ಕ್ಯಾನ್ಸರ್ ಎಂಬ ಮಾರಕ ಕಾಯಿಲೆ ಮನುಷ್ಯ ಹಾಗೂ ಪ್ರಾಣಿಗಳಿಗೆ ಹೊಸತೇನು ಅಲ್ಲ.. ಈ ಕಾಯಿಲೆ ಬಂದ ಬಳಿಕ ಜೀವ ಉಳಿಯುವುದರ ಬಗ್ಗೆ ಗ್ಯಾರಂಟಿ ಕೊಡೋಕೆ ಸಾಧ್ಯವಿಲ್ಲ. ಇವತ್ತು ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲಾಗುತ್ತದೆ. ಆದ್ರೆ ಬದುಕುಳಿಯುವ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ.
ಹೆಚ್ಚು ಓದಿದ ಸ್ಟೋರಿಗಳು
ಮನುಷ್ಯರಿಗೆ ಈ ಮಾರಕ ಖಾಯಿಲೆ ಬಂದ ತಕ್ಷಣ ಅದಕ್ಕೆ ಬೇಕಾದ ಚಿಕಿತ್ಸೆಗೆ ಮನುಷ್ಯ ವ್ಯವಸ್ಥೆ ಮಾಡಿ ಕೊಳ್ಳುತ್ತಾನೆ. ಆದ್ರೆ ಪ್ರಾಣಿಗಳಿಗೆ ಹೇಗೆ ಗೊತ್ತಾಗ ಬೇಕು ಅಲ್ವಾ.. ಹೀಗಾಗಿ ಸಾಕಷ್ಟು ಮೂಕ ಜೀವಿಗಳು ಕ್ಯಾನ್ಸರ್ ಗೆ ಬಲಿಯಾಗಿ ಬಿಡುತ್ತವೆ.

ಆದ್ರೆ ಸಾಕು ಪ್ರಾಣಿಗಳ ಕತೆ ಹಾಗಲ್ಲ, ಅವುಗಳಿಗೆ ಏನಾದ್ರು ಸ್ವಲ್ಪ ತೊಂದರೆಯಾದ್ರು ಅವುಗಳ ಬಗ್ಗೆ ಕಾಳಜಿ ವಹಿಸಲು ಅವುಗಳ ಮಾಲಿಕರು ಇರುತ್ತರೆ ಇದರಿಂದ ಅವುಗಳಿಗೆ ಯಾವೂದೇ ತೊಂದರೆ ಬಂದ್ರು ಅದನ್ನ ಪತ್ತೆ ಮಾಡಿ ಬಿಡ್ತಾರೆ. ಜೊತೆಗೆ ಸೂಕ್ತ ಚಿಕಿತ್ಸೆ ಕೊಡಿಸುತ್ತಾರೆ.
ಇದೀಗ ಪಂಜಾಬ್ ಪೊಲೀಸ್ ಇಲಾಖೆ ಕೂಡ ಇಂತಹದ್ದೆ ಮಾನವೀಯ ಕಾರ್ಯ ಮಾಡಿದ್ದಾರೆ ಆ ಮೂಲಕ , ಇಲ್ಲೊಂದು ನಾಯಿ ಕ್ಯಾನ್ಸರ್ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಹೌದು.. ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶ್ವಾನದಳದ ಲ್ಯಾಬ್ರಡಾರ್ ರಿಟ್ರೈವರ್ ತಳಿಯ ನಾಯಿಗೆ ಮಾರಕ ಕ್ಯಾನ್ಸರ್ ಕಾಯಿಲೆ ಕಾಣಿಸಿಕೊಂಡಿತು. ಇದೀಗ ಕ್ಯಾನ್ಸರ್‌ನಿಂದ ಗುಣಮುಖವಾಗಿರುವ ಶ್ವಾನ ಮತ್ತೆ ಕೆಲಸಕ್ಕೆ ಮರಳಿದೆ. ಸ್ವರದ ಅನಾರೋಗ್ಯದ ಬಗ್ಗೆ ತಿಳಿದ ಬಳಿಕ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಕೊಡಿಸಿದ ಪೊಲೀಸರು ಶ್ವಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ

ಪಂಜಾಬ್ ನ ಫರೀದ್‌ಕೋಟ್‌ನಲ್ಲಿ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸೂಪರಿಂಟೆಂಡೆಂಟ್, ಸಿಮ್ಮಿ ಎಂಬ ನಾಯಿ ಕ್ಯಾನ್ಸರ್ ಗೆ ಹೀಗಾಗಿ ಕ್ಯಾನ್ಸರ್ ನ ವಿರುದ್ಧ ಸುದೀರ್ಘ ಹೋರಾಟ ನಡೆಸಿತ್ತು. ಇದೀಗ ಈ ಶ್ವಾನದ ಆರೋಗ್ಯ ಸಂಪೂರ್ಣವಾಗಿ ಚೇತರಿಸಿಕೊಂಡಿದೆ ಈ ಹಿನ್ನೆಲೆಯಲ್ಲಿ ಇದೀಗ ಮತ್ತೆ ಈ ಸಿಮ್ಮಿ ಶ್ವಾನ ಕರ್ತವ್ಯಕ್ಕೆ ಮರಳಿದೆ ಎಂದು ಫರಿದ್ಕೋಟ್ ಎಸ್ಪಿ ಹರ್ಜಿತ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇನ್ನು ಈ ಸೀಮಿ ಶ್ವಾನ ಹಲವು ಬಾರಿ ವಿದ್ವಾಂಸಕ ಸ್ಪೋಟಕಗಳನ್ನ ಪತ್ತೆ ಹಚ್ಚುವಲ್ಲಿ ವಿದೇಶಿ ನಿಷೇಧಿತ ವಸ್ತುಗಳನ್ನ ಪತ್ತೆಹಚ್ಚುವಲ್ಲಿ ಹಾಗೂ ವಿವಿಧ ಪೊಲೀಸ್ ಇಲಾಖೆಯ ನಿರ್ಣಾಯಕ ಕಾರ್ಯಾಚರಣೆಯಲ್ಲಿ ಕೂಡ ಪ್ರಮುಖ ಪಾತ್ರವನ್ನು ವಹಿಸಿತ್ತು ಹೀಗಾಗಿ ಈ ಶ್ವಾನ ಪೊಲೀಸ್ ಇಲಾಖೆಯ ಶ್ವಾನದಳದ ಪ್ರಮುಖ ಕೇಂದ್ರ ಬಿಂದುವು ಆಗಿತ್ತು. ಇದೀಗ ಈ ಶ್ವಾನವನ್ನ ಮಾರಕ ಕ್ಯಾನ್ಸರ್‌ನಿಂದ ಉಳಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.