ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ (Bigboss show) ಮೂಲಕ ತಮ್ಮದೇ ಚಾಪು ಮೂಡಿಸಿ ತುಂಬಾನೇ ಫೇಮಸ್ ಆದಂತಹ ರಜತ್ ಕಿಶನ್ (Rajath kishan) ಹಾಗೂ ವಿನಯ್ ಗೌಡ (Vinay gowda) ಅವರ ವಿರುದ್ಧ ಇದೀಗ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಹೌದು ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರು ಕೂಡ ರೀಲ್ಸ್ ಮಾಡ್ತಾರೆ.ಈ ರೀಲ್ಸ್ ಅಬ್ಬರ ಎಲ್ಲೆಡೆ ಜೋರಾಗಿದೆ..ಸದ್ಯ ವಿನಯ್ ಮತ್ತು ರಜತ್ ಕೂಡ ರೀಲ್ಸ್ ಒಂದನ್ನು ಮಾಡಿದ್ದು..ಎಲ್ಲೆಡೆ ಆ ವಿಡಿಯೋ ವೈರಲ್ ಆಗ್ತಾಯಿದೆ..
ವೈರಲ್ ಆಗ್ತಾ ಇದ್ದಂತೆ ಪೊಲೀಸರ ಗಮನಕ್ಕೆ ಬಂದತ ಈ ವಿಡಿಯೋ FIR ಗು ಕೂಡ ಕಾರಣವಾಗಿದೆ..ಹಾಗಿದ್ರೆ ಅಂತದೇನಿದೆ ಆ ರೀಲ್ಸ್ ನಲ್ಲಿ ಅಂತ ನೋಡ್ತಾ ಹೋದ್ರೆ.. ರಜತ್ ಹಾಗೂ ವಿನಯ್ ಗೌಡ ಲಾಂಗ್ ಮಚ್ಚಿನಂತಹ ಮಾರಕಾಸ್ತ್ರ ಹಿಡಿದು ಸುಮಾರು 18 -20 ಸೆಕೆಂಡ್ಗಳ ರೀಲ್ಸ್ ಮಾಡಿದ್ದಾರೆ.

ಲಾಂಗ್ ಹಿಡಿದು ಪೋಸ್ ಕೊಟ್ಟಿದ್ದಲ್ಲದೆ ಅದನ್ನು ರಜತ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ..ರೀಲ್ಸ್ ಮಾಡಿದ್ದು ತಪ್ಪಲ್ಲ ಆದ್ರೆ ಸಾರ್ವಜನಿಕ ಸ್ಥಳದಲ್ಲಿ ಲಾಂಗ್ ಹಿಡಿದು ಕಾನೂನುಬಾಹಿರವಾಗಿ ಶಾಂತಿಭಂಗದ ದುರ್ವರ್ತನೆ ತೋರಲಾಗಿದೆ ಇದು ಸರಿಯಲ್ಲ ಎಂದು ಇಬ್ಬರ ವಿರುದ್ಧ ಆರ್ಮ್ಸ್ ಆಕ್ಟ್ ಆಡಿ ಕೇಸ್ ದಾಖಲಿಸಿದ್ದಾರೆ.