ಸದ್ಯ ಲೋಕಸಭಾ ಚುನಾವಣೆಯಲ್ಲಿ(no elections) 28ರ ಪೈಕಿ 20 ಸ್ಥಾನಗಳನ್ನ ಗೆಲ್ಲಲೇಬೇಕು ಅಂತ ಸಿಎಂ ಸಿದ್ದರಾಮಯ್ಯ (siddaramiah) ಡಿಸಿಎಂ ಡಿಕೆ ಶಿವಕುಮಾರ್ (Dk shivakumar)ಪ್ರಣತೊಟ್ಟಿದ್ರೆ ಸಿಎಂ ಸಂಪುಟದ ಸಚಿವರು ಅಷ್ಟೇನೂ ತಲೆ ಕೆಡಿಸಿಕೊಂಡ ಹಾಗೆ ಕಾಣುತ್ತಿಲ್ಲ ಕೇವಲ ಬಿಸಿಎಂ ಮಾತ್ರ 20 ಪ್ಲಸ್ (20+) ಎಂಬ ಗುರಿ ಇಟ್ಕೊಂಡು ಕ್ಷೇತ್ರ ಸಂಚಾರ ಮಾಡ್ತಿದ್ರೆ ಸಚಿವರುಗಳು ಮಾತ್ರ ಅವರವರ ಕುಟುಂಬ ಸದಸ್ಯರ ಗೆಲುವಿಗೆ ಶ್ರಮಿಸುತ್ತಿದ್ದಾರೆ ಅಷ್ಟೇ.

ಈ ಬಾರಿ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನಗಳನ್ನ ಗೆಲ್ಲಲೇಬೇಕು ಎಂಬ ಕಾರಣಕ್ಕೆ ಸಚಿವರ ಮಕ್ಕಳಿಗೆ (Ministers) ಅಥವಾ ಅವರದ್ದೇ ಕುಟುಂಬದ ಸದಸ್ಯರುಗಳಿಗೆ ಟಿಕೆಟ್ (Tickets) ನೀಡಿ ಅವರ ಗೆಲುವಿನ ಜವಾಬ್ದಾರಿಯನ್ನ ಸಚಿವರ ಹೆಗಲಿಗೆ ನೀಡಿದ್ದಾರೆ ಇದರ ಜೊತೆಗೆ ಇತರೆ ಜಿಲ್ಲೆಗಳಿಗೂ ಈ ಸಚಿವರನ್ನ ಉಸ್ತುವಾರಿ ಸಚಿವರುಗಳನ್ನಾಗಿ ಮಾಡಲಾಗಿದೆ ಆದರೆ ಈ ಸಚಿವರಿಗೆ ಉಸ್ತುವಾರಿಯ ಜವಾಬ್ದಾರಿ ಮರೆತೇ ಹೋಗಿದ್ದು ಕೇವಲ ಕುಟುಂಬ ಸದಸ್ಯರನ್ನ ಗೆಲ್ಲಿಸಿಕೊಳ್ಳುವ ದಾವಂತದಲ್ಲಿದ್ದಾರೆ.

ಸಚಿವರುಗಳು ತಮ್ಮ ಉಸ್ತುವಾರಿ ಕ್ಷೇತ್ರವನ್ನು ನಿರ್ಲಕ್ಷಿಸಿ ತಮ್ಮ ಮಕ್ಕಳಿಗೆ ಟಿಕೆಟ್ ನೀಡಿರುವ ಕ್ಷೇತ್ರಗಳನ್ನು ಮಾತ್ರ ಗೆಲ್ಲಿಸಿಕೊಳ್ಳಲು ಹೆಚ್ಚು ಶ್ರಮವಹಿಸುತ್ತಿದ್ದು ,ಇತರೆ ಕ್ಷೇತ್ರಗಳಿಗೆ ಸಮಸ್ಯೆ ಆಗಬಹುದಾದ ಸ್ಪಷ್ಟ ಸನ್ನಿವೇಶ ಸದ್ಯ ಕಂಡುಬರುತ್ತದೆ ಒಂದು ವೇಳೆ ಇದು ಹೀಗೆ ಮುಂದುವರೆದಲಿ ಪಕ್ಷಕ್ಕಿಂತ ಕುಟುಂಬದ ಹಿತಾಸಕ್ತಿಯೇ (Family politics) ಸಚಿವರುಗಳಿಗೆ ಮುಖ್ಯವಾದಲ್ಲಿ ಇದು ಕಾಂಗ್ರೆಸ್ಗೆ (congress) ದೊಡ್ಡ ಪೆಟ್ಟು ನೀಡಬಹುದಾದ ಸಾಧ್ಯತೆ ಇದೆ . ಹೀಗಾಗಿ ಸಿಎಂ ಮತ್ತು ಡಿಸಿಎಂ ಈ ಬಗ್ಗೆ ತಲೆಕೆಡಿಸಿಕೊಂಡಿದ್ದು ಯಾವ ರೀತಿ ಸಮಸ್ಯೆಯನ್ನ ನಿಭಾಯಿಸುತ್ತಾರೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ.