ಗಂಟೆಗಟ್ಟಲೆ ಫೋನ್ ಹಾಗೂ ಲ್ಯಾಪ್ ಟಾಪ್ ಬಳಕೆಯಿಂದಾ ಕಣ್ಣುಗಳಿಗೆ ಸ್ಟ್ರೆಸ್ ಆಗುತ್ತದೆ.. ಬರಿ ಕೆಲಸದ ವಿಚಾರದಿಂದಾಗಿ ಮಾತ್ರವಲ್ಲ ಮೂವಿಸ್ ನೋಡುವುದ,ವಿಡಿಯೋ ಗೇಮ್ಸ್, ಚಟಿಂಗ್ ಇದೆಲ್ಲಾ ಹೆಚ್ಚಾಗಿ ಒತ್ತಡ ಕಣ್ಣಿಗೆ ಬೀಳುವುದರಿಂದ ಕಣ್ಣಿನ ನರಗಳ ಸಮಸ್ಯೆಗಳು ಹೆಚ್ಚಾಗುತ್ತದೆ. ಇದರಿಂದಾಗಿ ಕಣ್ಣುಗಳು ಕೆಂಪಾಗುವುದು, ನೀರು ಬರುವುದು,ಹಾಗೂ ಕಣ್ಣಿನ ತುರಿಕೆ ಸಮಸ್ಯೆ ಕೂಡಾ ಎದುರಾಗುತ್ತದೆ..ಮಾತ್ರವಲ್ಲದೆ ಹೆಚ್ಚು ಟ್ರಾವಲ್ ಮಾಡಿದಾಗ,ನಿದ್ದೆ ಸರಿಯಾಗದೆಯಿದ್ದಾಗ ಇಂತಹ ತೊಂದರೆಗಳು ಹೆಚ್ಚು.. ಇದು ದೊಡ್ಡವರಿಗೆ ಮಾತ್ರವಲ್ಲ ಚಿಕ್ಕವರಿಗು ಆಗುತ್ತದೆ..ಈ ಕಣ್ಣಿನ ಸ್ಟ್ರೆಸ್ ಅನ್ನ ಹೋಗಲಾಡಿಸಲು ನೈಸರ್ಗಿಕ ಮನೆಮದ್ದುಗಳನ್ನ ಬಳಸಿ
ವಾರ್ಮ್ ಕಂಪ್ರೆಸ್
ಒಂದು ಬಟ್ಟೆಯನ್ನ ಬಿಸಿನೀರಿನೊಳಗೆ ಒಂದು ನಿಮಿಷದಷ್ಟು ಸಮಯ ಇಡಿ. ನಂತರ ಆ ಬಟ್ಟೆನ ಹೊರ ತೆಗೆದು ಚೆನ್ನಾಗಿ ಹಿಂಡಿ ನೀರನ್ನು ತೆಗೆದು, ನಂತರ ಆ ಬಟ್ಟೆಯನ್ನು ಕಣ್ಣಿನ ಮೇಲೆ ಇಡುವುದರಿಂದ ಸ್ಟ್ರೆಸ್ ಕಡಿಮೆಯಾಗುತ್ತದೆ. ಕಣ್ಣು ಉರಿ ಹಾಗೂ ಕೆಲವೊಬ್ಬರಿಗೆ ತಲೆನೋವಿನ ಸಮಸ್ಯೆ ಇದ್ದರೂ ಕೂಡ ನಿವಾರಣೆಯಾಗುತ್ತದೆ.
ಕೋಲ್ಡ್ ಕಂಪ್ರೆಸ್
ಒಂದು ಬಟ್ಟೆಯನ್ನ ತಣ್ಣೀರಿನೊಳಗೆ ಒಂದು ನಿಮಿಷದಷ್ಟು ಸಮಯ ಇಡಿ. ನಂತರ ಆ ಬಟ್ಟೆನ ಹೊರ ತೆಗೆದು ಚೆನ್ನಾಗಿ ಹಿಂಡಿ ನೀರನ್ನು ತೆಗೆದು, ನಂತರ ಆ ಬಟ್ಟೆಯನ್ನು ಕಣ್ಣಿನ ಮೇಲೆ ಇಡುವುದರಿಂದ ಸ್ಟ್ರೆಸ್ ಕಡಿಮೆಯಾಗುತ್ತದೆ.
ರೋಸ್ ವಾಟರ್
ಎರಡು ಕಾಟನ್ ಪ್ಯಾಡ್ ಗೆ ರೋಸ್ ವಾಟರ್ ಅನ್ನು ಹಾಕಿ, ನಂತರ ಎರಡು ಕಣ್ಣುಗಳ ಮೇಲೆ ಆ ಪ್ಯಾಡ್ ಅನ್ನು ೫ ರಿಂದ ೧೦ ನಿಮಿಷಗಳ ಕಾಲ ಹಾಗೆ ಬಿಡಿ.. ಒತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ.
ಟೀ ಬ್ಯಾಗ್ಗಳು
ಟೀ ಬ್ಯಾಗ್ಗಳನ್ನು ಬಿಸಿ ನೀರಿನಲ್ಲಿ ನೆನೆಸಿ, ತಣ್ಣಗಾಗಲು ಬಿಡಿ ಮತ್ತು ಅವುಗಳನ್ನು ನಿಮ್ಮ ಕಣ್ಣುಗಳಿಗೆ ಹಚ್ಚಿ ಊತವನ್ನು ಕಡಿಮೆ ಮಾಡುತ್ತದೆ ಮತ್ತು ಸ್ನಾಯುಗಳನ್ನು ವಿಶ್ರಾಂತಿ ಮಾಡುತ್ತದೆ.