ಈ ಚುನಾವಣೆ ಒಂದು ಉಪಚುನಾವಣೆ 13 ಗೆ ನಡೀತಿದೆ. ಈ ಚುನಾವಣೆಯಿಂದ ಹೊಸ ಸರ್ಕಾರ ರಚನೆಯಾಗುವಂತಹ ಚುನಾವಣೆ ಅಲ್ಲ. ಈ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಯೋಗೇಶ್ವರ್ ಗೆದ್ರೆ 136 ಇದ್ದೇವೆ, 137 ಆಗ್ತೇವೆ. ನಮ್ಮ ಸರ್ಕಾರದ ಬಲ ಹೆಚ್ಚಾಗುತ್ತೆ.
ನೀವು ಯೋಗೇಶ್ವರ್ ಅವರಿಗೆ ಮತ ನೀಡುವುದು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾವೆಲ್ಲಾ ಜನಪರ ಕಾರ್ಯಕ್ರಮಗಳನ್ನು ಮಾಡಿದ್ದೇವೆಯೋ ಅದಕ್ಕೆ ಶಕ್ತಿಯನ್ನು ಕೊಟ್ಟ ಹಾಗೆ ಆಗುತ್ತದೆ. ನಾವಿನ್ನು ಮೂರುವರೆ ವರ್ಷ ಅಧಿಕಾರದಲ್ಲಿ ಇರ್ತೇವೆ. ಜೆಡಿಎಸ್, ಬಿಜೆಪಿ ನಾಯಕರು ಏನೆಲ್ಲಾ ನನ್ನ ಮೇಲೆ ಸುಳ್ಳು ಆರೋಪ ಮಾಡಿ, ನನ್ನ ಹೆಸರಿಗೆ ಮಸಿ ಬಳಿದು, ನನ್ನನ್ನು ಅಧಿಕಾರದಿಂದ ತೆಗೆದುಹಾಕಿ ಮತ್ಯಾರೋ ಅಧಿಕಾರಕ್ಕೆ ಬರಬೇಕು ಅಂತ ಹೋಲಿಕೆ ಮಾಡಿದ್ರು ಕೂಡ ಅವರ ದುಷ್ಟ ಪ್ರಯತ್ನದಲ್ಲಿ ಅವರು ಯಶಸ್ಸನ್ನು ಕಾಣಲು ಸಾಧ್ಯವಿಲ್ಲ.
ಬಿಜೆಪಿ ಅವರು ಎಷ್ಟೇ ಆರೋಪ ಮಾಡಿದರು ಸತ್ಯ ನಮ್ಮ ಪರವಾಗಿ ಇದೆ. ನಾನು ಮುಖ್ಯಮಂತ್ರಿಯಾಗಿ 40 ವರ್ಷ ಆಯಿತು. 2 ಬಾರಿ ಮುಖ್ಯ ಮಂತ್ರಿ, 2 ಬಾರಿ ಉಪ ಮುಖ್ಯಮಂತ್ರಿ, 2 ಸಾರಿ ವಿರೋಧ ಪಕ್ಷದ ನಾಯಕನಾಗಿದ್ದೇನೆ. ಇಷ್ಟು ವರ್ಷಗಳು ನಾನು ಅಧಿಕಾರದಲ್ಲಿದ್ದರೂ ಕೂಡ ನನ್ನ ಮೇಲೆ ಯಾವುದೇ ಕಪ್ಪು ಚುಕ್ಕಿ ಇಲ್ಲ. ಬದಲಿಗೆ ನಮ್ಮ ಪಕ್ಷ ಯಾವ್ಯಾವಾಗ ಅಧಿಕಾರಕ್ಕೆ ಬಂದಿದೆ ಅಂತಹ ಸಂದರ್ಭಗಳಲ್ಲಿ ನುಡಿದಂತೆ ನಡೆದಿದ್ದೇವೆ. ಕೊಟ್ಟ ಮಾತಿನಂತೆ ನಡೆದಿದ್ದೇವೆ. ಈ ಚುನಾವಣೆಯು ಒಂದು ಕಡೆ ಕೊಟ್ಟ ಮಾತಿನಂತೆ ನಡೆದುಕೊಂಡ ಪಕ್ಷದ ಅಭ್ಯರ್ಥಿ, ಇನ್ನೊಂದು ಕಡೆ ಜೆಡಿಎಸ್, ಬಿಜೆಪಿ ಪಕ್ಷದವರು ಒಂದಾಗಿದ್ದಾರೆ. ಅವರಿಬ್ಬರೂ ಸೇರಿ ಅಧಿಕಾರದಲ್ಲಿದ್ದಾಗ, ಮುಖ್ಯ ಮಂತ್ರಿಯಾಗಿದ್ದಾಗ ಏನನ್ನು ಕೂಡ ಮಾಡ್ಲಿಲ್ಲ. ನಿಮಗೆ ಉದಾಹರಣೆಗೆ ಹೇಳಬೇಕಂದ್ರೆ 2018ರಲ್ಲಿ ಭಾರತೀಯ ಜನತ ಪಕ್ಷದವರು 600 ಭರವಸೆಯನ್ನು ಕೊಟ್ಟಿದ್ದರು. ಆ 600 ಭರವಸೆಗಳಲ್ಲಿ ಶೇಕಡ 10% ರಷ್ಟು ಕೂಡ ಈಡೇರಿಸಸ್ಲಿಕೆ ಸಾಧ್ಯವಾಗ್ಲಿಲ್ಲ.
ಅವರ ಪ್ರಣಾಳಿಕೆಯಲ್ಲಿ ಬಹಳ ಮುಖ್ಯವಾಗಿ ನಾವು ಅಧಿಕಾರಕ್ಕೆ ಬಂದ ತಕ್ಷಣವೇ ಮೊದಲ ಕಾಬಿನೆಟ್ ನಲ್ಲಿ ರೈತರ ಸಾಲವನ್ನು ಮನ್ನಾ ಮಾಡುತ್ತೇವೆ ಎಂದು ಹೇಳಿದ್ದರು, ನಿಮ್ಮ ಸಾಲವನ್ನು ಮನ್ನಾ ಮಾಡಿದ್ರ?
ನೀರಾವರಿಗೆ 1 ಲಕ್ಷ ಕೋಟಿ ರೂಪಾಯಿಗಳನ್ನು 5 ವರ್ಷದಲ್ಲಿ ಖರ್ಚು ಮಾಡುತ್ತೇವೆ ಎಂದು ಹೇಳಿದ್ರು. ಕುಮಾರಸ್ವಾಮಿ 1 ವರ್ಷ 2 ತಿಂಗಳು, ಭಾರತೀಯ ಜನತಾ ಪಕ್ಷ 3 ವರ್ಷ 10 ತಿಂಗಳು ಅಧಿಕಾರದಲ್ಲಿದ್ರು. 1 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ರ. ಸುಳ್ಳು ಹೇಳಲು ಇತಿ ಮಿತಿ ಇಲ್ಲ ಅವರಿಗೆ. ಜೆಡಿಎಸ್ ಮತ್ತು ಬಿಜೆಪಿಗರು ಸುಳ್ಳು ಹೇಳಲು ಬಹಳ ನಿಸ್ಸಿಮರು. ಜನರನ್ನು ಮರಳು ಮಾಡುವುದರಲ್ಲಿ ನಿಸ್ಸಿಮರು.
ನಿನ್ನೆ ದೇವೇಗೌಡ ಅವರ ಮೊಮ್ಮಗನ ಪರವಾಗಿ ವೋಟ್ ಕೇಳಲು ಬಂದಿದ್ರು. ಅವರು ಸಿದ್ದರಾಮಯ್ಯ ಅವರಿಗೆ ಗರ್ವ, ಈ ಗರ್ವವನ್ನು ಮುರಿಬೇಕು ಎಂದರು. ಪಾಪ ವಯಸ್ಸಾಗಿದೆ ಅಂತ ಹೇಳಿ ನಾನು ಮಾತನಾಡಲು ಹೋಗಲ್ಲ. ಯಾಕಂದ್ರೆ ನೀವು ಉತ್ತರ ಕೊಡಬೇಕು. ದೇವೇಗೌಡರು ಈ 93ನೇ ವಯಸ್ಸಿನಲ್ಲಿ ಬಂದು ಸುಳ್ಳು ಹೇಳ್ತಾರೆ ಅಲ್ವಾ ಸಿದ್ದರಾಮಯ್ಯ ಅವರಿಗೆ ಗರ್ವ, ಸಿದ್ದರಾಮಯ್ಯ ಅವರಿಗೆ ಅಹಂಕಾರ ಅಂತ ಹೇಳಿಬಿಟ್ಟು ಹೋಗಿದ್ದಾರೆ ಅಲ್ವಾ. ನಿಜಾನಾ? ನಾನು ಯಾವತ್ತೂ ಅಧಿಕಾರಕ್ಕೆ ಬಂದ ನಂತರ ಗರ್ವ ಪಟ್ಟಿಲ್ಲ. ಅಧಿಕಾರ ಹೋದಾಗ ಕೂಡ ಅಳಕ್ಕೆ ಹೋಗಿಲ್ಲ. ಅಧಿಕಾರ ಇದ್ದಾಗಲೂ ಒಂದೇ ತರ ಇರ್ತೀನಿ. ಅಧಿಕಾರ ಹೋದಾಗಲೂ ಒಂದೇ ತರ ಇರ್ತೇನೆ. ಇವರ ರೀತಿಯಲ್ಲಿ ಅಳಕ್ಕೆ ಹೋಗೋದಿಲ್ಲ. ದೇವೇಗೌಡ್ರು, ಮಗ ಕುಮಾರಸ್ವಾಮಿ, ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರು ಕೂಡ ಅಳೋದನ್ನು ಕಲಿತು ಬಿಟ್ಟಿದ್ದಾರೆ ಇವಾಗ.
ಆ ಮೇಲೆ ನಮ್ಮ ಕಡೆ ಒಂದು ಗಾದೆಮಾತಿದೆ ಅಳೋ ಗಂಡಸು…. ಇನ್ನೊಂದು ಹೇಳೋದಿಕ್ಕೆ ಹೋಗಲ್ಲ ನಾನು. ಅಷ್ಟೇ ಸಾಕು. ಅಳೋ ಗಂಡಸು… ಇನ್ನೊಬ್ರನು ಯಾರು ನಂಬಲು ಹೋಗಬಾರದು. ಬಹಳ ಹೃದಯ ಸ್ವಂದಿಸುತ್ತದೆ ಅಂತೇ ಕಷ್ಟದಲ್ಲಿರುವವರನ್ನು ಕಂಡು ಅನುಕಂಪ ಹುಟ್ಟುತ್ತದೆ ಅಂತೇ. ಹಾಗಾಗಿ ಅಳು ಬಂದು ಬಿಡುತ್ತದೆ ಅಂತೇ. ಈಗ ಹಾಸನದಲ್ಲಿ ಲೈಂಗಿಕ ಶೋಷಣೆಯಾಗಿದೆ ಅಲ್ವಾ ಆಗ ಅಳು ಬರ್ಲಿಲ್ವ ಇವರಿಗೆ. ಬಹಳ ಜನಕ್ಕೆ ಲೈಂಗಿಕ ಕಿರುಕುಳ, ಲೈಂಗಿಕ ಶೋಷಣೆ ಆಯ್ತಲ್ವಾ ದೇವೇಗೌಡ್ರು ಹೋಗಿ ಅಳಲೆ ಇಲ್ಲ. ನಿಖಿಲ್ ಹೋಗಿ ಅಳಲೇ ಇಲ್ಲ..ಕುಮಾರಸ್ವಾಮಿ ಹೋಗಿ ಅಳಲೇ ಇಲ್ಲ. ಇಲ್ಲಿ ಚನ್ನಪಟ್ಟಣದಲ್ಲಿ ಅಳಲು ಹೋಗ್ತಾರೆ ಅಂತೇ. ದಯಮಾಡಿ ನಂಬಲು ಹೋಗ್ಬೇಡಿ ಇದನ್ನು. ನಾಟಕ ಇದು. ದೊಡ್ಡ ನಾಟಕ, ಅದರ ಬದಲು ಜನರ ಅಭಿವೃದ್ಧಿ ಮಾಡಿ.
ಜನರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿಯನ್ನು ತುಂಬಿ. ಅದನ್ನು ಬಿಟ್ಟು ಅಳೋದ್ರಿಂದ ಜನರ ಸಮಸ್ಯೆಗಳು ಬಗೆಹರಿಸಲು ಸಾಧ್ಯವಾಗಲ್ಲ.ಅತ್ರೆ ಸಮಸ್ಯೆಗಳು ಬಗೆ ಹರಿತವ? ಯಾತಕ್ಕೋಸ್ಕರ ಅಳ್ಬೇಕು. ಜನ ನಮ್ಮನು ಯಾರು ಕೂಡ ರಾಜ್ಯಕ್ಕೆ ಬನ್ನಿ ಅಂತ ಅರ್ಜಿ ಕೊಡಲ್ಲ. ನಾವು ನಮ್ಮ ದೇವರಿಗೋಸ್ಕರ, ನಿಮ್ಮ ಸೇವೆಮಾಡಲು ಬಂದಿದ್ದೇವೆ. ನಿಮ್ಮ ಸೇವೆ ಮಾಡ್ಬೇಕು ನಾವು ನಮ್ಮ ಜವಾಬ್ದಾರಿ, ನಮ್ಮ ಕರ್ತವ್ಯ. ನಿಮ್ಮ ಸೇವೆ ಮಾಡ್ಲಿಕೆ ಆಗದೆ ಹೋದ್ರೆ ಒಂದು ಸೆಕೆಂಡ್ ಕೂಡ ರಾಜಕೀಯದಲ್ಲಿ ಇರ್ಬಾರ್ದು.
ಹಿಂದೆ ನರೇಂದ್ರ ಮೋದಿ ಅವರಿಗೆ ಮನಸೋಇಚ್ಛೆ ಬೈದ್ರು ಇವಾಗ ಭಾಯ್.. ಬಾಯ್.. ಭಾಯಿ …ಕೇವಲ ಅವರ ಸ್ವಾರ್ಥಕ್ಕಾಗಿ, ಅಧಿಕಾರಕೋಸ್ಕರ. ಕುಮಾರ ಸ್ವಾಮಿ ಏನಂತ ಹೇಳಿದ್ರು ನರೇಂದ್ರ ಮೋದಿ ಅವರ ಬಗ್ಗೆ ಗೊತ್ತಾ? ಬಹುಷಃ ಚನ್ನಪಟ್ಟಣದ ಜನಕ್ಕೆ ಗೊತ್ತಿರ್ಬೋದು ಇಂಥ ಮಹಾನ್ ಸುಳ್ಳುಗಾರ ಈ ದೇಶವನ್ನು ಕೊಳ್ಳೆ ಹೊಡೆಯಲು ಇನ್ನೊಬ್ಬನಿಂದ ಸಾಧ್ಯವಿಲ್ಲ. ಅಂತ ಹೇಳಿದ್ರು. ಇದೇ ದೇವೆಗೌಡ್ರು ಹೇಳಿದ್ರು 2019ರಲ್ಲಿ ಮತ್ತೇ ಏನಾದ್ರು ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನಿ ಮಂತ್ರಿಯಾದರೆ ನಾನು ಈ ದೇಶ ಬಿಟ್ಟೆ ಹೋಗುತ್ತೇನೆ ಅಂತ. ಹೋದ್ರಾ?? ಇವಾಗ ಅವರ ಜೊತೆಗೆ ಸೇರಿಕೊಂಡು ನರೇಂದ್ರ ಮೋದಿ ಅವರಷ್ಟು ಒಳ್ಳೆಯವರಿಲ್ಲ ಯಾರಿಲ್ಲ ಎನ್ನುತ್ತಿದ್ದಾರೆ. ಯಾಕಂದ್ರೆ ಅವರ ಮಗ ಕುಮಾರಸ್ವಾಮಿ ಅವರನ್ನು ಭಾರಿ ಕೈಗಾರಿಕಾ ಸಚಿವರು steel industry ಮಂತ್ರಿಯನ್ನಾಗಿ ಮಾಡಿದ್ದಾರೆ ಅಲ್ವಾ.
ಈ ಕುಮಾರಸ್ವಾಮಿ ಏನಾಗಿದ್ದಾರೆ ಅಂದ್ರೆ ಮಂಡ್ಯ ಮಂತ್ರಿ ಆಗಿಬಿಟ್ಟಿದ್ದಾರೆ. ಈ ದೇಶದ ಮಂತ್ರಿ ಅಲ್ವೇ ಅಲ್ಲ. ಮಂಡ್ಯಕ್ಕೆ ಸೀಮಿತವಾದ ಮಂತ್ರಿ ನಿಮ್ಮನ್ನು ಬಿಟ್ಟು ಬಿಟ್ಟಿದ್ದಾರೆ. ಈಗ ಮಂಡ್ಯವನ್ನು ಹೋಗಿ ಹಿಡ್ಕೊಂಡಿದ್ದಾರೆ. ಇಲ್ಲಿಗೆ ಅವರ ಮಗನನ್ನು ಕಳಿಸಿದ್ದಾರೆ. ಇದೇ ನರೇಂದ್ರ ಮೋದಿ ಅವರು ಹೇಳ್ತಾ ಇದ್ರು ನೆಹರು ಕುಟುಂಬದ ಮೇಲೆ ಆರೋಪಗಳನ್ನು ಮಾಡ್ತಾ ಇದ್ರು, ಕುಟುಂಬ ರಾಜಕಾರಣ ಮಾಡ್ತಾರೆ ನೆಹರು ಕುಟುಂಬದವರು ಅಂದಿದ್ರು. ನೆಹರು, ಇಂದಿರಾ ಗಾಂಧಿ, ರಾಜೀವ ಗಾಂಧಿ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಎಲ್ಲಾ ಒಂದೇ ಕುಟುಂಬದವರು ರಾಜಕೀಯ ಮಾಡ್ತಾರೆ. ಇದು ಪ್ರಜಾಪ್ರಭುತ್ವಕ್ಕೆ ವಿರೋಧಿ. ಈಗ? ನಿಮ್ಮನೇಲಿ ಏನ್ ಮಾಡ್ತಾ ಇದ್ದಾರೆ ದೇವೆ ಗೌಡ್ರೆ? ನಿಮ್ಮ ಮಗ, ನೀವು, ರೇವಣ್ಣ ನಿಮ್ಮ ಮೊಮ್ಮಗ, ಇನ್ನೊಬ್ಬ ಮೊಮ್ಮಗ, ಸೊಸೆಯಂದಿರು ಎಲ್ಲರೂ ರಾಜಕೀಯ ಮಾಡ್ತಾ ಇದ್ದೀರಾ ಅಲ್ವಾ? ನಾಚಿಕೆ ಅಗದಿಲ್ವ ನಿಮ್ಗೆ?
ನಾನು ನರೇಂದ್ರ ಮೋದಿ ಅವರಿಗೆ ಕೇಳ್ತೇನೆ… ನರೇಂದ್ರ ಮೋದಿ ಅವರೇ ನೆಹರು ಕುಟುಂಬವನ್ನು ಟೀಕೆ ಮಾಡ್ತಾ ಇದ್ರಲ್ವಾ. ನೀವು ಈಗ ಏನು ಹೇಳ್ತೀರಾ?
ಬಿಜೆಪಿಯವರ ಅಪಪ್ರಚಾರಗಳಿಗೆ, ಜೆಡಿಎಸ್ ನಾಯಕರ ಕಣ್ಣೀರಿಗೆ ಮರುಳಾಗದೆ ನಮ್ಮ ಅಭ್ಯರ್ಥಿ ಯೋಗೇಶ್ವರ್ ಗೆ ಮತನೀಡಿ, ಕ್ಷೇತ್ರದ ಅಭಿವೃದ್ಧಿಯನ್ನು ಮಾಡುವ ಕೆಲಸ ನಮ್ಮದು.