ಹೊಸದಿಲ್ಲಿ: ಕೃಷಿ ಸಾಲ (ಕೆಸಿಸಿ-ಎಂಐಎಸ್‌ಎಸ್) ಮತ್ತು ಬೆಳೆ ವಿಮೆ (ಪಿಎಂಎಫ್‌ಬಿವೈ / ಆರ್‌ಡಬ್ಲ್ಯೂಬಿಸಿಐಎಸ್) ಮೇಲೆ ಕೇಂದ್ರೀಕರಿಸಿದ ಉಪಕ್ರಮಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಗುರುವಾರ ಅನಾವರಣಗೊಳಿಸಿದ್ದಾರೆ.

ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಕಿಸಾನ್ ರಿನ್ ಪೋರ್ಟಲ್ (ಕೆಆರ್‌ಪಿ), ಕೆಸಿಸಿ (ಕಿಸಾನ್ ಕ್ರೆಡಿಟ್ ಕಾರ್ಡ್) ಘರ್‌ಘರ್ ಅಭಿಯಾನ್ ಮತ್ತು ಹವಾಮಾನ ಮಾಹಿತಿ ಜಾಲದ ಡೇಟಾ ಸಿಸ್ಟಮ್ಸ್ (ಡಬ್ಲ್ಯೂಐಎನ್‌ಡಿಎಸ್) ಎಂಬ ಮೂರು ಉಪಕ್ರಮಗಳನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಯೋಜನೆಯ ಪ್ರಯೋಜನಗಳನ್ನು ರಾಷ್ಟ್ರದಾದ್ಯಂತದ ಪ್ರತಿಯೊಬ್ಬ ರೈತರಿಗೆ ವಿಸ್ತರಿಸುವ ಉದ್ದೇಶದಿಂದ ಮಹತ್ವಾಕಾಂಕ್ಷೆಯ ಅಭಿಯಾನ ಮತ್ತು ಈ ಉಪಕ್ರಮಗಳನ್ನು ಜಾರಿಗೊಳಿಸಲಾಗಿದೆ. ಕೃಷಿಯಲ್ಲಿ ಕ್ರಾಂತಿಯನ್ನು ಉಂಟುಮಾಡಲು, ಹಣಕಾಸಿನ ಸೌಲಭ್ಯ ಹೆಚ್ಚಿಸಲು, ಡೇಟಾ ಬಳಕೆಯನ್ನು ಉತ್ತಮಗೊಳಿಸಲು ಕೇಂದ್ರ ಸರಕಾರವು ಈ ಕ್ರಮಗಳನ್ನು ಕೈಗೊಂಡಿದೆ.