• Home
  • About Us
  • ಕರ್ನಾಟಕ
Wednesday, July 9, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಇದೀಗ

ಮಧ್ಯಪ್ರದೇಶ | ಸಾಕುನಾಯಿಗಳ ವಿಚಾರಕ್ಕೆ ಜಗಳವಾಡಿ ಗುಂಡಿನ ದಾಳಿ ; ಇಬ್ಬರು ಸಾವು

ಪ್ರತಿಧ್ವನಿ by ಪ್ರತಿಧ್ವನಿ
August 18, 2023
in ಇದೀಗ, ದೇಶ
0
ಮಧ್ಯಪ್ರದೇಶ

Share on WhatsAppShare on FacebookShare on Telegram

ಮಧ್ಯಪ್ರದೇಶ ರಾಜ್ಯದ ಇಂದೋರ್‌ನಲ್ಲಿ ಸಾಕುನಾಯಿಗಳ ವಿಚಾರವಾಗಿ ನೆರೆಹೊರೆಯ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಕೋಪದ ಭರದಲ್ಲಿ ಜಗಳವಾಡುತ್ತಿದ್ದ ಭದ್ರತಾ ಸಿಬ್ಬಂದಿಯೊಬ್ಬರು (ಹೋಮ್ ಗಾರ್ಡ್) ಗುಂಡು ಹಾರಿಸಿದ ಪರಿಣಾಮ ನೆರೆಯ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಶುಕ್ರವಾರ (ಆಗಸ್ಟ್‌ 18) ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಆರೋಪಿಯನ್ನು ಕೃಷ್ಣಾ ಬಾಗ್ ಕಾಲೋನಿಯಲ್ಲಿ ರಾಜ್‌ಪಾಲ್ ಸಿಂಗ್ ರಜಾವತ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ ಎಂದು ವರದಿಯಾಗಿದೆ.

ಮಧ್ಯಪ್ರದೇಶ ಇಂದೋರ್‌ನಲ್ಲಿ ಗುರುವಾರ (ಆಗಸ್ಟ್‌ 17) ಘಟನೆ ನಡೆದಿದೆ. ನೆರೆಹೊರೆಯ ನಿವಾಸಿಗಳಿಬ್ಬರ ಸಾಕುನಾಯಿಗಳ ಕಾದಾಟವು ಅವುಗಳ ಮಾಲೀಕರ ನಡುವಿನ ಮಾತಿನ ಸಮರಕ್ಕೆ ಕಾರಣವಾಗಿದೆ.

ಬ್ಯಾಂಕ್‌ವೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರಾಜ್‌ಪಾಲ್‌ ರಜಾವತ್ ಗುರುವಾರ ರಾತ್ರಿ ಕೋಪದಿಂದ ತನ್ನ ಮೊದಲ ಮಹಡಿ ಮನೆಗೆ ತೆರಳಿ ವಿಮಲ್‌ ಅವರ ಮೇಲೆ ಗುಂಡು ಹಾರಿಸಿದ್ದಾನೆ. ಪರಿಣಾಮ ವಿಮಲ್‌ ಮತ್ತು ಅಲ್ಲಿದ್ದ ರಾಹುಲ್‌ ವರ್ಮ ಎಂಬುವವರಿಗೆ ಗುಂಡು ತಗುಲಿದೆ. ಇಬ್ಬರನ್ನು ತಕ್ಷಣ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಆ ವೇಳೆಗೆ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಮಧ್ಯಪ್ರದೇಶ ಪೊಲೀಸರು ಹೇಳಿದ್ದಾರೆ.

ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ವೈರಲ್‌ ಆಗಿದೆ. ಗುಂಡಿನ ದಾಳಿ ನಡೆಸುವುದಕ್ಕೂ ಮುನ್ನ ರಜಾವತ್‌ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾನೆ. ಬಳಿಕ ಮೇಲಿನಿಂದ ಗುಂಡು ಹಾರಿಸುತ್ತಿರುವುದು ವಿಡಿಯೊದಲ್ಲಿ ಕಾಣಿಸಿದೆ.

Indore Man Shoots Dead 2 Neighbours After Fight Over Pet Dogs https://t.co/LgsLnF16lq via @ndtv

— Anurag Dwary (@Anurag_Dwary) August 18, 2023

ಈ ಸುದ್ದಿ ಓದಿದ್ದೀರಾ? ನೆಹರೂ ಸ್ಮಾರಕ ಮ್ಯೂಸಿಯಂ | ಜೈರಾಮ್ ಟೀಕೆಗೆ ರವಿ ಶಂಕರ್ ತಿರುಗೇಟು

ಸಾಕುನಾಯಿಗಳ ವಿಚಾರಕ್ಕೆ ನೆರೆಹೊರೆಯವರ ನಡುವೆ ಜಗಳ ನಡೆದಿದೆ. ಮಾತಿನ ಚಕಮಕಿ ನಡೆಯುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಕೋಪಗೊಂಡ ರಜಾವತ್, ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದ್ದ. ಬಳಿಕ ಮನೆ ಮುಂದೆ ನೆರೆದಿದ್ದ ಜನರ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಮಧ್ಯಪ್ರದೇಶ ಇಂದೋರ್ನ ಹೆಚ್ಚುವರಿ ಉಪ ಪೊಲೀಸ್‌ ಆಯುಕ್ತ (ಡಿಸಿಪಿ) ಅಮರೇಂದ್ರ ಸಿಂಗ್ ಹೇಳಿದ್ದಾರೆ.

ರಜಾವತ್, ಆತನ ಪುತ್ರ ಸುಧೀರ್‌ ಮತ್ತು ಸಂಬಂಧಿ ಶುಭಂ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ರಜಾವತ್‌ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಅಮರೇಂದ್ರ ಸಿಂಗ್‌ ಹೇಳಿದರು.

Tags: firingIndoreMadhya Pradeshಇಂದೋರ್‌ಗುಂಡಿನ ದಾಳಿಮಧ್ಯಪ್ರದೇಶ
Previous Post

ಬೆಂಗಳೂರಲ್ಲಿ ಇಂದು ಶೂನ್ಯ ನೆರಳು | ಮಾಯವಾಗಲಿದೆ ನಿಮ್ಮ ನೆರಳು?

Next Post

ರೂಪೇಶ್ ಶೆಟ್ಟಿಗೆ ಜೋಡಿಯಾದ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಜಾಹ್ನವಿ

Related Posts

ಶ್ರೀರಾಮುಲುಗೆ ಜನಾರ್ದನ ರೆಡ್ಡಿ ಸಖತ್ ಕೌಂಟರ್ – ಬಳ್ಳಾರಿಯಲ್ಲಿ ಮತ್ತೆ ಶುರು ರೆಡ್ಡಿ ರಾಮುಲು ಕಾಳಗ ! 
Top Story

ಶ್ರೀರಾಮುಲುಗೆ ಜನಾರ್ದನ ರೆಡ್ಡಿ ಸಖತ್ ಕೌಂಟರ್ – ಬಳ್ಳಾರಿಯಲ್ಲಿ ಮತ್ತೆ ಶುರು ರೆಡ್ಡಿ ರಾಮುಲು ಕಾಳಗ ! 

by Chetan
July 9, 2025
0

ಬಳ್ಳಾರಿ ರಾಜಕೀಯ (Bellary plotics) ಮತ್ತೆ ಗರಿಗೆದರಿದೆ. ಗಂಗಾವತಿ ಶಾಸಕ ಜನಾರ್ದನ ರೆಡ್ಡಿ (Janardana reddy) ಮತ್ತೊಂದು ಶ್ರೀರಾಮುಲುಗೆ (Sri ramulu) ರಾಜಕೀಯ ಕೌಂಟರ್ ಕೊಟ್ಟಿದ್ದಾರೆ. ಹೌದು...

Read moreDetails
ಇಂದು ದೇಶಾದ್ಯಂತ ಭಾರತ್ ಬಂದ್ ಗೆ ಕರೆ – ರಾಜ್ಯದಲ್ಲಿ ಹೇಗಿರಲಿದೆ ಬಂದ್ ಬಿಸಿ..? 

ಇಂದು ದೇಶಾದ್ಯಂತ ಭಾರತ್ ಬಂದ್ ಗೆ ಕರೆ – ರಾಜ್ಯದಲ್ಲಿ ಹೇಗಿರಲಿದೆ ಬಂದ್ ಬಿಸಿ..? 

July 9, 2025
ಸಿಎಂ ಚೇಂಜ್ ಕೂಗಿನಿಂದ ತೀವ್ರ ಬೇಸರಗೊಂಡ ಸಿದ್ದು..? ರಾಹುಲ್ ಗಾಂಧಿ ಮುಂದೆ ಬೇಸರ ಹೊರಹಾಕಲಿದ್ಯ ಟಗರು..?! 

ಸಿಎಂ ಚೇಂಜ್ ಕೂಗಿನಿಂದ ತೀವ್ರ ಬೇಸರಗೊಂಡ ಸಿದ್ದು..? ರಾಹುಲ್ ಗಾಂಧಿ ಮುಂದೆ ಬೇಸರ ಹೊರಹಾಕಲಿದ್ಯ ಟಗರು..?! 

July 9, 2025
ಕಾಂಗ್ರೆಸ್ ನಲ್ಲಿ ಜೋರಾಯ್ತು ಸಿಎಂ ಬದಲಾವಣೆ ಕೂಗು – ದೆಹಲಿಯತ್ತ ಹೊರಟೇಬಿಟ್ಟ ಸಿಎಂ ಸಿದ್ದರಾಮಯ್ಯ 

ಕಾಂಗ್ರೆಸ್ ನಲ್ಲಿ ಜೋರಾಯ್ತು ಸಿಎಂ ಬದಲಾವಣೆ ಕೂಗು – ದೆಹಲಿಯತ್ತ ಹೊರಟೇಬಿಟ್ಟ ಸಿಎಂ ಸಿದ್ದರಾಮಯ್ಯ 

July 9, 2025

ಗೋಲ್ಡನ್ ಸ್ಟಾರ್ ಗಣೇಶ್ ಅವರಿಂದ ಅನಾವರಣವಾಯಿತು “ನಿದ್ರಾದೇವಿ Next Door” ಚಿತ್ರದ “ನೀ ನನ್ನ” ಎಂಬ ರೊಮ್ಯಾಂಟಿಕ್ ಸಾಂಗ್.

July 8, 2025
Next Post
ಜಾಹ್ನವಿ

ರೂಪೇಶ್ ಶೆಟ್ಟಿಗೆ ಜೋಡಿಯಾದ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಜಾಹ್ನವಿ

Please login to join discussion

Recent News

Top Story

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಮಾಧ್ಯಮಗೋಷ್ಠಿ

by ಪ್ರತಿಧ್ವನಿ
July 9, 2025
ಶ್ರೀರಾಮುಲುಗೆ ಜನಾರ್ದನ ರೆಡ್ಡಿ ಸಖತ್ ಕೌಂಟರ್ – ಬಳ್ಳಾರಿಯಲ್ಲಿ ಮತ್ತೆ ಶುರು ರೆಡ್ಡಿ ರಾಮುಲು ಕಾಳಗ ! 
Top Story

ಶ್ರೀರಾಮುಲುಗೆ ಜನಾರ್ದನ ರೆಡ್ಡಿ ಸಖತ್ ಕೌಂಟರ್ – ಬಳ್ಳಾರಿಯಲ್ಲಿ ಮತ್ತೆ ಶುರು ರೆಡ್ಡಿ ರಾಮುಲು ಕಾಳಗ ! 

by Chetan
July 9, 2025
ಇಂದು ದೇಶಾದ್ಯಂತ ಭಾರತ್ ಬಂದ್ ಗೆ ಕರೆ – ರಾಜ್ಯದಲ್ಲಿ ಹೇಗಿರಲಿದೆ ಬಂದ್ ಬಿಸಿ..? 
Top Story

ಇಂದು ದೇಶಾದ್ಯಂತ ಭಾರತ್ ಬಂದ್ ಗೆ ಕರೆ – ರಾಜ್ಯದಲ್ಲಿ ಹೇಗಿರಲಿದೆ ಬಂದ್ ಬಿಸಿ..? 

by Chetan
July 9, 2025
ಸಿಎಂ ಚೇಂಜ್ ಕೂಗಿನಿಂದ ತೀವ್ರ ಬೇಸರಗೊಂಡ ಸಿದ್ದು..? ರಾಹುಲ್ ಗಾಂಧಿ ಮುಂದೆ ಬೇಸರ ಹೊರಹಾಕಲಿದ್ಯ ಟಗರು..?! 
Top Story

ಸಿಎಂ ಚೇಂಜ್ ಕೂಗಿನಿಂದ ತೀವ್ರ ಬೇಸರಗೊಂಡ ಸಿದ್ದು..? ರಾಹುಲ್ ಗಾಂಧಿ ಮುಂದೆ ಬೇಸರ ಹೊರಹಾಕಲಿದ್ಯ ಟಗರು..?! 

by Chetan
July 9, 2025
ಕಾಂಗ್ರೆಸ್ ನಲ್ಲಿ ಜೋರಾಯ್ತು ಸಿಎಂ ಬದಲಾವಣೆ ಕೂಗು – ದೆಹಲಿಯತ್ತ ಹೊರಟೇಬಿಟ್ಟ ಸಿಎಂ ಸಿದ್ದರಾಮಯ್ಯ 
Top Story

ಕಾಂಗ್ರೆಸ್ ನಲ್ಲಿ ಜೋರಾಯ್ತು ಸಿಎಂ ಬದಲಾವಣೆ ಕೂಗು – ದೆಹಲಿಯತ್ತ ಹೊರಟೇಬಿಟ್ಟ ಸಿಎಂ ಸಿದ್ದರಾಮಯ್ಯ 

by Chetan
July 9, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಮಾಧ್ಯಮಗೋಷ್ಠಿ

July 9, 2025
ಶ್ರೀರಾಮುಲುಗೆ ಜನಾರ್ದನ ರೆಡ್ಡಿ ಸಖತ್ ಕೌಂಟರ್ – ಬಳ್ಳಾರಿಯಲ್ಲಿ ಮತ್ತೆ ಶುರು ರೆಡ್ಡಿ ರಾಮುಲು ಕಾಳಗ ! 

ಶ್ರೀರಾಮುಲುಗೆ ಜನಾರ್ದನ ರೆಡ್ಡಿ ಸಖತ್ ಕೌಂಟರ್ – ಬಳ್ಳಾರಿಯಲ್ಲಿ ಮತ್ತೆ ಶುರು ರೆಡ್ಡಿ ರಾಮುಲು ಕಾಳಗ ! 

July 9, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!