ಚಾರ್ಜ್ಗೆ ಇಟ್ಟಿದ್ದ ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿಗಾಹುತಿಯಾಗಿರುವ ಘಟನೆ ಮಂಗಳೂರಿನ ಬೊಂದೆಲ್ನಲ್ಲಿ ನಡೆದಿದೆ.
ಮನೆಯ ನೆಲಮಹಡಿಯಲ್ಲಿ ಚಾರ್ಜ್ಗೆ ಹಾಕಿದ ವೇಳೆ ಬೆಂಇ ಕಾಣಿಸಿಕೊಂಡ ಕಾರಣ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಆದರೆ, ವಾಹನ ಯಾವ ಕಂಪನಿಯದೆಂದು ಈವರೆಗೂ ತಿಳಿದು ಬಂದಿಲ್ಲ.
ಇನ್ನು ಈ ಬಗ್ಗೆ ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಬೈಕ್ಗಳು ಬೆಂಕಿಗಾಹುತಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು ವಾಹನ ಸವಾರರು ಹಾಗು ಖರೀದಾರರಲ್ಲಿ ಆತಂಕ ಹೆಚ್ಚಾಗಿದೆ.