ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ನಕಲಿ ಯುಪಿಐ ಪಾವತಿ ಮಾಡುವ ಮೂಲಕ ಹಲವಾರು ಅಂಗಡಿ ಮುಂಗಟ್ಟುಗಳಲ್ಲಿ ಮೋಸ ಮಾಡಿದನೆಂದು ಪೊಲೀಸರು ತಿಳಿಸಿದ್ದಾರೆ.
ಚಿಕ್ಕಪೇಟೆ ಸಮೀಪದ ರಾಜಾ ಮಾರುಕಟ್ಟೆಯ ಆಭರಣ ವ್ಯಾಪಾರಿ ಟಿ ಎ ಸುರೇಶ್ ಅವರು ನೀಡಿದ ದೂರಿನ ಮೇರೆಗೆ ಕನಕಪುರ ನಿವಾಸಿ ಪ್ರಶಾಂತ್ ಅವರನ್ನು ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಸುರೇಶ್ ಪೊಲೀಸರಿಗೆ ತಿಳಿಸಿದ್ದು, ಓರ್ವ ಯುವಕ ತನ್ನ ಅಂಗಡಿಯಿಂದ ಆಗಸ್ಟ್ 14 ರಂದು 1.06 ಲಕ್ಷ ರೂ.ಗೆ ಬೆಳ್ಳಿ ದೀಪ, ಪ್ಲೇಟ್ ಮತ್ತು ಚೊಂಬು ಖರೀದಿಸಿದ್ದಾನೆ. ಗ್ರಾಹಕರು ಯುಪಿಐ ಮೂಲಕ ಪಾವತಿಸಲು ಮುಂದಾದರು. ಕೆಲವು ನಿಮಿಷಗಳ ನಂತರ, ಗ್ರಾಹಕ ಸುರೇಶನಿಗೆ ತನ್ನ ಯುಪಿಐ ಸ್ಕ್ಯಾನರ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿದನು ಆದರೆ ಒಂದು ಮಾರ್ಗವನ್ನು ಸೂಚಿಸಿದನು. ಆತ ನನ್ನ ದೂರವಾಣಿ ಸಂಖ್ಯೆಯನ್ನು ತೆಗೆದುಕೊಂಡು ತನ್ನ ಫೋನ್‌ಪೇ ಖಾತೆಯಲ್ಲಿ ಎರಡು ಸಂದೇಶಗಳನ್ನು ತೋರಿಸಿದನು.
ಒಂದು ಸಂದೇಶದಲ್ಲಿ 56 ಸಾವಿರ ರೂಪಾಯಿ ಮತ್ತು ಇನ್ನೊಂದು ಸಂದೇಶದಲ್ಲಿ50 ಸಾವಿರ ರೂಪಾಯಿ ಸ್ವೀಕರಿಸಲಾಗಿದೆ ಎಂದು ತೋರಿಸಿದ ನಂತರ ಅವರು ಬೆಳ್ಳಿ ಸಾಮಾನುಗಳನ್ನು ತೆಗೆದುಕೊಂಡು ಹೊರಟರು.
ಆದರೆ ಅಂಗಡಿ ಮಾಲೀಕ ಸುರೇಶರವರು ಮರುದಿನ ತಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಿದಾಗ, ಹಣ ಜಮಾ ಆಗಿಲ್ಲವೆಂದು ತಿಳಿದು ಬಂದಿದೆ. ಅವರು ಗ್ರಾಹಕರ ಫೋನ್‌ಪೇ ಸಂಖ್ಯೆಗೆ ಸಂದೇಶ ಕಳುಹಿಸಿದರು ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ತಾನು ಮೋಸ ಹೋಗಿದ್ದೇನೆ ಎಂದು ಅರಿತ ಅವರು ಆಗಸ್ಟ್ 17 ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಪಶ್ಚಿಮ ವಿಭಾಗದ ಅಪರಾಧ ಪೊಲೀಸರು ಆರೋಪಿ ಪ್ರಶಾಂತ್ ಮೇಲೆ ಕೇಸ್ ದಾಖಲಿಸಿಕೊಂಡಿದ್ದಾರೆ.
ಆರೋಪಿ ಪ್ರಶಾಂತ್ ಇದೇ ಮಾದರಿಯಲ್ಲಿ ರಾಮಮೂರ್ತಿನಗರದ ಚಿನ್ನದ ವ್ಯಾಪಾರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ. ಇದೇ ವೇಳೆ ಪ್ರಶಾಂತ್ ವಿಜಯನಗರದ ಅಂಗಡಿಯೊಂದರಲ್ಲಿ ಕ್ಯಾಮರಾ ಖರಿದಿಸಿರುವುದು ಬೆಳಕಿಗೆ ಬಂದಿದೆ ಆದರೆ, ಅದಕ್ಕೆ ನಕಲಿ ಪಾವತಿ ಮಾಡಿದ್ದಾರೆಯೇ ಎಂದು ಇನ್ನು ತಿಳಿದು ಬಂದಿಲ್ಲ.
ಆತನಿಂದ 10 ಗ್ರಾಂ ಚಿನ್ನಾಭರಣ, 1.5 ಕೆಜಿ ಬೆಳ್ಳಿ ವಸ್ತುಗಳು ಮತ್ತು ಕ್ಯಾಮರಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಾರಂಭದಲ್ಲಿ ಆತ ತನ್ನ ಊರಿನಲ್ಲಿ ಈ ರೀತಿ ಮಾಡುತ್ತಿದಿದ್ದು ತನಿಖೆಯ ವೇಳೆ ಬೆಳಕಿಗೆ ಬಂದಿದೆ . ಅದರ ಯಶಸ್ಸಿನ ಭಾಗವಾಗಿ ದೊಡ್ಡ ಮೊತ್ತಕ್ಕೆ ನಕಲಿ ಪಾವತಿಗಳನ್ನು ಮಾಡಲು ಆತನಿಗೆ ಧೈರ್ಯ ತುಂಬಿತು, ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ