ಮೈಸೂರು : ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣ ಸಂಬಂಧ ಈಗಾಗಲೇ ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ FIR ದಾಖಲಾಗಿದೆ.
ಕೇಸ್ ನಂಬರ್ 11/2024 ಅಡಿ ಎಫ್ಐಆರ್ ದಾಖಲಾಗಿದ್ದು, ಸಿದ್ದರಾಮಯ್ಯ ಆರೋಪಿ ನಂಬರ್ 1, ಅವರ ಪತ್ನಿ ಪಾರ್ವತಿ ಅವರನ್ನು A2, ಸಿಎಂ ಬಾಮೈದ ಮಲ್ಲಿಕಾರ್ಜುನ್ ಸ್ವಾಮಿಯನ್ನು A3 ಆರೋಪಿಯನ್ನಾಗಿಸಲಾಗಿದೆ.
ಯಾವೆಲ್ಲಾ ಸೆಕ್ಷನ್ ಅಡಿ FIR?:
ಐಪಿಸಿ 120B :ಕ್ರಿಮಿನಲ್ ಪಿತೂರಿ, ಒಳ ಸಂಚು, ಜೀವಾವಧಿ ಶಿಕ್ಷೆ
ಐಪಿಸಿ 166 : ಸರ್ಕಾರಿ ಸೇವಕನಿಂದ ಕಾನೂನು ಉಲ್ಲಂಘನೆ.
.ಐಪಿಸಿ 403 : ಅಪ್ರಾಮಾಣಿಕವಾಗಿ ಆಸ್ತಿಯ ದುರ್ಬಳಕೆ.
ಐಪಿಸಿ 406 : ಅಪರಾಧಿಕ ನಂಬಿಕೆ ದ್ರೋಹಕ್ಕೆ ಶಿಕ್ಷೆ (3 ವರ್ಷ ಜೈಲು ಅಥವಾ ದಂಡ)
ಐಪಿಸಿ 420 : ವಂಚನೆ (ಮೋಸದಿಂದ ಲಾಭ ಪಡೆಯುವುದು)
ಐಪಿಸಿ 426 : ಕಿಡಿಗೇಡಿತನಕ್ಕೆ ಶಿಕ್ಷೆ (3 ತಿಂಗಳ ಶಿಕ್ಷೆ ಅಥವಾ ದಂಡ)
ಐಪಿಸಿ 465 : ಫೋರ್ಜರಿ
ಐಪಿಸಿ 468 : ಫೋರ್ಜರಿ ಮಾಡಿದ್ದಕ್ಕೆ ಶಿಕ್ಷೆ (5 ವರ್ಷ ಜೈಲು & ದಂಡ)
ಐಪಿಸಿ 340 : ವ್ಯಕ್ತಿಯೊಬ್ಬನನ್ನು ನಿರ್ಬಂಧಿಸುವುದು
ಐಪಿಸಿ 351 : ಮುಂದುವರಿದ್ರೆ ದಾಳಿ ಮಾಡುವ ಭಯ ಹುಟ್ಟಿಸುವುದು
ಐಪಿಸಿ 9 :ಲಂಚ ಸ್ವೀಕಾರ, ಅಥವಾ ಲಂಚ ನೀಡಲು ಶಿಕ್ಷೆ, ವೈಯಕ್ತಿಕ ಪ್ರಭಾವ
ಐಪಿಸಿ 13 : ಸರ್ಕಾರಿ ನೌಕರನಿಂದ ಅಪರಾಧಿಕ ದುರ್ನಡತೆಯಡಿ FIR ದಾಖಲಾಗಿದೆ.