ಟೆಸ್ಲಾ ಸಾಮ್ರಾಜ್ಯದ ಓಡೆಯ, ಜಗತ್ತಿನ ಅತಿ ದೊಡ್ಡ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಇತ್ತೀಚಿಗಷ್ಟೆ ಸಾಮಾಜಿಕ ಜಾಲತಾಣ ದೈತ್ಯ ಟ್ವಿಟ್ಟರ್ ಖರೀದಿಸಲು ಮುಂದಾಗಿ ಅದರಿಂದ ಹಿಂದೆ ಸರಿದು ಕಾನೂನು ಹೋರಾಟ ಎದುರಿಸುತ್ತಿರುವ ನಡುವೆಯೇ ಜಗತ್ತಿನ ಶ್ರೀಮಂತ ಫುಟ್ಬಾಲ್ ಕ್ಲಬ್ಗಳಲ್ಲಿ ಒಂದಾದ ಮ್ಯಾಂಚೆಸ್ಟರ್ ಯುನೈಟೆಡ್ ತಂಡವನ್ನು ಖರೀದಿಸುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಹೌದು, ಈ ಕುರಿತು ಇಂದು ಬೆಳಿಗ್ಗೆ ಟ್ವೀಟ್ ಮಾಡಿರುವ ಅವರು, “ನಾನು ಮ್ಯಾಂಚೆಸ್ಟರ್ ಯುನೈಟೆಡ್ ಅನ್ನು ಖರೀದಿಸುತ್ತಿದ್ದೇನೆ, ನಿಮಗಿದೋ ಸ್ವಾಗತ” ಎಂದು ಟ್ವೀಟ್ ಮಾಡುವ ಮೂಲಕ ಎಲಾನ್ ಮಸ್ಕ್ ಸುದ್ದಿಯಲ್ಲಿದ್ದಾರೆ.
ಸದಾ ಸಮಾಜಿಕ ಜಾಲತಾಣದಲ್ಲಿ ತಮಾಷೆ ಟ್ವೀಟ್ ಮಾಡುವ ಎಲಾನ್ ಮಸ್ಕ್ ಈ ಟ್ವೀಟ್ ಅನ್ನು ನಿಜವಾಗಿಯೂ ಮಾಡಿದ್ದಾರಾ ಅಥವಾ ತಮಾಷೆ ಮಾಡುತ್ತಿದ್ದಾರಾ ಎಂಬುದರ ಬಗ್ಗೆ ಬಹಳ ಚರ್ಚೆಯಾಗುತ್ತಿದೆ.