ಚಳಿಗಾಲದ ಗಾಳಿ ತುಂಬಾನೇ ತಂಪಾಗಿರುತ್ತದೆ. ಹಾಗಾಗಿ ದೇಹದಲ್ಲಿ ಒಂದಿಷ್ಟು ಬದಲಾವಣೆಗಳಾಗುತ್ತದೆ. ಇದರ ಜೊತೆಗೆ ಕೆಲವರಿಗೆ ಚರ್ಮ ಒಡೆಯುತ್ತದೆ ಹಾಗೂ ಚರ್ಮ ಸುಕ್ಕುಗಟ್ಟುವುದು ಕೂಡ ಹೆಚ್ಚಾಗುತ್ತದೆ. ಹಿಮ್ಮಡಿಯಲ್ಲಿ ಬಿರುಕು ಬೀಳುವುದು,ತುಟಿ ಡ್ರೈಯಾಗುವುದು ಹೀಗೆ ಚರ್ಮಕ್ಕೆ ಸಂಬಂಧಪಟ್ಟ ಒಂದಿಷ್ಟು ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಈ ಸಂದರ್ಭದಲ್ಲಿ ಚರ್ಮದ ಆರೈಕೆ ಬಗ್ಗೆ ಹೆಚ್ಚಾಗಿ ಕಾಳಜಿಯನ್ನ ವಹಿಸಬೇಕು ಹಾಗೂ ತಪ್ಪದೆ ತ್ವಚೆಯನ್ನ ಮಾಯಿಶ್ಚರೈಸ್ ಮಾಡುವುದು ಕೂಡ ಒಳ್ಳೆಯದು. ಇನ್ನು ಮುಖ್ಯವಾಗಿ ಚಳಿಗಾಲದಲ್ಲಿ ಈ ಫೇಸ್ ಮಾಸ್ಕ್ ಗಳನ್ನು ತಪ್ಪಿಯು ಬಳಸಬೇಡಿ ಇದರಿಂದ ತ್ವಚೆಗೆ ತೊಂದರೆ..

ಕ್ಲೇ ಮಾಸ್ಕ್/ ಮುಲ್ತಾನಮಿಟ್ಟಿ ಮಾಸ್ಕ್
ಚಳಿಗಾಲದಲ್ಲಿ ನಿಮ್ಮ ತ್ವಚೆ ಒಣಗುವುದು ಹೆಚ್ಚು ಇದರಿಂದ ಉರಿ ಕೂಡ ಜಾಸ್ತಿಯಾಗುತ್ತದೆ ಹಾಗಾಗಿ ನಿಮ್ಮ ತ್ವಚೆಯನ್ನ ಹೈಡ್ರೇಟ್ ಆಗಿಡಬೇಕು ಹಾಗೂ ಮಾಯಿಶ್ಚರೈಸ್ ಮಾಡಬೇಕು.ಆದ್ರೆ ಕ್ಲೇ ಮಾಸ್ಕ್/ ಮುಲ್ತಾನಮಿಟ್ಟಿ ಮಾಸ್ಕ್ ತ್ವಚೆ ಯ ನೈಸರ್ಗಿಕ ಎಣ್ಣೆಯನ್ನು ತೆಗೆದುಹಾಕಬಹುದು, ಚಳಿಗಾಲದಲ್ಲಿ ಅದನ್ನು ಇನ್ನಷ್ಟು ಒಣಗಿಸಬಹುದು.

ಪೀಲ್ ಆಫ್ ಮಾಸ್ಕ್
ಸಾಕಷ್ಟು ಫ್ಲೇವರ್ ಗಳ ಪೀಲ್ ಆಫ್ ಮಾಸ್ಕಗಳು ನಿಮಗೆ ದೊರೆಯುತ್ತವೆ, ಇತರೆ ದಿನಗಳಲ್ಲಿ ಪೀಲ್ ಆಫ್ ಮಾಸ್ಕ್ ಬಳಸುವುದರಿಂದ ಮುಖದಲ್ಲಿರುವಂತಹ ಡೆಡ್ ಸ್ಕಿನ್ ಕಡಿಮೆಯಾಗುತ್ತದೆ ಹಾಗೂ ವೈಟ್ ಹೆಡ್, ಬ್ಲಾಕೆಟ್ಸ್ ಅನ್ನ ರಿಮೂವ್ ಮಾಡುತ್ತದೆ. ಆದ್ರೆ ಚಳಿಗಾಲದಲ್ಲಿ ತ್ವಚೆ ಒಣಗಿರುವುದರಿಂದ ಪೀಲ್ ಆಫ್ ಮಾಸ್ಕ್ ಗಳನ್ನು ಬಳಸುವುದನ್ನ ನಿಲ್ಲಿಸಿ. ಇದರಿಂದ ತ್ವಚೆ ಇನ್ನಷ್ಟು ಒಣಗುತ್ತದೆ ಜೊತೆಗೆ ತುರಿಕೆ ಅಥವಾ ಕಿರಿಕಿರಿ ಹೆಚ್ಚಾಗುತ್ತದೆ.

ಎಕ್ಸ್‌ಫೋಲಿಯೇಟಿಂಗ್ ಮಾಸ್ಕ್‌ಗಳು
ಈ ಮಾಸ್ಕಗಳನ್ನು ಚಳಿಗಾಲದಲ್ಲಿ ನೀವು ಬಳಸುವುದರಿಂದ ತ್ವಚೆ ಇನ್ನಷ್ಟು ಒಣಗುತ್ತದೆ ಚರ್ಮ ಪೀಲ್ ಆಗುವಂಥ ಚಾನ್ಸ್ ಜಾಸ್ತಿ ಇರುತ್ತದೆ. ತ್ವಚೆ ಒಣಗಿ ಕಿರಿಕಿರಿ ಉಂಟುಮಾಡುತ್ತದೆ.












