ದೇಹದಲ್ಲಿ ಬಹಳ ಮುಖ್ಯವಾದ ಅಂಗಗಳಲ್ಲಿ ಕಣ್ಣು ಕೂಡ ಒಂದು. ಕಣ್ಣುಗಳು ತುಂಬಾ ಚಿಕ್ಕದಿದ್ದರೂ ಕೂಡ ಅದರ ಮಹತ್ವ ಹಾಗೂ ಕೆಲಸ ತುಂಬಾನೇ ದೊಡ್ಡದು. ಚೆನ್ನಾಗಿರುವ ಕಣ್ಣುಗಳನ್ನ ಅಪ್ಪಿ ತಪ್ಪಿ ಕಳೆದುಕೊಂಡರೆ ಜೀವನದ ದೊಡ್ಡ ಲಾಸ್ ಅಂತ ಹೇಳಿದ್ರು ತಪ್ಪಾಗಲ್ಲ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಲ್ಯಾಪ್ಟಾಪ್ ಬಳಕೆ ಫೋನು ಬಳಕೆ ಕಣ್ಣಿಗೆ ಸ್ಟ್ರೆಸ್ ನೀಡುವುದು, ಅಬ್ಬಬ್ಬಾ ಒಂದಲ್ಲ ಎರಡಲ್ಲ ದೃಷ್ಟಿಯ ಸಮಸ್ಯೆಯಿಂದ ಈಗಾಗಲೇ ಹೆಚ್ಚು ಜನ ಸ್ಪೆಕ್ಸ್ ಅನ್ನ ಬಳಸುತ್ತಾರೆ ಅಥವಾ ಲೆನ್ಸ್ ಗಳನ್ನ ಕೂಡ ಯೂಸ್ ಮಾಡ್ತಾರೆ.
ಆದರೆ ಬೇಸರದ ಸಂಗತಿ ಅಂದ್ರೆ ಸ್ಕೂಲ್ ಕಾಲೇಜ್ ಹೋಗುವ ಮಕ್ಕಳುಗಳು ಕೂಡ ಸ್ಪೆಕ್ಸ್ ಗಳನ್ನು ಬಳಕೆ ಮಾಡ್ತಾರೆ. ದೃಷ್ಟಿಯ ಸಮಸ್ಯೆ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರಿಗೂ ಕೂಡ ಕಾಡುತ್ತೆ. ಈಗಾಗಲೇ ದೃಷ್ಟಿಯ ಸಮಸ್ಯೆ ಇದ್ದವರು ಆ ಸಮಸ್ಯೆಯಿಂದ ಹೊರಬರುವುದಕ್ಕೆ ಟ್ರೀಟ್ಮೆಂಟ್ ಗಳನ್ನ ತೆಗೆದುಕೊಳ್ಳುವುದು ಅತ್ಯಗತ್ಯ ಆದರೆ ನಿಮ್ಮ ಕಣ್ಣುಗಳು ಹಾಗೂ ದೃಷ್ಟಿಯನ್ನ ಚೆನ್ನಾಗಿಟ್ಟುಕೊಳ್ಳಲು ಆರೋಗ್ಯ ಪದ್ಧತಿಯನ್ನು ಕೂಡ ಸರಿಯಾಗಿ ಪಾಲಿಸಬೇಕು. ತಪ್ಪದೇ ನಿಮ್ಮ ಡಯಟ್ ನಲ್ಲಿ ಈ ಪದಾರ್ಥಗಳನ್ನ ಆಡ್ ಮಾಡಿಕೊಳ್ಳುವುದರಿಂದ ದೃಷ್ಟಿಯ ಸಮಸ್ಯೆ ಅಥವಾ ಕಣ್ಣಿನ ಸಮಸ್ಯೆ ಇರುವುದಿಲ್ಲ.
ಹಸಿರು ಸೊಪ್ಪು
ಕಣ್ಣಿನ ದೃಷ್ಟಿಯನ್ನು ಕಾಪಾಡಿಕೊಳ್ಳಲು ನಾವು ಹಸಿರು ತರಕಾರಿಗಳನ್ನ ಅದ್ರಲ್ಲೂ ಕೂಡ ಹಸಿರು ಸೊಪ್ಪುಗಳನ್ನು ಹೆಚ್ಚಿನ ಮಟ್ಟದಲ್ಲಿ ತಿನ್ನಬೇಕು ಹಸಿರು ಸೊಪ್ಪಿನಲ್ಲಿ ಪಾಲಕ, ಕೇಲ್, ಕೊಲಾರ್ಡ್ ಗ್ರೀನ್ ಉತ್ತಮ.ಇದರಲ್ಲಿ ಲುಟೀನ್ ಮತ್ತು ಜಿಯಾಕ್ಸಾಂಥಿನ್‌ನಲ್ಲಿ ಸಮೃದ್ಧವಾಗಿದೆ, ಮ್ಯಾಕ್ಯುಲರ್ ಡಿಜೆನರೇಶನ್ ವಿರುದ್ಧ ರಕ್ಷಿಸುತ್ತದೆ.
ಡ್ರೈ ಫ್ರೂಟ್ಸ್
ಡ್ರೈ ಫ್ರೂಟ್ಸ್ ಸೇವಿಸುವುದರಿಂದ ಆರೋಗ್ಯದ ಸಾಕಷ್ಟು ಸಮಸ್ಯೆಗಳು ನಿವಾರಣೆ ಆಗುತ್ತೆ ಹಾಗೂ ಹೆಲ್ತ್ ಗೂ ಕೂಡ ತುಂಬಾನೇ ಒಳ್ಳೆಯದು. ಇನ್ನು ಕಣ್ಣಿನ ಆರೋಗ್ಯಕ್ಕಾಗಿ ಬಾದಾಮಿ, ಕುಂಬಳಕಾಯಿ ಬೀಜಗಳು, ಸೂರ್ಯಕಾಂತಿ ಬೀಜಗಳು ತಿನ್ನುವುದು ಉತ್ತಮ, ಇವುಗಳಲ್ಲಿ ಝಿಂಕ್ ಹಾಗೂ ವಿಟಮಿನ್ E ಅಂಶ ಹೆಚ್ಚಿರುತ್ತದೆ.
ಕೊಬ್ಬಿನ ಮೀನು
ಕೊಬ್ಬಿನ ಮೀನುಗಳಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಅಂಶ ಹೆಚ್ಚಿರುತ್ತದೆ. ಇದು ಕಣ್ಣಿನ ಹಾಗೂ ದೃಷ್ಠಿಯ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು.ಸಾಲ್ಮನ್, ಸಾರ್ಡಿನ್, ಟ್ಯೂನ ಸೇವಿಸಿ.
ಸಿಟ್ರಿಕ್ ಹಣ್ಣುಗಳು
ಸಿಟ್ರಿಕ್ ಅಂಶ ಹೆಚ್ಚಿರುವ ಹಣ್ಣುಗಳು ಅಂದ್ರೆ ಕಿತ್ತಲೆ, ದ್ರಾಕ್ಷಿ ಹಾಗೂ ನಿಂಬೆಹಣ್ಣು. ವಿಟಮಿನ್ ಸಿ ಅಂಶ ಸಮೃದ್ಧಿ ಆಗಿರೋದ್ರಿಂದ ಈ ಹಣ್ಣುಗಳು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.
ಇದೆಲ್ಲದರ ಜೊತೆಗೆ ಡಾರ್ಕ್ ಚಾಕಲೇಟ್, ಟೊಮ್ಯಾಟೊ ,ಸಿಹಿಗೆಣಸು ,ಬೆರ್ರಿ ಹಣ್ಣುಗಳು ,ಅವಕಾಡೊ ಇವುಗಳೆಲ್ಲವೂ ಕಣ್ಣಿನ ಆರೋಗ್ಯವನ್ನು ಉತ್ತಮವಾಗಿಸುತ್ತದೆ.