• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನವೀಕರಿಸಬಹುದಾದ ಇಂಧನ ವಲಯದಲ್ಲಿ ಖಾಸಗಿ ಹೂಡಿಕೆ ಆಕರ್ಷಣೆಗೂ ಒತ್ತು: ಇಂಧನ ಸಚಿವ ಜಾರ್ಜ್

Any Mind by Any Mind
June 21, 2023
in Top Story, ಇದೀಗ, ಕರ್ನಾಟಕ, ರಾಜಕೀಯ
0
ನವೀಕರಿಸಬಹುದಾದ ಇಂಧನ ವಲಯದಲ್ಲಿ ಖಾಸಗಿ ಹೂಡಿಕೆ ಆಕರ್ಷಣೆಗೂ ಒತ್ತು: ಇಂಧನ ಸಚಿವ ಜಾರ್ಜ್
Share on WhatsAppShare on FacebookShare on Telegram

-ಕೆಆರ್‌ಇಡಿಎಲ್‌ಗೆ ಸಚಿವರ ಭೇಟಿ
-ಇಲಾಖೆ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಇಂಧನ ಸಚಿವ ಜಾರ್ಜ್

ADVERTISEMENT

ಬೆಂಗಳೂರು,ಜೂನ್ 21: ನವೀಕರಿಸಬಹುದಾದ ಇಂಧನ ವಲಯದಲ್ಲಿ ಖಾಸಗಿ ಹೂಡಿಕೆ ಆಕರ್ಷಣೆಗೂ ಒತ್ತು ನೀಡಬೇಕು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.

ನಾಗರಭಾವಿಯಲ್ಲಿರುವ ‘ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ’ (ಕೆಆರ್‌ಇಡಿಎಲ್) ಕೇಂದ್ರ ಕಚೇರಿಗೆ ಭೇಟಿ ನೀಡಿದ ಇಂಧನ ಸಚಿವರು, ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪರಿಶೀಲನಾ ಸಭೆಯಲ್ಲಿ ಕೆಆರ್‌ಇಡಿಎಲ್‌ನ ವಿವಿಧ ಯೋಜನೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ನವೀಕರಿಸಬಹುದಾದ ಇಂಧನ ವಲಯದಲ್ಲಿ ಖಾಸಗಿ ಹೂಡಿಕೆ ಆಕರ್ಷಣೆಗೂ ಒತ್ತು ನೀಡುವಂತೆ ಸಲಹೆ ನೀಡಿದರು.

ಕಾರ್ಪೊರೇಟ್ ಶೈಲಿಯ ಕಾರ್ಯ ವಿಧಾನ ಅಳವಡಿಸಿಕೊಳ್ಳವ ಜತೆಗೆ, ಯೋಜನೆಯ ಅನುಷ್ಠಾನಕ್ಕೆ ನವೀನ ಮಾರ್ಗಗಳನ್ನು ಅನುಸರಿಸುವಂತೆ ಅಧಿಕಾರಿಗಳಿಗೆ ಸಚಿವರು ಕಿವಿ ಮಾತು ಹೇಳಿದರು. “ನವೀಕರಿಸಬಹುದಾದ ಇಂಧನ ಉತ್ಪಾದನೆ ಮತ್ತು ಇಂಧನ ಸಂರಕ್ಷಣೆಗೆ ಒತ್ತು ನೀಡಿ, ಇಂಧನ ದಕ್ಷತೆ ಸಾಧಿಸುವ ಮೂಲಕ ರಾಜ್ಯ ವಲಯದಲ್ಲಿ ಮುಂಚೂಣಿ ಸಾಧಿಸುವಂತಾಗಬೇಕು,” ಎಂದರು.

ಕೆಆರ್‌ಇಡಿಎಲ್ ಕ್ಯಾಂಪಸ್‌ನಲ್ಲಿರುವ ಸೋಲಾರ್ ಸ್ಮಾರ್ಟ್ ಬೆಂಚ್, ಪಿಕೊ ಹೈಡ್ರೋದ ಕಾರ್ಯನಿರ್ವಹಣೆಯನ್ನು ಸಚಿವರು ವೀಕ್ಷಿಸಿದರು. ಜತೆಗೆ, ಕ್ಯಾಂಪಸ್‌ನಲ್ಲಿ ಸ್ಥಾಪಿಸಲಾಗಿರುವ SCADA (ವಿದ್ಯುತ್ ಯೋಜನೆಗಳಿಂದ ಲಭ್ಯವಾಗುವಂಥ ನೈಜ-ಸಮಯದ ಡೇಟಾ) ಕೇಂದ್ರಕ್ಕೆ ಭೇಟಿ ನೀಡಿ, ಮಾಹಿತಿ ಪಡೆದರು.

ಹೆಚ್ಚುವರಿ ಇಂಧನವನ್ನು ಹೊರ ರಾಜ್ಯಗಳಲ್ಲಿ ಮಾರಾಟ ಮಾಡಲು ಅನುಕೂಲವಾಗುವಂತೆ ಬ್ಯಾಟರಿ ಶಕ್ತಿ ಶೇಖರಣಾ ವ್ಯವಸ್ಥೆಗೆ ಬೆಳಗಾವಿ, ಚಿತ್ರದುರ್ಗ, ಕೊಪ್ಪಳ, ಧಾರವಾಡ, ರಾಯಚೂರು, ವಿಜಯನಗರ, ವಿಜಯಪುರ, ತುಮಕೂರು ಮತ್ತು ವಿವಿಧ ಜಿಲ್ಲೆಗಳಲ್ಲಿ ಐಎಸ್‌ಟಿಎಸ್ ಯೋಜನೆಯಡಿ 5 ಗಿ.ವ್ಯಾ ಸಾಮರ್ಥ್ಯದ (ಸೌರ ಮತ್ತು ಗಾಳಿ) ಹೈಬ್ರಿಡ್ ಪಾರ್ಕ್ ಸ್ಥಾಪನೆ. ಔರಾದ್‌ನಲ್ಲಿ 500 ಮೆ.ವ್ಯಾ ಸಾಮರ್ಥ್ಯದ ಫ್ಲೋಟಿಂಗ್ ಸೌರ ಯೋಜನೆ-‘ಬೀದರ್ ಸೋಲಾರ್ ಪಾರ್ಕ್’, ಕುಸುಮ್ ಬಿ & ಸಿ, ಹಸಿರು ಜಲಜನಕ ಯೋಜನೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಚಿವರು ಚರ್ಚಿಸಿದರು.

ಕೌಶಲ್ಯಾಭಿವೃದ್ಧಿ ಕೇಂದ್ರ, ಇನ್‌ಕ್ಯುಬೇಶನ್ ಸೆಂಟರ್ ಮತ್ತು ತಾಂತ್ರಿಕ ವಿದ್ಯಾರ್ಥಿಗಳಿಗೆ ವೃತ್ತಿಪರ ಇಂಟರ್ನ್‌ಶಿಪ್ ಆರಂಭಿಸುವ ಹೊಸ ಉಪಕ್ರಮಗಳ ಬಗ್ಗೆಯೂ ಸಚಿವರು ವಿಸ್ತೃತ ಚರ್ಚೆ ನಡೆಸಿದರು. ಜತೆಗೆ, ಈ ಯೋಜನೆಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಕೆಆರ್‌ಇಡಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Tags: BJPcmsiddaramiahCongress GovernmentCongress PartyDCM DK ShivakumarEnergy MinisterEnergy Minister Georgeenergy sectorKarnataka Renewable Energy Development CorporationKJ GeorgeKREDLprivate investment in renewable energy sectorsiddaramaiah
Previous Post

ಅಪ್ಪನ ಕೈಯಿಂದಲೇ ಅಧಿಕಾರಿ ಸ್ವೀಕರಿಸಿದ ಮಗಳು..!

Next Post

ಬಸವಣ್ಣನವರ ರಾಷ್ಟ್ರೀಯವಾದದ ಪರಿಕಲ್ಪನೆ

Related Posts

AI ಯುಗದಲ್ಲಿ ಉದ್ಯೋಗಗಳ ಅಂತ್ಯವೇ? ಎಲೋನ್ ಮಸ್ಕ್ ಹೇಳಿಕೆಗೆ ಚರ್ಚೆ
Top Story

AI ಯುಗದಲ್ಲಿ ಉದ್ಯೋಗಗಳ ಅಂತ್ಯವೇ? ಎಲೋನ್ ಮಸ್ಕ್ ಹೇಳಿಕೆಗೆ ಚರ್ಚೆ

by ಪ್ರತಿಧ್ವನಿ
April 18, 2026
0

ಕೃತಕ ಬುದ್ಧಿಮತ್ತೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಹಿನ್ನೆಲೆಯಲ್ಲಿ, ಮನುಷ್ಯರ ಉದ್ಯೋಗ ಭವಿಷ್ಯ ಕುರಿತು ಜಾಗತಿಕ ಮಟ್ಟದಲ್ಲಿ ಆತಂಕ ಹೆಚ್ಚುತ್ತಿದೆ. ಈ ನಡುವೆ ಎಲೋನ್ ಮಸ್ಕ್ ಭವಿಷ್ಯದ ಬಗ್ಗೆ...

Read moreDetails
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಸೋಲು!

ದೇವಾಲಯಗಳ ಚಿನ್ನ ಬಳಕೆ ಬಗ್ಗೆ ಫಾದರ್ ಪೌಲ್ ಹೇಳಿಕೆ ವಿವಾದಕ್ಕೆ ದಾರಿ

April 18, 2026
ವಿನಯ್ ಕುಲಕರ್ಣಿಗೆ ಜೀವಾವಧಿ  ಶಿಕ್ಷೆ :ಜೀವನಪೂರ್ತಿ ಜೈಲಲ್ಲೇ ಇರಬೇಕಾ? ನಿಯಮ‌ ಏನಿದೆ ?

ವಿನಯ್ ಕುಲಕರ್ಣಿಗೆ ಜೀವಾವಧಿ  ಶಿಕ್ಷೆ :ಜೀವನಪೂರ್ತಿ ಜೈಲಲ್ಲೇ ಇರಬೇಕಾ? ನಿಯಮ‌ ಏನಿದೆ ?

April 18, 2026
ಗೃಹಬಳಕೆ ಗ್ರಾಹಕರಿಗೆ ವಿದ್ಯುತ್ ದರ ಏರಿಕೆ ಶಾಕ್

ಗೃಹಬಳಕೆ ಗ್ರಾಹಕರಿಗೆ ವಿದ್ಯುತ್ ದರ ಏರಿಕೆ ಶಾಕ್

April 17, 2026
ಸಿಜೆಐ ನ್ಯಾ.ಸೂರ್ಯಕಾಂತ್‌ರಿಂದ ಬೆಂಗಳೂರಿನಲ್ಲಿ ಜಾಗತಿಕ ಸುಸ್ಥಿರ ಇಂಧನ ಸಮ್ಮೇಳನ ಉದ್ಘಾಟನೆ : ಸಿಎಂ ಸಿದ್ದರಾಮಯ್ಯ ಭಾಗಿ..

ಸಿಜೆಐ ನ್ಯಾ.ಸೂರ್ಯಕಾಂತ್‌ರಿಂದ ಬೆಂಗಳೂರಿನಲ್ಲಿ ಜಾಗತಿಕ ಸುಸ್ಥಿರ ಇಂಧನ ಸಮ್ಮೇಳನ ಉದ್ಘಾಟನೆ : ಸಿಎಂ ಸಿದ್ದರಾಮಯ್ಯ ಭಾಗಿ..

April 17, 2026
Next Post
ಬಸವಣ್ಣನವರ ರಾಷ್ಟ್ರೀಯವಾದದ ಪರಿಕಲ್ಪನೆ

ಬಸವಣ್ಣನವರ ರಾಷ್ಟ್ರೀಯವಾದದ ಪರಿಕಲ್ಪನೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada