು ನೀಡಲಾಯಿತು. ಉಪ್ಪಾರಪೇಟೆ ಪೊಲೀಸ್ ಠಾಣೆಯ ಇನ್ನೆಕ್ಟರ್ ನನ್ನ ದೂರಿಗೆ ಕೇವಲ ಎನ್ಸಿಆರ್ ಮಾಡಿ ಪ್ರತಿ ನೀಡಿದ್ದಾರೆ.
ಅಪಾರ ಸಂಖ್ಯೆಯಲ್ಲಿ ಸೇರಿದ್ದ ಹೋರಾಟಗಾರರು, ರಾಜಕೀಯ ಪಕ್ಷಗಳ ನಾಯಕರು, ಸ್ವಾಮೀಜಿಗಳು ಇದ್ದ ಕಾರ್ಯಕ್ರಮದ ಸದುದ್ದೇಶ ಹಾಳು ಮಾಡಲು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸರು ನಮ್ಮ ಕಾರ್ಯಕ್ರಮದಲ್ಲಿ ಪರಿಸ್ಥಿತಿ ಹತೋಟಿಗೆ ತರಲು ಮುಂದಾಗಿ ಹಲ್ಲೆಗೊಳಗಾದ ಹರೀಶ್ ಭೈರಪ್ಪ ಮತ್ತು ದೀಪು ಗೌಡ ವಿರುದ್ಧ ಜಾತಿ ನಿಂದನ ಮತ್ತು 307 ಐಪಿಸಿ ಅಡಿಯಲ್ಲಿ ಎಫ್ಐಆರ್ ದಾಖಲು ಮಾಡಿದ್ದಾರೆ. ಕಿಡಿಗೇಡಿ ವ್ಯಕ್ತಿಯ ಹೆಸರು ತೇಜು, ಟಿ ಎಂದು ಆತ ದೂರು ನೀಡಿದ ನಂತರ ತಿಳಿಯಿತು. ಸದರಿ ವ್ಯಕ್ತಿಯ ಪರವಾಗಿ ವಿಧಾನ ಪರಿಷತ್ ಸದಸ್ಯರು, ರಾಜಕಾರಣಿಗಳು, ಆಡಳಿತ ಪಕ್ಷದ ಮುಖಂಡರು ಪೊಲೀಸರ ಮೇಲೆ ಒತ್ತಡ ಹೇರಿ ಕನ್ನಡ ಪರ ಹೋರಾಟಗಾರರ ಮೇಲೆ ಸುಳ್ಳು ಮೊಕದ್ದಮೆ ದಾಖಲು ಮಾಡಿಸಿದ್ದಾರೆ. ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ನಾಡಗೀತ ವಿರೂಪಗೊಳಿಸಿದ ವಿರುದ್ಧ ಪೊಲೀಸ್ ಆಯುಕ್ತರಿಗೆ ಹರೀಶ್ ಭೈರಪ್ಪ ಮೊದಲು ದೂರು ನೀಡಿದ್ದು ಅದರ ಸೇಡಿನ ಭಾಗವಾಗಿ ಸಂವಾದ ಫೇಸ್ಟುಕ್ ಪುಟದಲ್ಲಿ ವಿಡಿಯೋ ಮಾಡುವ ರೋಹಿತ್ ಚಕ್ರತೀರ್ಥ ಈ ಸಂದರ್ಭವನ್ನು ಹರೀಶ್ ವಿರುದ್ಧ ದುರುಪಯೋಗ ಪಡಿಸಿಕೊಂಡಿದ್ದಾರೆ. ದಯಮಾಡಿ ನಾನು ನೀಡಿದ ದೂರಿನ ಆಧಾರದ ಮೇಲೆ ಕೇವಲ ಎನ್ಸಿಆರ್ ಮಾಡಿದ್ದು ತಾವು ಉಪ್ಪಾರಪೇಟೆ ಪೊಲೀಸ್ ಇನ್ಸೆಕ್ಟರ್ ಅವರಿಗೆ ಎಫ್ಐಆರ್ ದಾಖಲು ಮಾಡಿ ನಿಷ್ಪಕ್ಷಪಾತವಾಗಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೂಚಿಸಬೇಕೆಂದು ಕೋರುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.

