ಎಲೆಕ್ಷನ್ ಕಮಿಷನ್ ಆಫ್ ಇಂಡಿಯಾಗೆ (ECI) ಸುಪ್ರೀಂ ಕೋರ್ಟ್ (Supreme court) ನೋಟೀಸ್ ಜಾರಿ ಮಾಡಿದೆ.ಈಗಾಗಲೇ ಲೋಕ ಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ದೇಶದ ಉದ್ದಗಲಕ್ಕೂ ಒಟ್ಟು ೭ ಹಂತದಲ್ಲಿ ದೇಶವ್ಯಾಪಿ ಚುನಾವಣೆ ನಡೆಸಲು ಚುನಾವಣಾ ಆಯೋಗ (ECI) ಸಂಪೂರ್ಣ ಸಿದ್ಧತೆಯಲ್ಲಿ ತೊಡಗಿಕೊಂಡಿದೆ. ಈ ಮಧ್ಯೆ ಸುಪ್ರೀಂ ಕೋರ್ಟ್ ಈವಿಎಂ (EVM & VVPAT) ಮತ್ತು ವಿವಿ ಪ್ಯಾಟ್ ಕುರಿತು ಕೇಂದ್ರ ಚುನಾವಣಾ ಆಯೋಗಕ್ಕೆ ನೋಟೀಸ್ ನೀಡಿದೆ.

ಈಗಾಗಲೇ ದೇಶದಲ್ಲಿ ಇವಿಎಂ (EVM) ಆಧರಿತ ಸಾಕಷ್ಟು ಚುನಾವಣೆಗಳು ನಡೆದಿದ್ದರೂ , ಈಗಲೂ ಇವಿಎಂ ಮತ್ತು ವಿವಿ ಪ್ಯಾಟ್ ಗಳ ಮೇಲೆ ಆಗಿಂದ್ದಾಗೆ ಅನುಮಾನಗಳು , ಆರೋಪಗಳು ಕೇಳಿ ಬರುತ್ತಲೇ ಇರುತ್ತದೆ. ಇದುವರೆಗೂ ವಿವಿ ಪ್ಯಾಟ್ ಗಳಲ್ಲಿ ಬರುವ ವೋಟಿಂಗ್ ಸ್ಲಿಪ್ (VV pat slips)ಗಳನ್ನ ಶೇಕಡಾ ೫ರಷ್ಟು ಮಾತ್ರ ಪರಿಶೀಲಲಾಗುತ್ತಿತ್ತು. ಆದ್ರೆ ಅದನ್ನು ಸಂಪೂರ್ಣ ೧೦೦% ರಷ್ಟು ಪರೀಕ್ಷಿಸಬೇಕು. ಇವಿಎಂ ನಲ್ಲಿ ಲೆಕ್ಕ ಸಿಗುವ ಮತಕ್ಕೂ , ವಿವಿ ಪ್ಯಾಟ್ ಸ್ಲಿಪ್ ಗಳಿಗೂ ಲೆಕ್ಕ ಸರಿ ಹೊಂದಬೇಕು . ಅದಕ್ಕಾಗಿ ಶೇಕಡಾ ೧೦೦% ವಿವಿ ಪ್ಯಾಟ್ ಸ್ಲಿಪ್ ಪರಿಶೀಲಿಸೋದು ಅಗತ್ಯ ಅಂತ ಸುಪ್ರೀಂ ಕೋರ್ಟ್ (Supreme court) ಚುನಾವಣಾ ಆಯೋಗಕ್ಕೆ ಹೇಳಿದೆ.

ಪ್ರಜಾಪಭುತ್ವದಲ್ಲಿ (Democracy) ನ್ಯಾಯ ಸಮ್ಮತವಾದ ಚುನಾವಣೆ ನಡೆಸೋದು ಚುನಾವಣಾ ಆಯೋಗದ ಜವಾಬ್ದಾರಿ ಆಗಿದೆ. ಹೀಗಾಗಿ ಚುನಾವಣಾ ಅಕ್ರಮಗಳಿಗೆ ಅವಕಾಶ ಮಾಡಿಕೊಡದಂತೆ ಸುಪ್ರೀಂ ಕೋರ್ಟ್ ಎಲೆಕ್ಷನ್ ಕಮಿಷನ್ ಗೆ ನೋಟೀಸ್ ನೀಡಿದೆ. ಇವಿಎಂ ಮತ್ತು ವಿವಿ ಪ್ಯಾಟ್ ಗಳನ್ನ ಸರಿಯಾದ ರೀತಿಯಲ್ಲಿ ಪರೀಕ್ಷೆಗೆ ಒಳಪಡಿಸಿ ನಂತರವೇ ಚುನಾವಣೆಗೆ ಬಳಸಬೇಕು ಎಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ತಾಕೀತು ಮಾಡಿದೆ. ಶೇಕಡಾ ೧೦೦ ರಷ್ಟು ಕ್ಷಮತೆ ಪರೀಕ್ಷಿಸಿದ ಮೇಲೆ ಮಾತ್ರ ಇವಿಎಂ ಮತ್ತು ವಿವಿಪ್ಯಾಟ್ ಗಳ ಬಳಕೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ನೋಟೀಸ್ ನೀಡಿರೋದು ಬಗೆ ಬಗೆಯ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.