• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, May 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ನಕಲಿ UPI ಬಳಸಿ ಲಕ್ಷಾಂತರ ರೂ ವಂಚಸಿದ ಇಂಜಿನಿಯರಿಂಗ್ ವಿದ್ಯಾರ್ಥಿ!

Any Mind by Any Mind
September 10, 2021
in ಕರ್ನಾಟಕ
0
ನಕಲಿ UPI ಬಳಸಿ ಲಕ್ಷಾಂತರ ರೂ ವಂಚಸಿದ  ಇಂಜಿನಿಯರಿಂಗ್ ವಿದ್ಯಾರ್ಥಿ!
Share on WhatsAppShare on FacebookShare on Telegram

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ನಕಲಿ ಯುಪಿಐ ಪಾವತಿ ಮಾಡುವ ಮೂಲಕ ಹಲವಾರು ಅಂಗಡಿ ಮುಂಗಟ್ಟುಗಳಲ್ಲಿ ಮೋಸ ಮಾಡಿದನೆಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಚಿಕ್ಕಪೇಟೆ ಸಮೀಪದ ರಾಜಾ ಮಾರುಕಟ್ಟೆಯ ಆಭರಣ ವ್ಯಾಪಾರಿ ಟಿ ಎ ಸುರೇಶ್ ಅವರು ನೀಡಿದ ದೂರಿನ ಮೇರೆಗೆ ಕನಕಪುರ ನಿವಾಸಿ ಪ್ರಶಾಂತ್ ಅವರನ್ನು ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಸುರೇಶ್ ಪೊಲೀಸರಿಗೆ ತಿಳಿಸಿದ್ದು, ಓರ್ವ ಯುವಕ ತನ್ನ ಅಂಗಡಿಯಿಂದ ಆಗಸ್ಟ್ 14 ರಂದು 1.06 ಲಕ್ಷ ರೂ.ಗೆ ಬೆಳ್ಳಿ ದೀಪ, ಪ್ಲೇಟ್ ಮತ್ತು ಚೊಂಬು ಖರೀದಿಸಿದ್ದಾನೆ. ಗ್ರಾಹಕರು ಯುಪಿಐ ಮೂಲಕ ಪಾವತಿಸಲು ಮುಂದಾದರು. ಕೆಲವು ನಿಮಿಷಗಳ ನಂತರ, ಗ್ರಾಹಕ ಸುರೇಶನಿಗೆ ತನ್ನ ಯುಪಿಐ ಸ್ಕ್ಯಾನರ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿದನು ಆದರೆ ಒಂದು ಮಾರ್ಗವನ್ನು ಸೂಚಿಸಿದನು. ಆತ ನನ್ನ ದೂರವಾಣಿ ಸಂಖ್ಯೆಯನ್ನು ತೆಗೆದುಕೊಂಡು ತನ್ನ ಫೋನ್‌ಪೇ ಖಾತೆಯಲ್ಲಿ ಎರಡು ಸಂದೇಶಗಳನ್ನು ತೋರಿಸಿದನು.

ಒಂದು ಸಂದೇಶದಲ್ಲಿ 56 ಸಾವಿರ ರೂಪಾಯಿ ಮತ್ತು ಇನ್ನೊಂದು ಸಂದೇಶದಲ್ಲಿ50 ಸಾವಿರ ರೂಪಾಯಿ ಸ್ವೀಕರಿಸಲಾಗಿದೆ ಎಂದು ತೋರಿಸಿದ ನಂತರ ಅವರು ಬೆಳ್ಳಿ ಸಾಮಾನುಗಳನ್ನು ತೆಗೆದುಕೊಂಡು ಹೊರಟರು.

ಆದರೆ ಅಂಗಡಿ ಮಾಲೀಕ ಸುರೇಶರವರು ಮರುದಿನ ತಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಿದಾಗ, ಹಣ ಜಮಾ ಆಗಿಲ್ಲವೆಂದು ತಿಳಿದು ಬಂದಿದೆ. ಅವರು ಗ್ರಾಹಕರ ಫೋನ್‌ಪೇ ಸಂಖ್ಯೆಗೆ ಸಂದೇಶ ಕಳುಹಿಸಿದರು ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ತಾನು ಮೋಸ ಹೋಗಿದ್ದೇನೆ ಎಂದು ಅರಿತ ಅವರು ಆಗಸ್ಟ್ 17 ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.

ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಪಶ್ಚಿಮ ವಿಭಾಗದ ಅಪರಾಧ ಪೊಲೀಸರು ಆರೋಪಿ ಪ್ರಶಾಂತ್ ಮೇಲೆ ಕೇಸ್‌ ದಾಖಲಿಸಿಕೊಂಡಿದ್ದಾರೆ.

ಆರೋಪಿ ಪ್ರಶಾಂತ್‌ ಇದೇ ಮಾದರಿಯಲ್ಲಿ ರಾಮಮೂರ್ತಿನಗರದ ಚಿನ್ನದ ವ್ಯಾಪಾರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ. ಇದೇ ವೇಳೆ ಪ್ರಶಾಂತ್‌ ವಿಜಯನಗರದ ಅಂಗಡಿಯೊಂದರಲ್ಲಿ ಕ್ಯಾಮರಾ ಖರಿದಿಸಿರುವುದು ಬೆಳಕಿಗೆ ಬಂದಿದೆ ಆದರೆ, ಅದಕ್ಕೆ ನಕಲಿ ಪಾವತಿ ಮಾಡಿದ್ದಾರೆಯೇ ಎಂದು ಇನ್ನು ತಿಳಿದು ಬಂದಿಲ್ಲ.

ಆತನಿಂದ 10 ಗ್ರಾಂ ಚಿನ್ನಾಭರಣ, 1.5 ಕೆಜಿ ಬೆಳ್ಳಿ ವಸ್ತುಗಳು ಮತ್ತು ಕ್ಯಾಮರಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಾರಂಭದಲ್ಲಿ ಆತ ತನ್ನ ಊರಿನಲ್ಲಿ ಈ ರೀತಿ ಮಾಡುತ್ತಿದಿದ್ದು ತನಿಖೆಯ ವೇಳೆ ಬೆಳಕಿಗೆ ಬಂದಿದೆ . ಅದರ ಯಶಸ್ಸಿನ ಭಾಗವಾಗಿ ದೊಡ್ಡ ಮೊತ್ತಕ್ಕೆ ನಕಲಿ ಪಾವತಿಗಳನ್ನು ಮಾಡಲು ಆತನಿಗೆ ಧೈರ್ಯ ತುಂಬಿತು, ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ

Tags: Engineering studentLakhs fakeUpi
Previous Post

ಬೊಮ್ಮಾಯಿ ದೆಹಲಿ ಪ್ರವಾಸ ಫಲಪ್ರದ; ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್; ಮಂತ್ರಿ ಸ್ಥಾನಕ್ಕೆ ಭಾರೀ ಪೈಪೋಟಿ

Next Post

ಲೋಕಾಯುಕ್ತ ಕಾಯ್ದೆ ಬಲಪಡಿಸುವ ಆಶ್ವಾಸನೆ ಮತ್ತು ಜನಪ್ರತಿನಿಧಿಗಳ ಕರ್ತವ್ಯ?

Related Posts

BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್
Top Story

BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

by ಪ್ರತಿಧ್ವನಿ
May 25, 2026
0

ಚೆನೈ : ರಾಜ್ಯದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಮೇಕೆದಾಟು ನೀರಾವರಿ ಯೋಜನೆಗೆ ತಮಿಳುನಾಡಿನ ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿದೆ. ಈ ಹಿಂದಿನ ಸರ್ಕಾರಗಳು ಇದರ ವಿರುದ್ಧ ನಿಲುವನ್ನು ಹೊಂದಿದ್ದವು, ಅದರಂತೆ...

Read moreDetails
ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

May 25, 2026
ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

May 25, 2026
ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

May 25, 2026
ಸಿಎಂ ಸಿದ್ದರಾಮಯ್ಯ ದಿಢೀರ್ ದೆಹಲಿಗೆ : ಬದಲಾಗುತ್ತಾ ನಾಯಕತ್ವ..?

ಸಿಎಂ ಸಿದ್ದರಾಮಯ್ಯ ದಿಢೀರ್ ದೆಹಲಿಗೆ : ಬದಲಾಗುತ್ತಾ ನಾಯಕತ್ವ..?

May 25, 2026
Next Post
ಲೋಕಾಯುಕ್ತ ಕಾಯ್ದೆ ಬಲಪಡಿಸುವ ಆಶ್ವಾಸನೆ ಮತ್ತು ಜನಪ್ರತಿನಿಧಿಗಳ ಕರ್ತವ್ಯ?

ಲೋಕಾಯುಕ್ತ ಕಾಯ್ದೆ ಬಲಪಡಿಸುವ ಆಶ್ವಾಸನೆ ಮತ್ತು ಜನಪ್ರತಿನಿಧಿಗಳ ಕರ್ತವ್ಯ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada