ಅನ್ನದಾತ ಬೆವರು ಹರಿಸಿ ದುಡಿದ್ರೆ ಇಡೀ ದೇಶಕ್ಕೆ ಅನ್ನ.. ಆದ್ರೆ, ಇಡೀ ದೇಶಕ್ಕೆ ಅನ್ನ ಹಾಕುವ ಅನ್ನದಾತನ ಬದುಕು ಈಗ ಸಂಕಷ್ಟದಲ್ಲಿದೆ. ಒಂದು ವಾರ ಸತತ ಸುರಿದ ರಣಮಳೆಗೆ ಇಡೀ ರೈತರ ಬದುಕೇ ಸರ್ವನಾಶವಾಗಿದೆ.. ಈ ನಡುವೆ ಮಾರುಕಟ್ಟೆಯಲ್ಲಿ ರೈತ ಬೆಳೆದ ಈರುಳ್ಳಿಗೆ ಬೆಲೆ ಇಲ್ಲದೇ ಕಣ್ಣೀರು ಸುರಿಸುವ ಪರಿಸ್ಥಿತಿ ಬಂದಿದೆ.
ಇನ್ನೂ ದೂರವಾಗಿಲ್ಲ ಈರುಳ್ಳಿ ಬೆಳೆಗಾರರ ಸಂಕಷ್ಟ..
ಮಾರುಕಟ್ಟೆಯಲ್ಲಿ ಈರುಳ್ಳಿ ಬೆಳೆಗೆ ಇಲ್ಲ ಕವಡೆಕಾಸಿನ ಕಿಮ್ಮತ್ತು.. ಬಂಗಾರದಂತ ಬೆಳೆಗೆ ಪಿಸಿಗೆ 50 ರೂ. ಕೇಳ್ತಾರೆ ದಲ್ಲಾಳಿಗಳು.. ಶ್ರಮಜೀವಿ ಅನ್ನದಾತನಿಗೆ ದಲ್ಲಾಳಿಗಳಿಂದ ಆಗ್ತಿದೆಯಾ ಅನ್ಯಾಯ? ಅನ್ನದಾತನ ಸಂಕಷ್ಟಕ್ಕೆ ಸಿಲುಕಿದ್ರೂ ಜನಪ್ರತಿನಿಧಿಗಳು, ಅಧಿಕಾರಿಗಳು ಡೋಂಟ್ ಕೇರ್..
ಹೌದು, ಈ ವರ್ಷ ಅನ್ನದಾತರ ಬದುಕು ಸಂಪೂರ್ಣ ಸರ್ವನಾಶವಾಗಿದೆ.. ಅದರಲ್ಲೂ ಕಳೆದ ಒಂದು ತಿಂಗಳಿನಿಂದ ರೈತನಿಗೆ ವರುಣ ಬಿಟ್ಟುಬಿಡದೇ ಕಾಡಿದ್ದಾನೆ.. ಆದ್ರೆ ಮಳೆರಾಯ ನಿಂತಿದ್ದಾನೆ ಅನ್ನೋವಷ್ಟರಲ್ಲಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದಿದೆ.. ಹೀಗಾಗಿ ಗದಗ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ.
ಗದಗ ಜಿಲ್ಲೆಯಲ್ಲಿ ಅತೀ ಹೆಚ್ಚು ಈರುಳ್ಳಿ ಬೆಳೆಯಲಾಗುತ್ತೆ. ಆದ್ರೆ ಗದಗ ಮಾರುಕಟ್ಟೆಯಲ್ಲಿ ಬೆಲೆ ಇಲ್ಲ ಅಂತ ಬೆಂಗಳೂರಿಗೆ ಹೋದರೆ ಒಂದೊಂದು ಪಿಸಿಗೆ ಕೇವಲ 50 ಕೇಳ್ತಿದ್ದಾರೆ.. ವರ್ಷವಿಡಿ ಶ್ರಮ ಪಟ್ಟು ಬೆಳೆದ ಬಂಗಾರದ ಬೆಳೆ, ದಲ್ಲಾಳಿಗಳ ಕವಡೆಕಾಸಿಗೆ ಬಿಕರಿ ಆಗ್ತಿದೆ.. ಇದರಿಂದ ರೈತರು ಹೇಗೆ ಬಾಳ್ವೆ ಮಾಡೋದು ಅಂತ ಕಷ್ಟ ತೋಡಿಕೊಳ್ತಿದ್ದಾರೆ.
ಅತಿಯಾದ ಮಳೆ ಇಡೀ ಬದುಕಿಗೆ ಕೊಳ್ಳಿ ಇಡ್ತಿದ್ರೆ, ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಮತ್ತಷ್ಟು ಬರೆ ಬಿದ್ದಿದೆ.. ಕಳೆದ ಬಾರಿ ಈರಳ್ಳಿಗೆ ಬೆಂಬಲ ಬೆಲೆ ನೀಡಿ ಅಂತ ಮನವಿ ಮಾಡಿದ್ದರು, ಸಿಎಂ ಸೇರಿ ಎಲ್ಲರೂ ಚುನಾವಣೆಯಲ್ಲಿ ಬ್ಯೂಸಿಯಾದ್ರು ಅಂತ ರೈತರು ಬೇಸರ ಹೊರ ಹಾಕ್ತಿದ್ದಾರೆ..
ಇನ್ನು ಮಳೆಯಿಂದಾಗಿ ಗದಗ ಜಿಲ್ಲೆಯಲ್ಲಿ ಇಷ್ಟೊಂದು ಹಾನಿಯಾದ್ರೂ ಉಸ್ತುವಾರಿ ಸಚಿವ ಸಿ ಸಿ ಪಾಟೀಲ್ ಇತ್ತ ತಲೆಯೂ ಹಾಕಿಲ್ಲ.. ಹಾನಿಯ ಬಗ್ಗೆ ಸರ್ಕಾರದ ಪರಿಹಾರದ ಹಣವೂ ಸಿಕ್ತಿಲ್ಲ.. ಹೀಗಾದ್ರೆ, ರೈತರು ಬದುಕು ಹೇಗೆ ಅನ್ನೋ ಪ್ರಶ್ನೆ ಕಾಡುತ್ತಿದೆ.