• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, August 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಬೆಂಗಳೂರಿನ ಪ್ರತಿಷ್ಠಿತ ಶಾಲೆಯಲ್ಲಿ ಜ್ಚರದ ಆತಂಕ; ಶಾಲೆ ತಾತ್ಕಾಲಿಕ ಬಂದ್! ಯಾವ ಖಾಯಿಲೆ‌?

ಪ್ರತಿಧ್ವನಿ by ಪ್ರತಿಧ್ವನಿ
August 17, 2026
in ಕರ್ನಾಟಕ
0
ಬೆಂಗಳೂರಿನ ಪ್ರತಿಷ್ಠಿತ ಶಾಲೆಯಲ್ಲಿ ಜ್ಚರದ ಆತಂಕ; ಶಾಲೆ ತಾತ್ಕಾಲಿಕ ಬಂದ್! ಯಾವ ಖಾಯಿಲೆ‌?
Share on WhatsAppShare on FacebookShare on Telegram

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಳೆಗಾಲದ ಹಿನ್ನೆಲೆಯಲ್ಲಿ ಜ್ವರ ಹಾಗೂ ಸಾಂಕ್ರಾಮಿಕ ರೋಗಗಳ ಆತಂಕದ ನಡುವೆಯೇ ಶಾಲಾ ಮಕ್ಕಳಲ್ಲಿ H1N1 ಸೋಂಕು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ನಗರದ ಪಾಟರಿ ರಸ್ತೆಯಲ್ಲಿರುವ ಪ್ರತಿಷ್ಠಿತ ಖಾಸಗಿ ಶಾಲೆಯೊಂದರಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 21ಕ್ಕೂ ಅಧಿಕ ಸಿಬ್ಬಂದಿಯಲ್ಲಿ ಜ್ವರ, ಶೀತ ಮತ್ತು ಕೆಮ್ಮಿನಂತಹ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ವರದಿಯಾಗಿದೆ.

ADVERTISEMENT

ಪರಿಸ್ಥಿತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲೆಯ ಕೆಲವು ತರಗತಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಸೋಂಕು ಹರಡುವುದನ್ನು ತಡೆಯಲು ಶಾಲಾ ಆವರಣವನ್ನು ಸ್ಯಾನಿಟೈಸ್ ಮಾಡಲಾಗಿದೆ.

Byrathi Suresh : ಸಿದ್ದರಾಮಯ್ಯ ಇರೋ ಹೋಟೆಲಿಗೆ ಓಡೋಡಿ ಬಂದ ಸಚಿವ ಬೈರತಿ ಸುರೇಶ್..  #pratidhvani

ಶಾಲೆಯಲ್ಲಿ ಸುಮಾರು 2,500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರ ಪೈಕಿ 500ಕ್ಕೂ ಹೆಚ್ಚು ಮಕ್ಕಳಲ್ಲಿ ಅನಾರೋಗ್ಯದ ಲಕ್ಷಣಗಳು ಕಂಡುಬಂದಿವೆ ಎನ್ನಲಾಗಿದೆ. 137 ಮಕ್ಕಳಿಗೆ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಾಲೆಯಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, 15ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ.ಇದೇ ವೇಳೆ ಶಾಲೆಯ 21 ಸಿಬ್ಬಂದಿಯಲ್ಲೂ ಜ್ವರ, ಶೀತ ಮತ್ತು ಕೆಮ್ಮಿನ ಲಕ್ಷಣಗಳು ಕಂಡುಬಂದಿವೆ. ಅನಾರೋಗ್ಯಕ್ಕೀಡಾದವರ ಪೈಕಿ ಇಬ್ಬರು ವಿದ್ಯಾರ್ಥಿಗಳಲ್ಲಿ H1N1 ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ.

H.D. Revanna : ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ರಣತಂತ್ರ..

ಸೋಂಕು ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಆಗಸ್ಟ್ 18ರವರೆಗೆ ಮಾಂಟೆಸ್ಸರಿ ಹಾಗೂ ಪ್ರಾಥಮಿಕ ಶಾಲಾ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. 6ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಮನೆಯಿಂದಲೇ ಆನ್‌ಲೈನ್ ತರಗತಿಗಳನ್ನು ನಡೆಸಲು ವ್ಯವಸ್ಥೆ ಮಾಡಲಾಗಿದೆ.ಜ್ವರ, ಶೀತ ಅಥವಾ ಕೆಮ್ಮಿನಂತಹ ಲಕ್ಷಣಗಳು ಕಂಡುಬರುವ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗದಂತೆ ಸೂಚಿಸಲಾಗಿದೆ.

ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯಲ್ಲಿ ಅನಾರೋಗ್ಯ ಕಾಣಿಸಿಕೊಳ್ಳಲು ಶಾಲೆಯ ಸುತ್ತಮುತ್ತಲಿನ ಬೀದಿಬದಿ ಆಹಾರ ಮಳಿಗೆಗಳ ಅಶುಚಿತ್ವವೂ ಕಾರಣವಾಗಿರಬಹುದು ಎಂದು ಶಾಲಾ ಆಡಳಿತ ಮಂಡಳಿ ಆರೋಪಿಸಿದೆ.ಕಬಾಬ್, ಎಗ್ ರೈಸ್, ಫಾಸ್ಟ್‌ಫುಡ್ ಹಾಗೂ ತಂಪು ಪಾನೀಯ ಮಾರಾಟ ಮಾಡುವ ಅಂಗಡಿಗಳಲ್ಲಿ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ. ಶಾಲೆಯ ಗೋಡೆಗಳ ಪಕ್ಕದಲ್ಲಿ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಪರಿಸರವೂ ಮಲಿನಗೊಂಡಿದೆ ಎಂದು ದೂರಲಾಗಿದೆ.

H. D. Kumaraswamy : ನಿಮ್ಮ ಜಾಹೀರಾತಿನಿಂದ ನಮ್ಮ ಖರ್ಚಾದ್ರೂ ಉಳಿಯುತ್ತೆ ಅದನ್ನೂ ಕೊಟ್ಬಿಡಿ..! #pratidhvani

ಶಾಲಾ ಆವರಣದ ಸುತ್ತಮುತ್ತ ಅನಾರೋಗ್ಯಕರ ಆಹಾರ ಮಾರಾಟದ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಶಾಲಾ ಆಡಳಿತ ಮಂಡಳಿ ಒತ್ತಾಯಿಸಿದೆ. ಶಾಲೆಗಳ ಸುತ್ತಮುತ್ತ ಜಂಕ್‌ಫುಡ್ ಮಾರಾಟಕ್ಕೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಜಿಬಿಎ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.ಸೋಂಕಿನ ಹಿನ್ನೆಲೆಯಲ್ಲಿ ಪೋಷಕರು ಆತಂಕಪಡುವ ಅಗತ್ಯವಿಲ್ಲದಿದ್ದರೂ, ಮಕ್ಕಳಲ್ಲಿ ಜ್ವರ, ಕೆಮ್ಮು, ಶೀತ ಸೇರಿದಂತೆ ಯಾವುದೇ ಲಕ್ಷಣಗಳು ಕಂಡುಬಂದರೆ ಅವರನ್ನು ಶಾಲೆಗೆ ಕಳುಹಿಸದೆ ವೈದ್ಯರ ಸಲಹೆ ಪಡೆಯುವುದು ಸೂಕ್ತ.

Tags: ##bengaluru#BengaluruSchools#Dengue#GBACorporation#H1N1Infection#H1N1Virus#KannadaNew#KarnatakaHealth#MonsoonDiseases#OnlineClasses #HealthDepartment#PublicHealth#SchoolClosed#SwineFlu#ViralFeverBengaluruNewsH1N1HealthAlertkarnatakanewss #BreakingNewsSchoolStudents
Previous Post

ಸಿಎಂ ಡಿಕೆಶಿ ಭೇಟಿ ಮಾಡಿದ ಪ್ರಕಾಶ್ ರಾಜ್; SIR ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಏನೆಲ್ಲಾ ಚರ್ಚೆ?

Next Post

ಸಂದೇಶ್ ಕಂಬೈನ್ಸ್‌ನಿಂದ ಎರಡು ಹೊಸ ಸಿನಿಮಾಗಳ ಘೋಷಣೆ: ತಂದೆಯ ಹುಟ್ಟುಹಬ್ಬಕ್ಕೆ ದುಬಾರಿ ಉಡುಗೊರೆ

Related Posts

ಬಿಡದಿ ಟೌನ್‌ಶಿಪ್ ವಿರೋಧಿಸಿ ಜೆಡಿಎಸ್ ಪ್ರತಿಭಟನೆ: ಬೆಂಗಳೂರಿನಲ್ಲಿ ಸಂಚಾರ ಮಾರ್ಗ ಬದಲಾವಣೆ
ಕರ್ನಾಟಕ

ಬಿಡದಿ ಟೌನ್‌ಶಿಪ್ ವಿರೋಧಿಸಿ ಜೆಡಿಎಸ್ ಪ್ರತಿಭಟನೆ: ಬೆಂಗಳೂರಿನಲ್ಲಿ ಸಂಚಾರ ಮಾರ್ಗ ಬದಲಾವಣೆ

by ಪ್ರತಿಧ್ವನಿ
August 18, 2026
0

ಬೆಂಗಳೂರು: ರಾಜ್ಯ ಸರ್ಕಾರದ ‘ಬಿಡದಿ ಟೌನ್‌ಶಿಪ್’ ಯೋಜನೆ ವಿರೋಧಿಸಿ ಜೆಡಿಎಸ್ ಬುಧವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದೆ. ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸುವ...

Read moreDetails
HMT ಗಡಿಯಾರಗಳ ಇಂಡಿಪೆಂಡೆನ್ಸ್ ಡೇ ಸೇಲ್: ಒಂದೇ ದಿನ 35 ಲಕ್ಷ ರೂ ವಹಿವಾಟು..!

HMT ಗಡಿಯಾರಗಳ ಇಂಡಿಪೆಂಡೆನ್ಸ್ ಡೇ ಸೇಲ್: ಒಂದೇ ದಿನ 35 ಲಕ್ಷ ರೂ ವಹಿವಾಟು..!

August 17, 2026
ದರ್ಶನ್‌ಗೆ ಸೊಳ್ಳೆ ಕಾಟ:‌ ಪರಿಹಾರ ಕೇಳಿದ ದಾಸನಿಗೆ ಸಾಧ್ಯವಿಲ್ಲ ಅಂದ್ರು ಡಿಜಿಪಿ ಅಲೋಕ್‌ ಕುಮಾರ್

ದರ್ಶನ್‌ಗೆ ಸೊಳ್ಳೆ ಕಾಟ:‌ ಪರಿಹಾರ ಕೇಳಿದ ದಾಸನಿಗೆ ಸಾಧ್ಯವಿಲ್ಲ ಅಂದ್ರು ಡಿಜಿಪಿ ಅಲೋಕ್‌ ಕುಮಾರ್

August 17, 2026
ಬಿಜೆಪಿ ರಾಷ್ಟ್ರೀಯ ಘಟಕ ದಿಢೀರ್‌ ಪುನಾರಚನೆ: ಯಾರ್ಯಾರಿಗೆ ಯಾವ ಜವಾಬ್ದಾರಿ..?

ಬಿಜೆಪಿ ರಾಷ್ಟ್ರೀಯ ಘಟಕ ದಿಢೀರ್‌ ಪುನಾರಚನೆ: ಯಾರ್ಯಾರಿಗೆ ಯಾವ ಜವಾಬ್ದಾರಿ..?

August 17, 2026
ಸಂಬರಾಲ ಯೇಟಿ ಗಟ್ಟು ಸೂಟಿಂಗ್‌ ಮುಗೀತು: ಮುಂದಿನ ಸಂಕ್ರಾಂತಿಗೆ ರಿಲೀಸ್

ಸಂಬರಾಲ ಯೇಟಿ ಗಟ್ಟು ಸೂಟಿಂಗ್‌ ಮುಗೀತು: ಮುಂದಿನ ಸಂಕ್ರಾಂತಿಗೆ ರಿಲೀಸ್

August 17, 2026
Next Post
ಸಂದೇಶ್ ಕಂಬೈನ್ಸ್‌ನಿಂದ ಎರಡು ಹೊಸ ಸಿನಿಮಾಗಳ ಘೋಷಣೆ: ತಂದೆಯ ಹುಟ್ಟುಹಬ್ಬಕ್ಕೆ ದುಬಾರಿ ಉಡುಗೊರೆ

ಸಂದೇಶ್ ಕಂಬೈನ್ಸ್‌ನಿಂದ ಎರಡು ಹೊಸ ಸಿನಿಮಾಗಳ ಘೋಷಣೆ: ತಂದೆಯ ಹುಟ್ಟುಹಬ್ಬಕ್ಕೆ ದುಬಾರಿ ಉಡುಗೊರೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada