ಮಂಡ್ಯದಲ್ಲಿ (Mandya) ವಕ್ಫ್ (Waqf board) ಭೂತ ಬಿಟ್ಟು ಬಿಡದೆ ಕಾಡುತ್ತಿದೆ. ಇಲ್ಲಿನ ರೈತರ ಜಮೀನಿನ ಆರ್.ಟಿ.ಸಿಯಲ್ಲಿ (RTC) ವಕ್ಫ್ ಎಂದು ಉಲ್ಲೇಖವಾಗಿರುಣ ಪ್ರಕರಣಗಳು ಮತ್ತೆ ಮುನ್ನಲೆಗೆ ಬರುತ್ತಿದೆ. ಹೀಗಾಗಿ ಮಂಡ್ಯ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯ್ತು.

ಶ್ರೀರಂಗಪಟ್ಟಣದ ಹಳೆ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಮಂಡ್ಯ ರಕ್ಷಣಾ ವೇದಿಕೆ ಪ್ರೊಟೆಸ್ಟ್ ನಡೆಸಿ ರಾಜ್ಯ ಸರ್ಕಾರ ಹಾಗೂ ಸಚಿವ ಜಮೀರ್ (Zaheer Ahamed) ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಆರ್.ಟಿ.ಸಿ ಪ್ರತಿಯನ್ನು ಸುಟ್ಟು ಸರ್ಕಾರದ ವಿರುದ್ದ ಕಿಡಿ ರೈತರು ಕಿಡಿಕಾರಿದ್ದಾರೆ.
ಶ್ರೀ ರಂಗಪಟ್ಟಣ ತಾಲೂಕಿನ 50 ಕ್ಕೂ ಹೆಚ್ಚು ರೈತರ ಜಮೀನು ದಾಖಲೆಯಲ್ಲಿ ವಕ್ಫ್ ಎಂದು ನಮೂದು ಆಗಿರುವುದಿ ಬೆಳಕಿಗೆ ಬಂದಿದೆ. ಋಣ ಕಲಂನಲ್ಲಿ ಕರ್ನಾಟಕ ವಕ್ಫ್ ಮಂಡಳಿ ಎಂದು ಉಲ್ಲೇಖವಾಗಿದ್ದು,ಇದರಿಂದ ಆತಂಕಗೊಂಡಿರುವ ಅನ್ನದಾತರು,ಕೂಡಲೇ ಜಮೀನು ದಾಖಲೆ ಸರಿಪಡಿಸುವಂತೆ ಆಗ್ರಹಿಸಿದ್ದಾರೆ.











