ಸ್ಪೀಕರ್ ಹುದ್ದೆ ಕುರಿತು ಸಚಿವ ಜಮೀರ್ ಆಡಿದ ಮಾತಿಗೆ ಇಂದು ಕೂಡ ಆಕ್ರೋಶ ವ್ಯಕ್ತಪಡಿಸಿರುವ ಮಜಿ ಸಚಿವ ಈಶ್ವರಪ್ಪ, ಜಮೀರ್ ಅಹಮ್ಮದ್ ತೆಲಂಗಾಣದಲ್ಲಿ ಪ್ರಚಾರಕ್ಕೆ ಹೋದಾಗ ಸರ್ಕಾರದ ಸಭಾಧ್ಯಕ್ಷ ಪೀಠಕ್ಕೆ ಅಪಮಾನ ಮಾಡಿದ್ದಾರೆ. ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದ್ದಾರೆ.
ಶಿವಮಿಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ ಭಾರತದ ಸಂವಿಧಾನ ಪ್ರಕಾರ ಆಡಳಿತ ನಡೆಸುತ್ತಿದೆಯಾ ಅಥವಾ ಪಾಕಿಸ್ತಾನದ ಇಸ್ಲಾಮಿಕ್ ಪ್ರಕಾರ ಆಡಳಿತ ನಡೆಸುತ್ತಿದೆಯಾ? ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ
ಮುಸ್ಲಿಂ ಸಭಾಧ್ಯಕ್ಷರಿಗೆ ಎಲ್ಲರೂ ತಲೆಬಾಗಿ ವಿಧಾನಸಭೆ ಚಟುವಟಿಕೆ ನಡೆಸಬೇಕು. ಮುಸ್ಲಿಂ ನಾಯಕರಿಗೆ ತಲೆಬಾಗಬೇಕು ಎಂಬುದಕ್ಕೆ ನನ್ನ ವಿರೋಧವಿದೆ. ಸಂವಿಧಾನ ಪೀಠಕ್ಕೆ, ಸ್ಪೀಕರ್ ಸ್ಥಾನಕ್ಕೆ ನಾವು ಮರ್ಯಾದೆ ಕೊಡುವುದು. ಖಾದರ್ ಎಂಬ ಬೋಳಪ್ಪ ಇದ್ದಾನೆಂದು ನಾವು ಗೌರವ ಕೊಡಲ್ಲ. ಸಂವಿಧಾನ ಪೀಠಕ್ಕೆ, ಸ್ಪೀಕರ್ ಖಾದರ್ ಗೆ ನಾವು ಗೌರವ ಕೊಡುತ್ತೇವೆ ಎಂದು ಹೇಳಿದ್ದಾರೆ.
ಜಮೀರ್ ಅಹಮ್ಮದ್ ಒಬ್ಬ ರಾಷ್ಟ್ರದ್ರೋಹಿ, ಅವನು ಸಂವಿಧಾನ ಪೀಠಕ್ಕೆ ಅಪಮಾನ ಮಾಡಿದ್ದಾನೆ. ತಕ್ಷಣ ಅವನನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು. ಮುಂದಿನ ದಿನಗಳಲ್ಲಿ ಜನ ಮತ ಹಾಕಬೇಕಾದರೆ ಯೋಚನೆ ಮಾಡಬೇಕು ಎಂದರು.

ಮುಸ್ಲಿಮರ ಕೂಡಾ ಜಮೀರ್ ಅಹಮ್ಮದ್ ಹೇಳಿಕೆ ತಪ್ಪಾಗಿದೆ ಎಂದರೆ ಖಂಡಿಸಬೇಕು ಎಂದು ಈಶ್ವರಪ್ಪ ಒತ್ತಾಯಿಸಿದ್ದಾರೆ.