ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯ (Sexual harassment) ನಡೆಸಿರುವ ಆರೋಪ ಹೊತ್ತಿರುವ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣರನ್ನ (HD revanna) ಎಸ್ ಐ ಟಿ (SIT) ಅಧಿಕಾರಿಗಳು ಶನಿವಾರ ರಾತ್ರಿ ಬಂಧನಗಳ ಪಡಿಸಿದ್ದಾರೆ . ಸಾಕಷ್ಟು ಹೈಡ್ರಾಮಗಳ (Highdrama) ನಂತರ ಕೊನೆಗೂ ಹೆಚ್ಚು ರೇವಣ್ಣರನ್ನ ಎಸ್ ಐ ಟಿ ತಂಡ ಅರೆಸ್ಟ್ ಮಾಡಿದೆ.
ತಂದೆ ರೇವಣ್ಣ ಈಗಾಗಲೇ ಬಂಧನ ಕೊಳ್ಳಗಾಗಿದ್ದು, ಪುತ್ರ ಪ್ರಜ್ವಲ್ ರೇವಣ್ಣಗೂ (prajwal revanna) ಬಂಧನದ ಭೀತಿ ಎದುರಾಗಿದೆ . ಆದರೆ ಪ್ರಜ್ವಲ್ ರೇವಣ್ಣ ಸದ್ಯ ವಿದೇಶದಲ್ಲಿ (Foreign) ಇರೋದ್ರಿಂದ ಅವರ ಬಂಧನಕ್ಕೆ ಎಸ್ಐಟಿ (SIT) ರೆಡ್ ಕಾರ್ನರ್ ನೋಟಿಸ್ (Red corner notice) ಜಾರಿ ಮಾಡುವ ಸಾಧ್ಯತೆಗಳು ಹೆಚ್ಚಾಗಿದೆ. ಒಂದು ವೇಳೆ ನೋಟಿಸ್ ಗೆ ಉತ್ತರಿಸಲು ಪ್ರಜ್ವಲ್ ರೇವಣ್ಣ ದೇಶಕ್ಕೆ ಮರಳಿದಲ್ಲಿ, ಮರುಕ್ಷಣವೇ ಅವರು ಕೂಡ ಬಂಧನಕ್ಕೆ ಒಳಗಾಗುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿದೆ.
ಪ್ರಜ್ವಲ್ ರೇವಣ್ಣ ಮತ್ತು ಎಚ್ ಡಿ ರೇವಣ್ಣ ವಿರುದ್ಧ ಇದುವರೆಗೂ ಮೂರು ಎಫ್ಐಆರ್ ಗಳು (FIR) ದಾಖಲಾಗಿದ್ದು ಆ ಪೈಕಿ ಕೆ ಆರ್ ನಗರದ (KR Nagar) ಮಹಿಳೆಯ ಕಿಡ್ನ್ಯಾಪ್ ಪ್ರಕರಣದಲ್ಲಿ (Kidnap case) ಸದ್ಯ ಆರೋಪಿಯಾಗಿದ್ದ ರೇವಣ್ಣ ಅರೆಸ್ಟ್ ಆಗಿದ್ದಾರೆ.
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶನಿವಾರ ಮಧ್ಯಾಹ್ನ ಎಸ್ಐಟಿ ತಂಡ ಸಂತ್ರಸ್ತ ಮಹಿಳೆಯರ ಜೊತೆಗೆ ಹೊಳೆನರಸೀಪುರದ(Hole narasipura ) ಹೆಚ್ ಡಿ ರೇವಣ್ಣ ನಿವಾಸಕ್ಕೆ ತೆರಳಿ ಸ್ಥಳ ಮಹಜರು ಪ್ರಕ್ರಿಯೆ ಕೈಗೊಂಡಿದ್ದರು, ಮತ್ತೊಂದೆಡೆ ಕೋರ್ಟ್ ನಲ್ಲಿ (court) ಕಿಡ್ನ್ಯಾಪ್ ಪ್ರಕರಣದಲ್ಲಿ ಜಾಮೀನು ನಿರಾಕರಿಸಿದ ಹಿನ್ನೆಲೆ ಶನಿವಾರ 7:30ರ ಸುಮಾರಿಗೆ ಅಧಿಕಾರಿಗಳು ರೇವಣ್ಣರನ್ನ ಅರೆಸ್ಟ್ ಮಾಡಿದ್ದಾರೆ.