ತಜ್ಞರು ಹೇಳುವ ಪ್ರಕಾರ ಒಬ್ಬ ಮನುಷ್ಯ ದಿನಕ್ಕೆ ಎಂಟು ಗಂಟೆಗಳ ಕಾಲ ನಿದ್ದೆಯನ್ನು ಮಾಡುವುದು ಉತ್ತಮ. ಇದರಿಂದ ಆರೋಗ್ಯವು ಚೆನ್ನಾಗಿರುತ್ತದೆ.. ಆದರೆ ಕೆಲವರು ತಮ್ಮ ಬಿಸಿ ಲೈಫ್ಸ್ಟೈಲ್ ಇಂದ ಅಥವಾ ನಿದ್ದೆ ಬರದೇ ಇರುವ ಕಾರಣದಿಂದ ಕಡಿಮೆ ಸಮಯ ನಿದ್ದೆ ಮಾಡುತ್ತಾರೆ. ಆದರೆ ಇನ್ನು ಕೆಲವರು 10 ಗಂಟೆ 12 ಗಂಟೆಗಳ ಕಾಲ ನಿದ್ದೆ ಮಾಡ್ತಾರೆ. ಆದ್ರೆ ನಿದ್ದೆ ಅನ್ನುವಂಥದ್ದು ಕಡಿಮೆಯೂ ಆಗಬಾರದು, ಹೆಚ್ಚು ಕೂಡ ಆಗಬಾರದು. ಅತಿಯಾಗಿ ನಿದ್ದೆ ಮಾಡುವುದರಿಂದ ಕೂಡ ಆರೋಗ್ಯದಲ್ಲಿ ಸಾಕಷ್ಟು ಏರುಪೇರುಗಳಾಗಿ ಸಮಸ್ಯೆಗಳು ಎದುರಾಗುತ್ತದೆ. ಹಾಗಿದ್ರೆ ಅತಿಯಾಗಿ ನಿದ್ದೆ ಮಾಡುವುದರಿಂದ ಆರೋಗ್ಯದಲ್ಲಿ ಏನೆಲ್ಲಾ ಸಮಸ್ಯೆಗಳು ಶುರುವಾಗುತ್ತದೆ ಅನ್ನುವ ಪ್ರಶ್ನೆಗೆ ಇಲ್ಲಿದೆ ಮಾಹಿತಿ
ಬೆನ್ನು ನೋವು
ಅತಿಯಾಗಿ ನಿದ್ದೆ ಮಾಡುವುದರಿಂದ ಕೆಲವರಿಗೆ ಬೆನ್ನು ಸೆಳೆತ ಅಥವಾ ನೋವು ಶುರುವಾಗುತ್ತದೆ. ಹಾಗೂ ಇನ್ನಷ್ಟು ಜನಕ್ಕೆ ಕೀಲು ನೋವು ಹೆಚ್ಚಾಗುತ್ತದೆ. ಕಾರಣ ಒಂದೇ ಕಡೆ ಸಾಕಷ್ಟು ಸಮಯ ಕಾಲ ಕಳೆಯುವುದರಿಂದ ಹಾಗೂ ಆಕ್ಟಿವ್ ಆಗಿರದೆ ಇರುವುದು ಕೂಡ.
ತಲೆನೋವು
ನಿದ್ದೆ ಹೆಚ್ಚಾದರೆ ಕೆಲವೊಬ್ಬರಿಗೆ ತಲೆನೋವು ಶುರುವಾಗುತ್ತದೆ ಸಾಕಷ್ಟು ಜನಕ್ಕೆ ಮೈಗ್ರೇನ್ ಅಂದ್ರೆ ಅರ್ಧ ತಲೆನೋವು ಕಾಣಿಸಿಕೊಳ್ಳುತ್ತದೆ.
ಅರಿವಿನ ಕಾರ್ಯ:
ನಿದ್ರೆ ಜಾಸ್ತಿ ಮಾಡುವುದರಿಂದ ಯಾವುದರ ಮೇಲೂ ಹೆಚ್ಚು ಗಮನ ಹರಿಸಲು ಆಗುವುದಿಲ್ಲ, ಸ್ಮರಣೆ ಮತ್ತು ನೆನಪಿನ ಶಕ್ತಿ ಕುಂದುತ್ತದೆ..ಹಾಗೂ ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯಗಳ ಮೇಲೆ ಪರಿಣಾಮ ಬೀರಬಹುದು.
ಜೀರ್ಣಕಾರಿ ಸಮಸ್ಯೆ
ಜೀರ್ಣಾಂಗದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ..ಡೈಜೆಶನ್ ಸರಿಯಾಗಿ ಆಗದಿದ್ದರೆ ಅತಿಸಾರ,ಮಲಬದ್ಧತೆ,ವಾಂತಿ-ವಾಕರಿಕೆ ಸಮಸ್ಯೆ ಹೆಚ್ಚುತ್ತದೆ..
ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲ
ಹೆಚ್ಚು ನಿದ್ದೆ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ, ಇದರಿಂದಾಗಿ ಬೇಗನೆ ಅನಾರೋಗ್ಯಕ್ಕೆ ಒಳಗಾಗಬಹುದು.