ಕೋಲಾರದ (Kolar) ಟೇಕಲ್ ರಸ್ತೆಯಲ್ಲಿ ನಾರಾಯಣಸ್ವಾಮಿ ಎನ್ನುವರ ಮನೆ ನರ್ಮಾಣದಲ್ಲಿ ಗಾರೆ ಕೆಲಸ ಮಾಡ್ತಿದ್ದ ಮೃತ ಲಕ್ಷ್ಮಮ್ಮ ಫೆಬ್ರವರಿ 19 ರಂದು ಬಿದ್ದು ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಫೆಬ್ರವರಿ 23 ರಂದು 65 ರ್ಷದ ಲಕ್ಷ್ಮಮ್ಮ ಸಾವನ್ನಪ್ಪಿದ್ದರು. ಲಕ್ಷ್ಮಮ್ಮ ಸಂಬಂಧಿಕರಿಗೆ ಮಾಲೀಕ ನಾರಾಯಣಸ್ವಾಮಿ ಅಪಘಾತ ಆಗಿದೆ ಎಂದು ತಿಳಿಸಿದ್ದರು. ಟೇಕಲ್ ರಸ್ತೆಯಲ್ಲಿ ಅಫಘಾತ ನಡೆದಿದೆ ಎಂದು ಸುಳ್ಳು ಮಾಹಿತಿ ನೀಡಿದ್ದರು.
ಅಪಘಾತ ಎಂದು ತಪ್ಪು ಮಾಹಿತಿ ನೀಡಿದ್ದ ನಿವೃತ್ತ PSI ಹಾಗು ಪತಿಯ ಬಂಧನ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ನಗರದ ಟೇಕಲ್ ರಸ್ತೆಯಲ್ಲಿ ಫೆಬ್ರವರಿ 19 ರಂದು ಘಟನೆ ನಡೆದಿತ್ತು. ಪಿಂಡಿಪಾಪನಹಳ್ಳಿ ಗ್ರಾಮದ ೬೫ ರ್ಷದ ಲಕ್ಷ್ಮಮ್ಮ ಮನೆ ನರ್ಮಾಣದ ವೇಳೆ ಮೆಟ್ಟಿಲು ಮೇಲಿಂದ ಬಿದ್ದು ಗಾಯಗೊಂಡಿದ್ದರು. ಆದರೆ ರಸ್ತೆ ಅಫಘಾತವಾಗಿದೆ ಎಂದು ಆಸ್ಪತ್ರೆಗೆ ದಾಖಲು ಮಾಡಿದ್ದರಿಂದ ಕೋಲಾರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸುಳ್ಳು ಮಾಹಿತಿ ನೀಡಿದ್ದಾರೆ ಎನ್ನುವುದು ಗೊತ್ತಾದ ಮೇಲೆ ನಿವೃತ್ತ PSI ರಂಗಲಕ್ಷ್ಮಮ್ಮ ಹಾಗು ಪತಿ ನಾರಾಯಣಸ್ವಾಮಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದರು.
ತಪ್ಪು ಮಾಹಿತಿ ಅಧರಿಸಿ ಮೃತರ ಸಂಬಂಧಿ ತಿರುಮಲಪ್ಪ ದೂರು ನೀಡಿದ್ದರು. ಪೊಲೀಸರ ತನಿಖೆ ವೇಳೆ ಅಪಘಾತ ಎಂಬುದು ನಾಟಕ ಅನ್ನೋ ವಿಚಾರ ಬೆಳಕಿಗೆ ಬಂದ ಬಳಿಕ ನಿವೃತ್ತಿ ಪೊಲೀಸ್ ಅಧಿಕಾರಿ ತನ್ನ ಗಂಡನ ಜೊತೆಗೆ ಸೇರಿಕೊಂಡು ಕೇಸ್ ಮುಚ್ಚಿ ಹಾಕಲು ಯತ್ನಿಸಿದ ಆರೋಪದ ಮೇಲೆ ಕೋಲಾರ ಗಲ್ ಪೇಟೆ ಇನ್ಸ್ಪೆಕ್ಟರ್ ಲೋಕೇಶ್ ನೇತೃತ್ವದಲ್ಲಿ ಕರ್ಯಾಚರಣೆ ನಡೆಸಿ ಬಂಧನ ಮಾಡಲಾಗಿದೆ.
#Kolar #Tekal #Crime #Case #investigation #Police #Complaint #PSI #accident