
ಬೆಂಗಳೂರಿನಲ್ಲಿ ಹಸುಗಳ ಕೆಚ್ಚಲು ಕತ್ತರಿಸಿದ ಪ್ರಕರಣದ ಬಗ್ಗೆ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಪಶು ಆಸ್ಪತ್ರೆ ಮಾಡಬೇಕು ಎಂದು ದಾನಿಗಳು ಜಾಗ ನೀಡಿದ್ದರು. ಆದರೆ ಜಮೀರ್ ಅಹಮದ್ ಅದನ್ನು ವಕ್ಪ್ ಎಂದು ಮಾಡಿದ್ದರು. ಹೈಕೋರ್ಟ್‌ನಲ್ಲಿ ಅದಕ್ಕೆ ತಡೆಯಾಜ್ಞೆ ಸಿಕ್ಕಿದೆ. ಇದರಿಂದಾಗಿ ರೊಚ್ಚಿಗೆದ್ದ ಮತಾಂಧರು, ಈ ಕೃತ್ಯ ಮಾಡಿದ್ದಾರೆ. ಮುಸ್ಲಿಂಮರಲ್ಲಿ ಅಸಹಿಷ್ಟನುತೆ ಇದೆ ಅನ್ನೋದು ಗೊತ್ತಾಗುತ್ತದೆ ಎಂದಿದ್ದಾರೆ.

ಕಾಂಗ್ರೆಸ್ ಸರ್ಕಾರ ಮುಸ್ಲಿಂಮರನ್ನ ತುಷ್ಟಿಕರಣ ಮಾಡುತ್ತಿದೆ. ರಾಜ್ಯದಲ್ಲಿ ಗೋವುಗಳು ಕೂಡಾ ಸುರಕ್ಷಿತವಾಗಿಲ್ಲ. ಗೃಹಮಂತ್ರಿಗಳು ಈಗ ಏನ್ ಮಾಡ್ತಾರೆ ನೋಡೋಣ ಎಂದಿದ್ದಾರೆ ಯತ್ನಾಳ್. ಕರ್ನಾಟಕದಲ್ಲಿ ಹಿಂದೂಗಳು ಜೀವನ ಮಾಡದಂತಾಗಿದೆ ಎಂದಿರುವ ಶಾಸಕ ಯತ್ನಾಳ್, ಡಿಕೆ ಶಿವಕುಮಾರ್ ಈ ರಾಜ್ಯದ ಮುಖ್ಯಮಂತ್ರಿ ಆಗೋದಿಲ್ಲ. ಶತ್ರು ಸಂವಾರ ಆಗಬೇಕು ಎಂದು ಪೂಜೆ ಮಾಡಿಸುತ್ತಾರೆ. ಆದರೆ ಹಿಂದೂಗಳ ಮೇಲೆ ದಬ್ಬಾಳಿಕೆ ಆದ್ರೆ ಏನು ಮಾತಾಡಲ್ಲ. ಡಿ.ಕೆ ಶಿವಕುಮಾರ್ ಕೊಳಕು ಬುದ್ದಿಯಿಂದಾಗಿ ಅವರು ಏನೂ ಆಗೋದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ರಾಜ್ಯದಲ್ಲಿ ಹಿಂದೂ ಮಹಿಳೆಯರ ಮೇಲೆ ದಬ್ಬಾಳಿಕೆ ವಿಚಾರದ ಬಗ್ಗೆ ಮಹಿಳಾ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಯಾಕೆ ಮಾತಾಡ್ತಿಲ್ಲ. ಪಂಚಮಸಾಲಿ ಮಗಳು ಅಂದಿದ್ರು, ಈಗ ವೀರಶೈವ ಸಮುದಾಯದ ಮಹಿಳೆ ಮೇಲೆ ದಬ್ಬಾಳಿಕೆ ಆದ್ರೆ ಯಾಕೆ ಮಾತಾಡ್ತಿಲ್ಲ ಅಂತಾನೂ ಪ್ರಶ್ನೆ ಮಾಡಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಮಾಡ್ತಾಯಿರೋದು ಸರಿಯಲ್ಲ. ಡಿ.ಕೆ ಶಿವಕುಮಾರ್ ಬೆಂಬಲ ಇದೆ ಎಂದು ಈ ರೀತಿ ಮಾಡೋದು ಸರಿಯಲ್ಲ. ಈ ಸರ್ಕಾರ ಪತನವಾಗೋದಕ್ಕೆ ಲಕ್ಷ್ಮಿ ಹೆಬ್ಬಾಳಕರ್ ಕಾರಣ ಆಗುತ್ತಾರೆ ಅಂತಾನು ಯತ್ನಾಳ್ ಹೇಳಿದ್ದಾರೆ.

ವಿಜಯನಗರಪುರದ ಹಗರಿಬೊಮ್ಮನಹಳ್ಳಿ ತಾಲೂಕಿನ ಬಂಡಿಹಳ್ಳಿ ಬಳಿ ಸಿಎಂ ಸಿದ್ದರಾಮಯ್ಯ ಹಸುಗಳ ಕೆಚ್ಚಲು ಕೋಯ್ದ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆರ. ಕೆಚ್ಚಲು ಕೊಯ್ದಿದ್ದು ತಪ್ಪು, ಕಮಿಷನರ್ ಅವರಿಗೆ ನಾನು ಕಳಿಸಿದ್ದೇನೆ. ನನಗೆ ಈಗಷ್ಟೆ ಮಾಹಿತಿ ಬಂತು. ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಇನ್ನು ಕೃತ್ಯವನ್ನು ಯಾರು ಮಾಡಿದ್ದಾರೆ ಅಂತ ಗೊತ್ತಿಲ್ಲ, ಪತ್ತೆ ಹಚ್ಚೊ ಕೆಲಸ ಮಾಡಲಾಗ್ತಿದೆ. ಕಾನೂನು ಪ್ರಕಾರ ಶಿಕ್ಷೆಯಾಗುತ್ತದೆ. ಹಿಂದೂಪರ ಸಂಘಟನೆಗಳು ರಾಜಕೀಯಕ್ಕಾಗಿ ಈ ವಿಚಾರದಲ್ಲಿ ಪ್ರತಿಭಟನೆ ಮಾಡಬಾರದು ಎಂದು ತಿಳಿಸಿದ್ದಾರೆ.








