ಬಾಳೆ, ಇದನ್ನ ಬೆಳೆದ ರೈತನ ಬೆನ್ನೇ ಬಾಗುವಂತಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಾಳೆ ಬೆಳೆದಿದ್ದ ಬೆಳಗಾರ ಕೈಸುಟ್ಟುಕೊಂಡಿದ್ದಾನೆ. ಫಲವೇನೋ ಭರ್ಜರಿಯಾಗಿ ಬಂದಿದೆ. ಆದ್ರೆ, ಲಾಭದ ನಿರೀಕ್ಷೆಯಲ್ಲಿದ್ದ ರೈತ ಕಟಾವು ಹಂತದಲ್ಲಿಯೇ ನಾಶ ಮಾಡ್ತಾ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾನೆ.
ತಲೆ ಎತ್ತರವನ್ನೂ ದಾಟಿ ಬರೆದಿರೋ ಬಾಳೆ ಬೆಳೆ ಕಂಡು ಖುಷಿ ಪಡ್ಬೇಕು. ಆದ್ರೆ, ಜೆಸಿಬಿ ತಗೊಂಡು ಕಣ್ಣ ಮುಂದೇನೆ ಎದೆ ಭಾರ ಮಾಡಿಕೊಂಡು ನೆಲಕ್ಕೆ ಕೆಡವುತ್ತಿದ್ದಾನೆ. ಅನ್ನದಾತನ ಈ ಕರುಣಾಜನಕ ಸ್ಥಿತಿ ಕಂಡು ಬಂದಿದ್ದು, ಕೊಪ್ಪಳ ತಾಲೂಕು ಡೊಂಬರಹಳ್ಳಿ ಗ್ರಾಮದಲ್ಲಿ.
ಸಿದ್ದರೆಡ್ಡಿ ಎಂಬ ರೈತ ತನ್ನ 6 ಎಕರೆ ಜಮೀನಿನಲ್ಲಿ ಬಾಳೆ ಬೆಳೆದಿದ್ದರು. ಫಸಲು ಕೂಡಾ ಉತ್ತಮವಾಗೇ ಬಂದಿದೆ. ಆದ್ರೆ, ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಬಾಳೆಗೆ, ಜಸ್ಟ್ 2 ರೂಪಾಯಿ ಬೆಲೆ ಇದೆಯಂತೆ. ಈ ದರಕ್ಕೆ ಕಟಾವು ಮಾಡೋದ್ರಿಂದ ಮತ್ತಷ್ಟು ನಷ್ಟ ಅನುಭವಿಸೋದು ಪಕ್ಕಾ. ಹೀಗಾಗಿ 6 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆಯನ್ನು ಜೆಸಿಬಿ ಮೂಲಕ ನಾಶ ಮಾಡ್ತಿದ್ದಾರೆ.
ಇನ್ನು ಜಿಲ್ಲೆಯಲ್ಲಿ 2 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ರೈತರು ಬಾಳೆ ಬೆಳೆದಿದ್ದಾರೆ. ಪ್ರತಿ ಎಕರೆಗೆ 1 ರಿಂದ ಒಂದೂವರೆ ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಆದ್ರೆ ಮಾರುಕಟ್ಟೆಯಲ್ಲಿ ಬಾಳೆಯನ್ನು ಕೇಳುವವರೇ ಇಲ್ಲದಂತಾಗಿದೆ. ಹೀಗಾಗಿ ಬಹುತೇಕ ರೈತರು ಬಾಳೆಯನ್ನ ಕಟಾವು ಮಾಡದೇ ಹೀಗೆ ನಾಶ ಮಾಡ್ತಿದ್ದಾರೆ. ಜೊತೆಗೆ ಸರ್ಕಾರ ಈ ಕೂಡಲೇ ತಮ್ಮ ನೆರವಿಗೆ ಧಾವಿಸಬೇಕು ಅಂತಾ ಅಂಗಲಾಚುತ್ತಿದ್ದಾರೆ.
ಒಟ್ಟಾರೆ ಕಳೆದ ಬಾರಿಯೂ ಬಾಳೆ ಬೆಳೆಗಾರರಿಗೆ ಪರಿಹಾರ ನೀಡದೆ ಸರ್ಕಾರ ತಾರತಮ್ಯ ಮಾಡಿತ್ತು, ಇದೀಗ ಹಲವು ಬೆಳೆಗಳಿಗೆ ಪರಿಹಾರ ನೀಡುತ್ತಿರೋ ಸರ್ಕಾರ ಬಾಳೆ ಬೆಳೆದು ಬಾಗಿರೋ ರೈತರಿಗೂ ಬೆನ್ನೆಲುಬಾಗಬೇಕಿದೆ. ಬೆಂಬಲ ಬೆಲೆ ನೀಡುವ ಮೂಲಕ ಅನ್ನದಾತನ ನೆರವಿಗೆ ಧಾವಿಸಬೇಕಿದೆ.