• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಅಂಬೇಡ್ಕರ್‌ ಬಗ್ಗೆ ಅಮಿತ್‌ ಷಾ ಮಾತು.. ದೇಶಾದ್ಯಂತ ಪ್ರತಿಭಟನೆ..

ಕೃಷ್ಣ ಮಣಿ by ಕೃಷ್ಣ ಮಣಿ
December 19, 2024
in Top Story, ಕರ್ನಾಟಕ, ದೇಶ, ರಾಜಕೀಯ, ಶೋಧ
0
ಅಂಬೇಡ್ಕರ್‌ ಬಗ್ಗೆ ಅಮಿತ್‌ ಷಾ ಮಾತು.. ದೇಶಾದ್ಯಂತ ಪ್ರತಿಭಟನೆ..
Share on WhatsAppShare on FacebookShare on Telegram

ರಾಜ್ಯಸಭೆ ಕಲಾಪದಲ್ಲಿ ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಷಾ ಮಾತನಾಡಿದ ಮಾತುಗಳು ಜನರ ಆಕ್ರೋಶಕ್ಕೆ ಕಾರಣ ಆಗಿವೆ. ಅದರಲ್ಲು ಸಂವಿಧಾನ ಶಿಲ್ಪಿ ಡಾ ಬಿ.ಆರ್‌ ಅಂಬೇಡ್ಕರ್​​ ಬಗ್ಗೆ ಆಡಿದ ಮಾತುಗಳು ಕಾಂಗ್ರೆಸ್​ ಸೇರಿದಂತೆ ವಿರೋಧ ಪಕ್ಷಗಳಿಗೆ ಅಸ್ತ್ರವಾಗಿದೆ. ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ಮಾಡಿದೆ. ಅಮಿತ್​ ಷಾ ಅವರನ್ನು ಕೇಂದ್ರ ಸಂಪುಟದಿಂದ ವಜಾ ಮಾಡುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದನಾಯಕ ರಾಹುಲ್‌ ಗಾಂಧಿ ಸೇರಿದಂತೆ ಸಾಕಷ್ಟು ಜನರು ಪ್ರಧಾನಿ ನರೇಂದ್ರ ಮೋದಿಗೆ ಆಗ್ರಹ ಮಾಡಿದ್ದಾರೆ.

ADVERTISEMENT

ರಾಜ್ಯಸಭೆಯಲ್ಲಿ ಮಾತನಾಡುತ್ತಿದ್ದ ಅಮಿತ್‌ ಷಾ, ಈಗ ಒಂದು ಪ್ಯಾಶನ್‌ ಆಗ್ಬಿಟ್ಟಿದೆ. ಮಾತು ಎತ್ತಿದ್ರೆ ಅಂಬೇಡ್ಕರ್‌.. ಅಂಬೇಡ್ಕರ್‌.. ಅಂಬೇಡ್ಕರ್‌.. ಅಂಬೇಡ್ಕರ್‌ ಎನ್ನಲಾಗುತ್ತದೆ. ಅಂಬೇಡ್ಕರ್‌ ಅನ್ನೋ ಬದಲು ಭಗವಂತನ ನಾಮಸ್ಮರಣೆ ಮಾಡಿದ್ರೆ ಏಳೇಳು ಜನ್ಮದಲ್ಲೂ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು ಅನ್ನೋ 11 ಸೆಕೆಂಡ್‌ಗಳ ವಿಡಿಯೋ ವೈರಲ್‌ ಆಗಿದ್ದು, ಬಾಬಾ ಸಾಹೇಬ್‌ ಅಂಬೇಡ್ಕರ್‌ಗೆ ಅವಮಾನ ಮಾಡಿದ್ರು ಅನ್ನೋದು ಕಾಂಗ್ರೆಸ್‌ನ ನೇರ ಆರೋಪ. ಇದೇ ವಿಚಾರದಲ್ಲಿ ಬುಧವಾರ ಅಮಿತ್‌ ಷಾ ರಾಜೀನಾಮೆಗೆ ಆಗ್ರಹಿಸಿ ಸಂಸತ್‌ನಲ್ಲೂ ಪ್ರತಿಭಟನೆ ನಡೆಸಿದ್ರು.

ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಹಾಗು ಸಂಸದೆ ಪ್ರಿಯಾಂಕಾ ಗಾಂಧಿ, ಸಂವಿಧಾನದ ಪುಸ್ತಕ ಹಿಡಿದು ಕೇಂದ್ರ ಸರ್ಕಾರವನ್ನ ಪದೇ ಪದೇ ಕೆಣಕುವ ವಿಚಾರವಾಗಿ ಕೌಂಟರ್‌ ಕೊಡಲು ಮುಂದಾಗಿದ್ದ ಅಮಿತ್‌ ಷಾ ಹೇಳಿದ ಮಾತು, ಸಂವಿಧಾನ ಕರ್ತೃ ಅಂಬೇಡ್ಕರ್‌ಗೆ ಮಾಡಿದ ಅವಮಾನ ಅನ್ನೋದು ಕಾಂಗ್ರೆಸ್‌ ಆರೋಪ. ಅಮಿತ್ ಷಾ ಮತ್ತು ಬಿಜೆಪಿಯವ್ರು ಒಂದೇ, ಅವರ ಮನಸ್ಸಲ್ಲಿ ಮನುಸ್ಮೃತಿಯಷ್ಟೇ ಇದೆ. ಅಮಿತ್ ಷಾ ಸ್ಥಾನಕ್ಕೆ ರಾಜೀನಾಮೆ ಕೊಡ್ಬೇಕು. ಅಮಿತ್‌ ಷಾ ದೇಶದ ಕ್ಷಮೆ ಯಾಚಿಸಬೇಕು ಎಂದು ಖರ್ಗೆ ಆಗ್ರಹ ಮಾಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಆಗ್ರಹಕ್ಕೆ ತಿರುಗೇಟು ನೀಡಿರುವ ಅಮಿತ್‌ ಷಾ, ಖರ್ಗೆ ಅವರು ನನ್ನ ರಾಜೀನಾಮೆ ಕೇಳ್ತಿದ್ದಾರೆ. ಖರ್ಗೆಯವ್ರಿಗೆ ಖುಷಿ ಆಗೋದಾದ್ರೆ ನಾನು ರಾಜೀನಾಮೆ ನೀಡಲು ರೆಡಿ. ನಾನು ರಾಜೀನಾಮೆ ನೀಡಲು ಸಿದ್ಧವಾಗಿದ್ದೀನಿ. ನನ್ನ ರಾಜೀನಾಮೆಯೇ ಪರಿಹಾರ ಅಲ್ಲ, ಆದ್ರೆ ಖರ್ಗೆ 15 ವರ್ಷ ಇಲ್ಲೇ ಇರಬೇಕಾಗುತ್ತೆ. ಪ್ರತಿಪಕ್ಷ ಸ್ಥಾನದಲ್ಲೇ ಕೂರಬೇಕಾಗುತ್ತೆ ಎಂದು ವ್ಯಂಗ್ಯವಾಡಿದ್ದಾರೆ. ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮಾತನಾಡಿ, ಇದು ಸಂವಿಧಾನ ವಿರೋಧಿ ಹೇಳಿಕೆ, ಆರಂಭದಿಂದ್ಲೂ ಅಪಪ್ರಚಾರ ಮಾಡ್ತಿದ್ದಾರೆ. ಸಂವಿಧಾನವನ್ನೇ ಬದಲಿಸ್ತೀವಿ ಅಂತಾರೆ. ಅಂಬೇಡ್ಕರ್ & ಅವ್ರ ಚಿಂತನೆಗಳ ವಿರೋಧಿಗಳು. ಬಿಜೆಪಿ ಅಜೆಂಡಾ ಇಡೀ ದೇಶಕ್ಕೆ ಗೊತ್ತಿದೆ ಎಂದಿದ್ದಾರೆ.

Amit Shah: ಕಾಂಗ್ರೆಸ್‌ ಗೆ ವಿರುದ್ಧ ಗೃಹ ಸಚಿವ ಅಮಿತಾ ಶಾ ವಾಗ್ದಾಳಿ..! #drbrambedkar #congress #rahulgandhi

ಕಾಂಗ್ರೆಸ್‌ ಆರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ಗರಂ ಆಗಿದ್ದಾರೆ.. ಅಮಿತ್‌ ಷಾ ಮಾತನ್ನ ಕಾಂಗ್ರೆಸ್‌‌ನವ್ರು ತಿರುಚಿದ್ದಾರೆ.. ಅಂಬೇಡ್ಕರ್‌‌ ಬಗ್ಗೆ ಅಮಿತ್‌ ಷಾ ಒಳ್ಳೆಯ ಮಾತುಗಳನ್ನ ಆಡಿದ್ದಾರೆ ಅಂತ ತಮ್ಮ ಎಕ್ಸ್‌ ಖಾತೆಯಲ್ಲಿ ಅಮಿತ್‌ ಷಾ ಭಾಷಣದ ಸಂಪೂರ್ಣ ವಿಡಿಯೋ ಹಂಚಿಕೊಂಡಿದ್ದಾರೆ.. ಜೊತೆಗೆ ಅಂಬೇಡ್ಕರ್​​ಗೆ ಸಂಬಂಧಿಸಿ 5 ಐತಿಹಾಸಿಕ ಸ್ಥಳಗಳ ಅಭಿವೃದ್ಧಿ ಮಾಡಿದ್ದೇವೆ. ಅಂಬೇಡ್ಕರ್​ ಓಡಾಡಿದ್ದ 26 ನಗರ ಪ್ರದೇಶಗಳ ಅಭಿವೃದ್ಧಿ ಮಾಡಿದ್ದೇವೆ. ಅಂಬೇಡ್ಕರ್​ ವಾಸವಿದ್ದ ಲಂಡನ್​ ಮನೆಯನ್ನೂ ಅಭಿವೃದ್ಧಿ ಮಾಡಲಾಗಿದೆ. ಬಿಜೆಪಿ ಸರ್ಕಾರ ಕೂಡ ಅಂಬೇಡ್ಕರ್​​ರನ್ನು ಸ್ಮರಿಸಿಕೊಳ್ಳುತ್ತೆ, ನಾವೆಲ್ಲರೂ ಸಂಸತ್​ನಲ್ಲಿ ಇರೋದಕ್ಕೆ ಅಂಬೇಡ್ಕರ್ ಕಾರಣ, ಕಳೆದ 10 ವರ್ಷಗಳಿಂದಲೂ ಅಂಬೇಡ್ಕರ್​ ಆದರ್ಶಗಳ ಪಾಲನೆ ಮಾಡುತ್ತಿದ್ದೇನೆ. ಬಡತನ ನಿರ್ಮೂಲನೆ, ಪರಿಶಿಷ್ಟರ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ. ಸುಳ್ಳು ಹೇಳೋ ಕಾಂಗ್ರೆಸ್​​ನವರ ಕಣ್ಣಿಗೆ ಅಂಬೇಡ್ಕರ್​ ಕಾಣ್ತಿಲ್ಲ. ಅಂಬೇಡ್ಕರ್​​ ಅವರನ್ನು 1 ಕುಟುಂಬ ಬಳಸಿಕೊಳ್ತಿರೋದು ವಿಪರ್ಯಾಸ ಎಂದು ಕುಟುಕಿದ್ದಾರೆ.

ಅಮಿತ್‌‌ಷಾ ಅವ್ರ ಭಾಷಣದ ತುಣುಕನ್ನ ಜಾಲತಾಣದಲ್ಲಿ ವೈರಲ್‌ ಮಾಡಲಾಗ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಅಮಿತ್‌ ಷಾ ವಿರುದ್ಧ ಪ್ರತಿಭಟನೆಗಳು ನಡೆದಿವೆ.. ದೆಹಲಿಯಲ್ಲಿ ಜೈ ಭೀಮ್‌ ಸಂಘಟನೆ ಮತ್ತು ಕಾಂಗ್ರೆಸ್‌‌ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ಉತ್ತರಪ್ರದೇಶದಲ್ಲಿ ವಿಧಾನಸಭೆ ಚಲೋ ನಡೆಸಲಾಗಿದೆ.. ರಾಜಸ್ಥಾನದಲ್ಲಿ ಪ್ರತಿಭಟನೆಗಿಳಿದ ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಜಲಫಿರಂಗಿ ಪ್ರಯೋಗಿಸಲಾಗಿದೆ.. ಎಎಪಿ ಕಾರ್ಯಕರ್ತರೂ ಕೂಡ ಪ್ರತಿಭಟನೆ ಮಾಡಿದ್ದಾರೆ.. ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲೂ ಅಮಿತ್‌ ಷಾ ವಿರುದ್ಧ ಪ್ರತಿಭಟನೆ ಮಾಡಲಾಗಿದೆ.

Tags: amit shah ambedkar speechamit shah lok sabha speechamit shah rajya sabha speechamit shah speechamit shah speech lok sabhaamit shah speech on ambedkaramit shah speech parliamentamit shah speech protestamit shah speech todayamit shah's remark on ambedkaramit shah's remarks on ambedkaramit shah's speech on nia bill in lok sabhaconstitution speechfiery constitution speechys jagan speech on br ambedkar row
Previous Post

ಸ್ಪೀಕರ್‌ ವಿರುದ್ಧವೇ ಸಿಡಿದು ನಿಂತ ಚಿನ್ನದ ನಾಡಿನ ಶಾಸಕಿ..!

Next Post

ಮೋದಿ ಅವರಿಗೆ ಬಾಬಾ ಸಾಹೇಬರ ಬಗ್ಗೆ ಗೌರವ ಇದ್ದರೆ ಅಮಿತ್‌ ಷಾ ಅವರನ್ನು ವಜಾಗೊಳಿಸಲಿ ; ಖರ್ಗೆ

Related Posts

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು
ಕರ್ನಾಟಕ

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

by ಪ್ರತಿಧ್ವನಿ
April 28, 2026
0

ಕಲಬುರಗಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕುರಿತ ಚರ್ಚೆಗಳು ರಾಜಕೀಯ ವಲಯದಲ್ಲಿ ಗರಿಗೆದರಿರುವ ನಡುವೆಯೇ, ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು,...

Read moreDetails
ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

April 28, 2026
ಬಂಗಾಳ ರಾಜಕೀಯದಲ್ಲಿ ತೀವ್ರ ಪೈಪೋಟಿ: ಮಮತಾ ವಿರುದ್ಧ ರಾಹುಲ್ ಗುಡುಗು, ಮೈತ್ರಿಗೆ ಶಾಕ್?

ಬಂಗಾಳ ರಾಜಕೀಯದಲ್ಲಿ ತೀವ್ರ ಪೈಪೋಟಿ: ಮಮತಾ ವಿರುದ್ಧ ರಾಹುಲ್ ಗುಡುಗು, ಮೈತ್ರಿಗೆ ಶಾಕ್?

April 28, 2026
ಬಂಗಾಳ ಅಸ್ಮಿತೆ ವಿರುದ್ಧ ಬಿಜೆಪಿ ಸವಾಲು: ಗೆಲುವಿಗೆ ತಂತ್ರವೇ? ಕುತಂತ್ರವೇ?

ಬಂಗಾಳ ಅಸ್ಮಿತೆ ವಿರುದ್ಧ ಬಿಜೆಪಿ ಸವಾಲು: ಗೆಲುವಿಗೆ ತಂತ್ರವೇ? ಕುತಂತ್ರವೇ?

April 27, 2026
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ

ಬಂಗಾಳದಲ್ಲಿ ದೀದಿ ಎಷ್ಟು ಪವರ್ ಫುಲ್ ಲೇಡಿ..? ಮೋದಿ ಮಣಿಸುತ್ತಾಳಾ ಈ ಗಟ್ಟಿಗಿತ್ತಿ..?

April 27, 2026
Next Post
ಮೋದಿ ಅವರಿಗೆ ಬಾಬಾ ಸಾಹೇಬರ ಬಗ್ಗೆ ಗೌರವ ಇದ್ದರೆ ಅಮಿತ್‌ ಷಾ ಅವರನ್ನು ವಜಾಗೊಳಿಸಲಿ ; ಖರ್ಗೆ

ಮೋದಿ ಅವರಿಗೆ ಬಾಬಾ ಸಾಹೇಬರ ಬಗ್ಗೆ ಗೌರವ ಇದ್ದರೆ ಅಮಿತ್‌ ಷಾ ಅವರನ್ನು ವಜಾಗೊಳಿಸಲಿ ; ಖರ್ಗೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada