ಭಾರತೀಯ ಫುಟ್ಬಾಲ್ ಒಕ್ಕೂಟವನ್ನು ಫೀಫಾ ಅಮಾನತುಗೊಳಿಸಿದೆ. ಇದರ ಬೆನ್ನಲ್ಲೇ ವನಿತೆಯರ ಫೀಫಾ ವಿಶ್ವಕಪ್ ಆತಿಥ್ಯ ಭಾರತದ ಕೈ ತಪ್ಪುವ ಸಾಧ್ಯತೆ ಇದೆ.
ಭಾರತೀಯ ಫುಟ್ಬಾಲ್ ಒಕ್ಕೂಟದ ಪದಾಧಿಕಾರಿಗಳು ನಿಯಮದ ಪ್ರಕಾರ ಕಾರ್ಯ ನಿರ್ವಹಿಸುತ್ತಿಲ್ಲ. ಅಲ್ಲದೇ ಸುಪ್ರೀಂಕೋರ್ಟ್ ನಿಯೋಜಿತ ಪದಾಧಿಕಾರಿಗಳು ಕಾರ್ಯ ನಿರ್ವಹಿಸುತ್ತಿರುವುದು ಸರಿಯಲ್ಲ. ಆದ್ದರಿಂದ ಅಮಾನತು ಮಾಡಲಾಗಿದೆ ಎಂದು ಫೀಫಾ ತಿಳಿಸಿದೆ.

ಇದೇ ವೇಳೆ ಫೀಫಾ ನಿಯಮದ ಪ್ರಕಾರ ಮೂರನೇ ವ್ಯಕ್ತಿ ಅಥವಾ ಸಂಸ್ಥೆ ಸಂಘಟನೆಯ ಆಡಳಿತದಲ್ಲಿ ಮಧ್ಯಪ್ರವೇಶಿಸುವಂತಿಲ್ಲ. ನಿಯಮದ ಪ್ರಕಾರ ಚುನಾಯಿತ ಪದಾಧಿಕಾರಿಗಳು ನೇಮಕ ಆಗಿ ಆಡಳಿತ ನಡೆಸಿದ ನಂತರ ಅಮಾನತು ರದ್ದುಗೊಳಿಸಲಾಗುವುದು ಎಂದು ಫೀಫಾ ಹೇಳಿದೆ.
ಇದೇ ವೇಳೆ ಫೀಫಾ ನಿಯಮದ ಪ್ರಕಾರ ನೂತನ ಪದಾಧಿಕಾರಿಗಳು ಆಯ್ಕೆಯಾಗದೇ ಇದ್ದಲ್ಲಿ ಭಾರತ ಈಗಾಗಲೇ ವಹಿಸಿಕೊಂಡಿರುವ ವನಿತೆಯರ ಫೀಫಾ ವಿಶ್ವಕಪ್ ಟೂರ್ನಿ ಭಾರತದ ಕೈ ತಪ್ಪುವ ಸಾಧ್ಯತೆ ಇದೆ.