ಲೋಕಸಭಾ ಸದಸ್ಯ ಸ್ಥಾನದಿಂದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಉಚ್ಛಾಟನೆ ಮಾಡುವಂತೆ ಲೋಕಸಭಾ ನೀತಿಗಳ ಸಮಿತಿ ಸ್ಪೀಕರ್‌ಗೆ ಶಿಫಾರಸ್ಸು ಮಾಡಿದೆ.
ಲೋಕಸಭಾ ಎಥಿಕ್ಸ್ ಸಮಿತಿಯ ವರದಿಯನ್ನು ಇವತ್ತು ಲೋಕಸಭೆಯಲ್ಲಿ ಮಂಡಿಸಲಾಯಿತು.
ಬಿಜೆಪಿ ಸಂಸದ ನಿಶಿಕಾಂತ್ ದುಬೇ ಅ ೧೫ರಂದು ಕೊಟ್ಟ ದೂರಿನ ಮೇರೆ ಟಿಎಂಸಿ ಸಂಸದೆ ವಿರುದ್ಧ ಎಥಿಕ್ಸ್ ಸಮಿತಿ ತನಿಖೆ ನಡೆಸಿತ್ತು. ಉದ್ಯಮಿ ಗೌತಮ್ ಅದಾನಿ ವಿರುದ್ಧ ಪ್ರಶ್ನೆಗಳನ್ನು ಕೇಳಲು ಮೊಯಿತ್ರಾ ಲಂಚ ಪಡೆದಿದ್ದರು ಎಂಬ ಆರೋಪ ಹೊರಿಸಲಾಗಿತ್ತು.
ಮೊಯಿತ್ರಾ ವಿರುದ್ಧ ಆರೋಪದ ಬಗ್ಗೆ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಯ ಮೂಲಕ ತನಿಖೆ ನಡೆಸುವಂತೆ ಬಿಜೆಪಿ ಸಂಸದ ವಿನೋದ್ ಕುಮಾರ್ ಸೋನ್ಕಾರ್ ಮುಖ್ಯಸ್ಥರಾಗಿರುವ ಸಮಿತಿ ಸ್ಪೀಕರ್ ಓಂ ಬಿರ್ಲಾ ಅವರಿಗೆ ಶಿಫಾರಸ್ಸು ಮಾಡಿದೆ.
ನಾಳಿನ ರಿಸಲ್ಟ್ ಮೂರು ಕ್ಷೇತ್ರದಲ್ಲಿ ಗೆಲುವು ಸೋಲು ಯಾರಿಗೆ.
https://youtu.be/RnzktBndGJk
Read moreDetails