ಮೈಸೂರು: ನೆರೆಯ ಕೇರಳ ರಾಜ್ಯದಲ್ಲಿ ಹಕ್ಕಿ ಜ್ವರ ವ್ಯಾಪಕವಾಗಿ ಹರಡುತ್ತಿದ್ದು, ಸೋಂಕು ಹರಡಿದ್ದ 6,000 ಕೋಳಿಗಳನ್ನು ಕೊಲ್ಲಲಾಗಿದೆ. ನೆರೆ ರಾಜ್ಯದ ಈ ಘಟನೆ ಕೇರಳದ ಗಡಿ ಪ್ರದೇಶವಾದ ಮೈಸೂರು, ಚಾಮರಾಜನಗರ, ಕೊಡಗು ಸೇರಿದಂತೆ ಇತರೆಡೆ ಭೀತಿ ಉಂಟು ಮಾಡಿದೆ.ರಳದ ಕೊಟ್ಟಾಯಂ ಸೋಂಕು ವ್ಯಾಪಕವಾಗಿ ಆವರಿಸುತ್ತಲೆ ಇದೆ. ಇದರಿಂದ ಕೊಟ್ಟಾಯಂನ ವೇಚೂರು, ಅರ್ಪುಕರ, ನಿಂದೋರ್ ನಲ್ಲಿ ಹಕ್ಕಿ ಜ್ವರವಿದೆ.
ಇದರಿಂದ ಸಾವನ್ನಪ್ಪಿರುವ ಕೋಳಿ ಹಾಗೂ ಬಾತುಕೋಳಿಗಳನ್ನು ಮಧ್ಯಪ್ರದೇಶದ ಭೂಪಾಲ್ ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅನಿಮಲ್ ಡಿಸೀಸ್ ಲ್ಯಾನ್ ಗೆ ಕಳುಹಿಸಲಾಗಿತ್ತು. ಕೋಳಿ, ಬಾತುಕೋಳಿ ಹಾಗೂ ಹಕ್ಕಿಗಳಿಗೆ ಹೆಚ್ 1 ಎನ್ 1 ಸೋಂಕು ತಗುಲಿದೆ ಎಂಬ ಫಲಿತಾಂಶ ನೀಡಿದೆ. ಇದರಿಂದ ಕೊಟ್ಟಾಯಂ ಸುತ್ತಲೂ 6000 ಕ್ಕೂ ಹೆಚ್ಚು ಕೋಳಿ, ಬಾತುಕೋಳಿ ಹಾಗೂ ಹಕ್ಕಿಗಳಿಗೆ ದಯಾ ಮರಣ ನೀಡಲಾಗಿದೆ. ಜೊತೆಗೆ ಕೊಟ್ಟಾಯಂ ಸುತ್ತಮುತ್ತಲಿನಲ್ಲಿ ಕೋಳಿ ಹಾಗೂ ಮೊಟ್ಟ ಮಾರಾಟ ನಿಷೇಧಿಸಲಾಗಿದೆ. ಇದೇ ಕಾರಣದಿಂದ ಲಕ್ಷದ್ವೀಪ ಕೇರಳದಿಂದ ಕೋಳಿ ಹಾಗೂ ಮೊಟ್ಟೆ ಆಮದು ನಿಲ್ಲಿಸಿದೆ.
ಹಕ್ಕಿ ಜ್ವರದಿಂದ ಮನುಷ್ಯರ ಮೇಲೆ ಯಾವುದೇ ರೀತಿಯಲ್ಲಿಯೂ ಪರಿಣಾಮ ಬೀರಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೂ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.