ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳಿ ಇದೀಗ ಬಿಜೆಪಿ ಶಾಸಕ ಪ್ರೀತಂ ಗೌಡ ಹಾಗು ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ನಡುವಿನ ವಾಕ್ಸಮರಕ್ಕೆ ಎಡೆ ಮಾಡಿಕೊಟ್ಟಿದೆ.
ಜಿಲ್ಲಾ ಕೇಂದ್ರವನ್ನು ಶತಾಯ ಗತಾಯ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲೇ ಬೇಕೆಂದು ಹಠಕ್ಕೆ ಬಿದ್ದಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಲಿ ನಡೆಯುತ್ತಿರುವ ಅಭಿವೃದ್ದಿ ಕಾಮಗಾರಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಾಸನ ಜಿಲ್ಲೆಯ ಚನ್ನಪಟ್ಟನದ ಕೆರೆ ಅಭಿವೃದ್ದಿಗೆ 144 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿತ್ತು. ಆದರೆ, ಆ ಹಣವನ್ನ ಆರು ಕೆರೆ, ಎಂಟು ಉದ್ಯಾನವನಗಳ ಅಭಿವೃದ್ದಿಗೆ ಬಳಸಿರುವ ವಿಚಾರ ರೇವಣ್ಣರನ್ನು ಶಾಸಕ ಪ್ರೀತಂ ವಿರುದ್ದ ಕೆರಳುವಂತೆ ಮಾಡಿದೆ.
ಕೆರೆ ವಿಚಾರದಿಂದ ಶುರುವಾಗಿ ತಾಲ್ಲೂಕು ಕಚೇರಿ ದಿಢೀರ್ ನೆಲಸಮ ಮಾಡಿದವರೆಗು ಬಂದು ನಿಂತಿದೆ. ಈ ಮಧ್ಯೆ ಶಾಸಕ ಪ್ರೀತಂ ಗೌಡ ಯಾವುದೇ ಕಾರಣಕ್ಕೂ ಕಾಮಗಾರಿಗಳನ್ನು ನಿಲ್ಲಿಸಲು ಸಾಧ್ಯವಿಲ್ಲ ಕಾಮಗಾರಿಗಳನ್ನು ಮಾಡಿಯೇ ತೀರುತ್ತೇನೆ ಎಂದು ಪ್ರತಿಪಾದಿಸಿದ್ದಾರೆ.
2018-19ರಲ್ಲಿ ಮೈತ್ರಿ ಸರ್ಕಾರ ಇದ್ದ ವೇಳೆ ಜಿಲ್ಲೆಯ ಅಭಿವೃದ್ದಿಗೆ ಅನುದಾನವನ್ನ ಮೀಸಲಿಡಲಾಗಿತ್ತು. ಆ ನಂತರ ಬಂದ ಬಿಜೆಪಿ ಸರ್ಕಾರ ಅನುದಾನವನ್ನ ತಡೆಹಿಡಿದಿತ್ತು ಶಾಸಕ ಪ್ರೀತಂ ಗೌಡ ಸತತ ಪ್ರಯತ್ನದ ಫಲವಾಗಿ ಹಂತಹಂತವಾಗಿ ಅನುದಾನವನ್ನ ಬಿಡುಗಡೆ ಮಾಡಲಾಯಿತ್ತು.

ಸದ್ಯ ಜಿಲ್ಲೆಯಲ್ಲಿ ಮಹಾರಾಜ ಉದ್ಯಾನವನ, ವಿಮಾಣ ನಿಲ್ದಾಣ, ತಾಲ್ಲೂಕು ಕಚೇರಿ ಹಾಗೂ ಟ್ರಕ್ ಟರ್ಮಿನಲ್ ಕಾಮಗಾರಿಗಳಿಗೆ ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಈ ಕುರಿತು ಮಾತನಾಡಿರುವ ಶಾಸಕ ಹೆಚ್.ಡಿ.ರೇವಣ್ಣ ಹಾಸನ ತಾಲ್ಲೂಕಿನ ಎರಡು ಹೋಬಳಿಗಳು ಹೊಳೆನರಸೀಪುರ ಕ್ಷೇತ್ರ ವ್ಯಾಪ್ತಿಗೆ ಬರುವ ಕಾರಣ ಪ್ರಶ್ನೆ ಮಾಡುವ ಹಕ್ಕು ನನ್ನಗಿದೆ ಎಂದು ಹೇಳಿದ್ದಾರೆ.
ಮುಂದುವರೆದು, ಅಭಿವೃದ್ದಿ ಕಾಮಗಾರಿಗಳಿಗೆ ನನ್ನ ವಿರೋಧವಿಲ್ಲ ಸುಸ್ಥಿಯಲ್ಲಿದ್ದ ಕಟ್ಟಡವನ್ನ ಹಣ ಮಾಡಲೆಂದೇ ರಾತ್ರೋ ರಾತ್ರಿ ಕೆಡವಿದ್ದಾರೆ ಜನರ ವಿರೋಧದ ನಡುವೆ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
ಅಭಿವೃದ್ದಿ ಕಾಮಗಾರಿಗಳ ವಿಚಾರದಲ್ಲಿ ಜೆಡಿಎಸ್ನವರು ದುರುದ್ದೇಶದಿಂದ ವಿರೋಧಿಸಿ ರಾಜಕೀಯ ಮಾಡುತ್ತಿದ್ದಾರೆ ನನ್ನ ಕ್ಷೇತ್ರದಲ್ಲಿ ಯಾವ ಅಭಿವೃದ್ದಿ ಕಾಮಗಾರಿಗಳು ಕೈಗೊಳ್ಳಬೇಕು ಎಂಬ ನಿರ್ಧಾರವನ್ನ ಮಾಡುವುದು ನಾನು ಅವರಲ್ಲ ನನ್ನ ಮೇಲೆ ಬಂದಿರುವ ಕಮಿಷನ್ ಆರೋಪ ಆಧಾರರಹಿತ ಎಂದಟು ತಿರುಗೇಟು ನೀಡಿದ್ದಾರೆ.