ಲೋಕಸಭೆ ಚುನಾವಣೆ (Parliment election) ನಮೋಗೆ (Namo) ಮಾತ್ರ ಅಲ್ಲ, ಬಿಎಸ್ ವೈಗೂ (BSY) ಅಳಿವು ಉಳಿವಿನ ಯುದ್ಧ. ವಿಧಾನಸಭೆ ಎಲೆಕ್ಷನ್ ಫಲಿತಾಂಶದಿಂದ (Election results) ಪಾಠ ಕಲಿತ ಹೈಕಮಾಂಡ್ ಎಚ್ಚೆತ್ತಿದೆ. ಬಿಎಸ್ವೈ ಪುತ್ರನಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿ ಲೋಕಸಭೆ ದಿಗ್ವಿಜಯಕ್ಕಾಗಿ ರೇಸ್ಗೆ ಇಳಿಸಲಾಗಿದೆ.. ಈ ರೇಸ್ಗೆ ಮಾಜಿ ಸಿಎಂ ಯಡಿಯೂರಪ್ಪ ಬಲ ತುಂಬಿದ್ದಾರೆ. ಸೋ ಬೀದರ್ ಟು ಚಾಮರಾಜನಗರ (Bidar to chamarajnagar) ವರೆಗೆ ಸಿಡಿದ ಬಂಡಾಯದ ಕಿಡಿಗೆ ಅಶ್ರುವಾಯು ಪ್ರಯೋಗ ಆಗ್ತಿದೆ.
ನಾಯಕತ್ವ ಸಿಕ್ಕ ಬಳಿಕ ಫೀಲ್ಡ್ಗಿಳಿದ ಬಿಜೆಪಿ (Bjp) ಪಾಲಿನ ರಾಜಾಹುಲಿ, ಪಕ್ಷ ಬಿಟ್ಟವರನ್ನ ಮರಳಿ ಪಕ್ಷದ ತೆಕ್ಕೆಗೆ ಬಾಚಿದ್ದಾರೆ.. ಬಂಡೆದ್ದ ಜಾಗಕ್ಕೆ ಹೋಗಿ ಮದ್ದು ನೀಡಿ ಮದ್ದಾನೆಗಳನ್ನ ಪಳಗಿಸ್ತಿದ್ದಾರೆ. ಚಿತ್ರದುರ್ಗದ (Chitra durga) ಟಿಕೆಟ್ಗಾಗಿ ಬಂಡೆದ್ದ ಹೊಳಲ್ಕೆರೆ ಶಾಸಕ ಚಂದ್ರಪ್ಪ ಪುತ್ರ ರಘುಚಂದನ್ಗೆ (Raghu chandan) ಬೆಂಗಳೂರಿಗೆ ಕರೆಯಿಸಿ ರಾಜೀ ಸಂಧಾನ ಮುಗಿಸಿದ್ದಾರೆ . ಇತ್ತ, ಚಿಕ್ಕಬಳ್ಳಾಪುರದಲ್ಲಿ (Chikkaballapura) ಹಾರಿದ್ದ ಬಂಡಾಯದ ಬಾವುಟ ಕೆಳಗಿಳಿದಿದೆ.. ಯಡಿಯೂರಪ್ಪ ಸೂಚನೆ ಮೇರೆಗೆ ಭೇಟಿಗೆ ಆಗಮಿಸಿದ ಎಸ್.ಆರ್ ವಿಶ್ವನಾಥ್ರನ್ನ (S.R Vishwanath) ಮಾತುಕಥೆ ನಡೆಸಿದ್ದಾರೆ.
ಇನ್ನು, ದಳ ಪಾಲಾಗಿರುವ ಹಾಸನ (Hassan) ಕ್ಷೇತ್ರದಲ್ಲಿ ಬಿಜೆಪಿಯೊಳಗೆ ಎದ್ದಿದ್ದ ಅಸಮಾಧಾನವನ್ನ ವಿಜಯೇಂದ್ರ ಶಮನ ಮಾಡಿದ್ದಾರೆ.. ಹಾಸನ ಕ್ಷೇತ್ರದ ಸಮನ್ವಯ ಸಭೆ ನಡೆಸಿದ ವಿಜಯೇಂದ್ರ ಸಂಧಾನ ನಡೆಸಿದ್ರು.. ಪ್ರಜ್ವಲ್ ರೇವಣ್ಣರನ್ನ (prajwal Revanna) ಗೆಲ್ಲಿಸಬೇಕು.. ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕು ಅನ್ನೋ ತೀರ್ಮಾನಕ್ಕೆ ಪ್ರೀತಂಗೌಡ (preetham gowda) ಸಮ್ಮತಿಸಿದ್ರು.ಹಲವು ಕ್ಷೇತ್ರಗಳಲ್ಲಿ ಎದುರಾಗಿದ್ದ ಬಂಡಾಯವನ್ನ ಬಿಎಸ್ವೈ ಮತ್ತು ವಿಜಯೇಂದ್ರ ಸಂಧಾನದ ಮೂಲಕ ಬಗೆಹರಿಸ್ತಿದ್ದಾರೆ.. ಈ ಮೂಲಕ ಆತಂಕದಲ್ಲಿ ಕಮಲ ನಳನಳಿಸ್ತಿದೆ