ಪತ್ನಿಗೆ ಗಂಡ ಹಾಗೂ ಆತನ ಮನೆಯವರಿಂದ ನೀಡುವ ಹಿಂಸಾ ಪ್ರಕರಣದಲ್ಲಿ ಕರ್ನಾಟಕ ದೇಶದಲ್ಲಿ ಅಗ್ರಸ್ಥಾನ ಪಡೆದಿದೆ.
ಬಂದಿದ್ದು ರಾಷ್ಟ್ರೀಯ ಕುಟುಂಬ ಆರೋಗ್ಯ ಇಲಾಖೆಯ ಎನ್‍ಹೆಚ್‍ಎಫ್‍ಎಸ್ ಎಲ್ಲಾ ರಾಜ್ಯಗಳಲ್ಲಿ ನಡೆಸಿದ ಸರ್ವೆಯಲ್ಲಿ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದ್ದು, ಬಿಹಾರವನ್ನೂ ಹಿಂದಿಕ್ಕಿ ಕರ್ನಾಟಕ ಮೊದಲ ಸ್ಥಾನ ಪಡೆದಿರುವುದು ಅಚ್ಚರಿ ಮತ್ತು ಆಘಾತಕಾರಿಯಾಗಿದೆ.

ಎನ್‍ಹೆಚ್‍ಎಫ್‍ಎಸ್ ವರದಿ
ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೆಯಲ್ಲಿ ಹೆಂಡತಿ ಹಿಂಸೆಯಲ್ಲಿ ರಾಜ್ಯ ಮೊದಲು.
ರಾಜ್ಯದ ಶೇ. 48 ರಷ್ಟು ಮಹಿಳೆಯರು ತಮ್ಮ ಪತಿಯಿಂದಲೇ ಹಿಂಸೆಗೆ ಒಳಪಟ್ಟಿರುವ ಅಂಶ ಬಯಲು.
ಬಿಹಾರಗಿಂತ ರಾಜ್ಯದಲ್ಲಿ ಸಂಗಾತಿ ಹಿಂಸೆ ಅಧಿಕ.
ಬಿಹಾರದಲ್ಲಿ ಶೇ. 43ರಷ್ಟು ಮಹಿಳೆಯರಿಗೆ ಸಂಗಾತಿ ಹಿಂಸೆ ಪ್ರಕರಣ.
ಮಾನಸಿಕ, ದೈಹಿಕ ಹಾಗೂ ಲೈಂಗಿಕ ಹಿಂಸೆಗೆ ಒಳಗಾಗುತ್ತಿರುವ ಮಹಿಳೆಯರು.
ಚಿತ್ರಹಿಂಸೆಗೆ ಒಳಪಡುತ್ತಿರುವ ಮಹಿಳೆಯರು.
ತನ್ನ ಪತಿಯಿಂದಲೇ ಪತ್ನಿ ದೈಹಿಕ ಹಲ್ಲೆಗೆ ಒಳಪಡುತ್ತಿರುವ ಅಂಶ ಬಯಲು.
ಸಂಗಾತಿ ಹಿಂಸೆಯಿಂದ ಹಲವು ರೀತಿಯ ಹಲ್ಲೆ, ಗಾಯಗಳಿಗೆ ತುತ್ತಾಗುತ್ತಿರುವುದು ಪತ್ತೆ.
ಯಾವ ರೀತಿಯ ಹಲ್ಲೆ?
ಪತಿಯಿಂದ ವಿವಿಧ ರೀತಿಯ ಹಲ್ಲೆಗೆ ಒಳಪಡುತ್ತಿರುವ ಮಹಿಳೆ.
ಶೇ. 7ರಷ್ಟು ಮಹಿಳೆಯರಿಗೆ ಕಣ್ಣಿನ ಗಾಯ, ಕೈ ಕಾಲು ಮುರಿತ, ಬರೆಯಂತಹ ಹಲ್ಲೆ.
ಶೇ. 6ರಷ್ಟು ಮಹಿಳೆಯರಿಗೆ ತೀವ್ರ ತರದ ಗಾಯ, ಮೂಳೆ ಮುರಿತ, ಹಲ್ಲು ಮುರಿತ.
ಶೇ. 3ರಷ್ಟು ಮಹಿಳೆಯರಿಗೆ ಬೆಂಕಿಯಿಂದ ಸುಡುವ ಚಿತ್ರಹಿಂಸೆ.