ಲೋಕಸಭಾ ಚುನಾವಣೆಯ ನಂತರ ಸೈಲೆಂಟ್ ಆಗಿದ್ದ ಈಶ್ವರಪ್ಪ ಇದ್ದಕ್ಕಿದ್ದ ಹಾಗೆ ಸುದ್ದಿಗೋಷ್ಠಿ ನಡೆಸಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕುವ ಆಶಯದೊಂದಿಗೆ ದೇಶ ಮುನ್ನಡೆಸುತ್ತಿದ್ದು, ಇತ್ತ ಯಡಿಯೂರಪ್ಪ ತಮ್ಮ ಇಬ್ಬರೂ ಮಕ್ಕಳಿಗೆ ಪಕ್ಷದಲ್ಲಿ ಸ್ಥಾನಮಾನ ಒದಗಿಸುವ ಮೂಲಕ ಕುಟುಂಬ ರಾಜಕಾರಣದ ಮೂಲ ಬೀಜವಾಗಿದ್ದರೆ ಎಂದು ಹರಿಹಾಯ್ದಿದ್ದಾರೆ.
ಯಡಿಯೂರಪ್ಪ ತಮ್ಮ ಹಿಂದೆ ಮುಂದೆ ಸುತ್ತುವ ಕೆಲ ನಾಯಕರನ್ನು ಮಾತ್ರ ಮುನ್ನಲೆಗೆ ತರುತ್ತಾರೆ. ಅದೇ ಹಿಂದುತ್ವ ಪ್ರತಿಪಾದಿಸುವ ನಾಯಕರನ್ನು ಮೂಲೆ ಗುಂಪು ಮಾಡಿದ್ದಾರೆ. ನಾನು ಪಕ್ಷ ಬಿಡಲು ಕೂಡ ಯಡಿಯೂರಪ್ಪನವರೇ ಕಾರಣ ಎಂದು ಆರೋಪಗಳ ಸುರಿಮಳೆಗೈದಿದ್ದಾರೆ.