ವೈರಲ್ ಪೋಸ್ಟ್‌ನಲ್ಲಿರುವುದೇನು?
ಹಿಂದೂಗಳ ಅಗತ್ಯ ನಮಗೆ ಬೇಡ, ಮುಸ್ಲಿಮರ ಓಟು ಸಾಕು: ಸಿದ್ರಾಮಯ್ಯ
ಸತ್ಯವೇನು?
ಇದು ಸುಳ್ಳು ಸುದ್ದಿ (Fake news) . ಪತ್ರಿಕಾ ವರದಿಯು ನಕಲಿಯಾಗಿದ್ದು, ಡಿಜಿಟಲ್ ರೂಪದಲ್ಲಿ ಸಿದ್ಧಪಡಿಸಿ ವೈರಲ್ (Viral) ಮಾಡಲಾಗಿದೆ.
ಬೆಂಗಳೂರಿನ (Bengaluru) ಖಾಸಗಿ ಹೊಟೇಲ್‌ನಲ್ಲಿ ನಡೆದ ರಾಜ್ಯ ಹೋಬಳಿ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Cm siddaramaiah)” ಕಾಂಗ್ರೆಸ್ (congress) ನಂಬಿಕೆ ಇಟ್ಟಿರುವುದು ಮುಸ್ಲಿಮ್ ಓಟುಗಳನ್ನು (Muslim votes), ಕಾಂಗ್ರೆಸ್ ಪಕ್ಷವು ಹಿಂದೂಗಳ ಓಟನ್ನು (Hindu votes) ನಂಬಿಕೊಂಡಿಲ್ಲ’ ಎಂದು ಹೇಳಿದ್ದಾರೆ ಎಂದು ಪ್ರತಿಪಾದಿಸುವ ಪತ್ರಿಕಾ ವರದಿಯೊಂದರ ತುಣುಕು ವೈರಲ್ ಆಗಿದೆ.
ಈ ವರದಿಯ ತುಣುಕು ಎಕ್ಸ್ (X) ಮತ್ತು ವಾಟ್ಸ್‌ಆಪ್‌ನಲ್ಲೂ (Whatsapp) ವೈರಲ್ ಆಗಿದೆ.
ವರದಿಯಲ್ಲಿ, “ರಾಜ್ಯದಲ್ಲಿ ಹಿಂದೂಗಳ ಮತಗಳು ಕೈ ತಪ್ಪಿ ಹೋದರೆ ಪಕ್ಷಕ್ಕೆ ಭಾರಿ ಹೊಡೆತ ಎಂದು ಸಭೆಯಲ್ಲಿ ದನಿ ಎತ್ತಿದ ಕಾರ್ಯಕರ್ತರ ಮಾತಿಗೆ ಸಿಡಿಮಿಡಿಗೊಂಡು ಉತ್ತರಿಸಿ, ಕಾಂಗ್ರೆಸ್ಸಿಗೆ ಹಿಂದೂಗಳ (Congress) ಅಗತ್ಯವಿಲ್ಲ ಎಂದು ಹೇಳಿದರು” ಎಂದು ಬರೆಯಲಾಗಿದೆ.
ಸಿದ್ದರಾಮಯ್ಯನವರ (siddaramaiah) ಮಾತಿನಿಂದ ಅಸಮಾಧಾನಗೊಂಡ ಹುಬ್ಬಳ್ಳಿ, ಧಾರವಾಡ, ಮೈಸೂರು, ಶಿವಮೊಗ್ಗ ಸೇರಿದಂತೆ ಉತ್ತರ ಕರ್ನಾಟಕದ ( mysuru, shimoga, uttara karnataka) ಕಾರ್ಯಕರ್ತರು ಸಭೆಯಿಂದ ಹೊರನಡೆದರು ವರದಿ ದಾಖಲಿಸಿದೆ.
ವಾಸ್ತವ (Fact)
“ಹಿಂದೂಗಳ ಅಗತ್ಯ ನಮಗೆ ಬೇಡ, ಮುಸ್ಲಿಮರ ಓಟು ಸಾಕು, ಸಿದ್ರಾಮಯ್ಯ” ಎಂಬ ಶೀರ್ಷಿಕೆಯೊಂದು ವೈರಲ್ ಆಗಿರುವ ವರದಿ ನಕಲಿ (Fake report).
ವೈರಲ್ ಆಗಿರುವ ಸುದ್ದಿಯ ಹೇಳಿಕೆಯನ್ನು ಪರಿಶೀಲಿಸಲು ಮೊದಲು ಇತರೆ ಪತ್ರಿಕೆ(News papers), ಡಿಜಿಟಲ್ ಮಾಧ್ಯಮಗಳಲ್ಲಿ (Digital platforms) ಈ ವರದಿ ಪ್ರಕಟವಾಗಿದೆಯೇ ಎಂದು ತಿಳಿಯಲು ಹುಡುಕಾಟ ನಡೆಸಿದೆವು.
ಸಿದ್ದರಾಮಯ್ಯನವರ ಈ ಹೇಳಿಕೆಯನ್ನು ದಾಖಲಿಸಿರುವ ಇನ್ನೊಂದು ವರದಿ ನಮಗೆ ಲಭ್ಯವಾಗಲಿಲ್ಲ.
ಸುದ್ದಿಯೊಂದಿಗೆ ಬಳಕೆಯಾಗಿರುವ ಫೊಟೋ ಅನುಮಾನ ಹುಟ್ಟಿಸುವಂತಿತ್ತು. ಫೋಟೋದಲ್ಲಿ ಸಿದ್ದರಾಮಯ್ಯನವರು (siddaramaiah) ಇದ್ದಾರಾದರೂ ಇದು ಕಾರ್ಯಕರ್ತರ ಸಭೆಯ ಫೋಟೋದಂತೆ ಕಾಣಿಸಲಿಲ್ಲ. ರಿವರ್ಸ್ ಇಮೇಜ್ ಸರ್ಚ್ (Reverse image search) ಮೂಲಕ ಹುಡುಕಿದಾಗ, ಇದು 2023ರ ಜೂನ್ 2ರಂದು ಹಿರಿಯ ಅಧಿಕಾರಿಗಳ ಸಭೆಯದ್ದು ಎಂಬುದು ಖಚಿತವಾಯಿತು.
ಸುದ್ದಿಯನ್ನು ಇನ್ನಷ್ಟು ಕೂಲಂಕಷವಾಗಿ ಗಮನಿಸಲು ಯತ್ನಿಸಿದೆವು.
ಬೆಂಗಳೂರು ಡೇಟ್‌ಲೈನ್‌ನಲ್ಲಿ ಪ್ರಕಟವಾಗಿರುವ ಈ ಸುದ್ದಿ ಎಂದು ನಡೆದಿದ್ದು ಎಂದು ಹೇಳಿಲ್ಲ. ಕಾರ್ಯಕ್ರಮದಲ್ಲಿ ಇತರ ಯಾವ ನಾಯಕರು ಉಪಸ್ಥಿತರು ಎಂಬುದನ್ನು ಉಲ್ಲೇಖಿಸಿಲ್ಲ.