ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿರುವ ಹನಿ ಟ್ರ್ಯಾಪ್ (Honey trap) ಕೇಸ್ ವ್ಯಾಪಕ ತಿರುವು ಪಡೆದುಕೊಳ್ಳುತ್ತಿದೆ. ವಿಧಾನಸಭೆ ಅಧಿವೇಶನದಲ್ಲಿ (Session) ಈ ಬಗ್ಗೆ ಪ್ರಸ್ತಾಪಿಸಿದ ಸಚಿವ ರಾಜಣ್ಣ, ಇದುವರೆಗೂ ದೂರು ನೀಡರಿರುವುದು ಅನುಮಾನಕ್ಕೆ ಕಾರಣವಾಗಿದೆ.

ಹೌದು ಈ ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಸಹಕಾರ ಸಚಿವ ಕೆ.ಎನ್ ರಾಜಣ್ಣ (KN Rajanna) ದೂರು ನೀಡ್ತೀನಿ ಎಂದು ಹೇಳಿ ಕೆಲವು ದಿನಗಳ ಕಳೆದರೂ ಇದುವರೆಗೂ ದೂರು ಕೊಟ್ಟಿಲ್ಲ.ಈ ಬಗ್ಗೆ ಮಾತನಾಡಿದ ಅವರು ಹನಿಟ್ರ್ಯಾಪ್ ವಿಚಾರದ ಬಗ್ಗೆ ಸೂಕ್ತ ಸಮಯದಲ್ಲಿ ದೂರು ನೀಡಲಾಗುತ್ತೆ ಎಂದು ಹೇಳಿದ್ದಾರೆ.
ಇನ್ನು ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjuna kharge) ಹಾಗೂ ಸಿಎಂ ಸಿದ್ದರಾಮಯ್ಯರನ್ನು (Cm siddaramaiah) ಭೇಟಿಯಾದ ಬಗ್ಗೆ ಮಾತನಾಡಿದ ಅವರು, ಅದರಲ್ಲಿ ವಿಶೇಷತೆ ಏನಿದೆ..? ಸಹಜವಾಗಿ ಭೇಟಿಯಾಗಿ ಪರಸ್ಪರ ಆರೋಗ್ಯ ವಿಚಾರಣೆ ಮಾಡಿದ್ದಾರೆ ಅಷ್ಟೇ ಎಂದಿದ್ದಾರೆ.

ಇದೇ ವೇಳೆ ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂಬ ಬಗ್ಗೆ ರಿಯಾಕ್ಟ್ ಮಾಡಿದ ಅವರು, ಮುನಿರತ್ನರನ್ನ ಮೊದಲು ಮಂಪರು ಪರೀಕ್ಷೆಗೆ ಒಳಪಡಿಸಲಿ. ಈ ಹಿಂದೆ ಇವರೂ ಅವರ ಜೊತೆಯಲ್ಲಿ ಬಹಳ ಹತ್ತಿರದಲ್ಲಿ ಇದ್ದವರು ಎಂದು ಕೌಂಟರ್ ಕೊಟ್ಟಿದ್ದಾರೆ.












