ಬೆಂಗಳೂರು : ಕಾಂಗ್ರೆಸ್ ಸರ್ಕಾರದ ನೂತನ ಸ್ಪೀಕರ್ ಆಯ್ಕೆಕಸರತ್ತು ಕೊನೆಗೂ ಬಗೆಹರಿದಿದ್ದು ಪಕ್ಷದ ವರಿಷ್ಠರ ಸೂಚನೆಯ ಮೇರೆಗೆ ಯು.ಟಿ ಖಾದರ್ ಸಭಾಧ್ಯಕ್ಷ ಸ್ಥಾನ ಅಲಂಕರಿಸಲು ಒಪ್ಪಿಕೊಂಡಿದ್ದಾರೆ. ರಣದೀಪ ಸುರ್ಜೆವಾಲಾ ಹಿನ್ನೆಲೆಯಲ್ಲಿ ಖಾದರ್ ಸ್ಪೀಕರ್ ಆಗಲು ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.

ಹಂಗಾಮಿ ಸ್ಪೀಕರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದ ದೇಶಪಾಂಡೆ ಸಚಿವ ಸ್ಥಾನಕ್ಕೆ ಬೇಡಿಕೆಯಿಟ್ಟಿದ್ದರು. ಇದು ನನ್ನ ಕೊನೆಯ ಚುನಾವಣೆಯಾದ ಹಿನ್ನೆಲೆಯಲ್ಲಿ ನಾನು ಜನತೆಗೆ ತೀರಾ ಹತ್ತಿರದಲ್ಲಿದ್ದು ಸೇವೆ ಮಾಡಬೇಕು ಹೀಗಾಗಿ ನನಗೆ ಸಭಾಧ್ಯಕ್ಷ ಸ್ಥಾನ ಬೇಡ ಎಂದು ಹೇಳಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಖಾದರ್ರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿದೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಚಿವ ಸ್ಥಾನ ಅಲಂಕರಿಸಿರುವ ಖಾದರ್ ಈ ಬಾರಿಯೂ ಮಹತ್ವದ ಸಚಿವ ಸ್ಥಾನ ಸ್ವೀಕರಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಇದೀಗ ಸ್ಪೀಕರ್ ಆಗಿ ಖಾದರ್ ಮುಂದುವರಿಯುವುದು ಪಕ್ಕಾ ಆಗಿದೆ.