ಎಷ್ಟೋ ಜನಕ್ಕೆ ಆಸೆ ಇರುತ್ತದೆ, ನಮ್ಮ ಸ್ಕಿನ್ ತುಂಬಾನೇ ಕ್ಲಿಯರ್ ಆಗಿರಬೇಕು ತುಂಬಾ ವೈಟ್ ಆಗ್ಬೇಕು ಜೊತೆಗೆ ಗ್ಲೋಯಿಂಗ್ ಸ್ಕಿನ್ ಬೇಕು ಅಂತ, ಹಾಗಾಗಿ ಸಾಕಷ್ಟು ಫೇಸ್ ಪ್ಯಾಕ್ ನ ಬಳಸುತ್ತಾರೆ.ಸಾಲೋನ್ ಗೆ ಹೋಗಿ ಕ್ಲೀನ್ ಅಪ್ ಅಂಡ್ ಫೇಷಿಯಲ್ ಮಾಡಿಸ್ತಾರೆ ಕ್ರೀಮ್ ಗಳನ್ನ ಯೂಸ್ ಮಾಡ್ತಾರೆ..ಆದ್ರೆ ಇದ್ರಿಂದ ತಕ್ಷಣಕ್ಕೆ ಪರಿಹಾರ ಸಿಗುತ್ತೆ ಆದ್ರೆ ಸ್ಕಿನ್ ಗೆ ಎಫೆಕ್ಟ್ ಆಗೋದು ಖಂಡಿತ..ಇಷ್ಟೆಲ್ಲಾ ದುಬಾರಿ ಕರ್ಚು ಮಾಡುವ ಬದಲು ಯಾವುದೇ ಕೆಮಿಕಲ್ಸ್ ಇಲ್ಲದೆ ಮನೆಯಲ್ಲಿ ಸಿಂಪಲ್ ಆಗಿ ಯಾವ ರೀತಿ ಫೇಸ್ ಪ್ಯಾಕ್ ಗಳನ್ನ ತಯಾರು ಮಾಡಿಕೊಳ್ಳಬಹುದು ಅನ್ನೋದರ ಡೀಟೇಲ್ಸ್ ಈ ಕೆಳಗಿನಂತಿದೆ..
ಕಾಫಿ ಪುಡಿ ಮತ್ತು ಮೊಸರು
ಒಂದು ಟೇಬಲ್ ಸ್ಪೂನ್ ಅಷ್ಟು ಕಾಫಿ ಪುಡಿಗೆ ಒಂದು ಟೇಬಲ್ ಸ್ಪೂನ್ ಅಷ್ಟು ಮೊಸರನ್ನ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ಮುಖವನ್ನು ತೊಳೆಯೋದ್ರಿಂದ ನಿಮ್ಮ ತ್ವಚೆ ಬೆಳ್ಳಗಾಗುತ್ತೆ .ಇದರ ಜೊತೆಗೆ ನಿಮ್ಮ ಮುಖದಲ್ಲಿ ಇರುವಂತಹ ಪಿಂಪಲ್ಸ್, ಪಿಂಪಲ್ ಮಾರ್ಕ್ಸ್ ಆಗಿರಬಹುದು, ಕಂಪ್ಲೀಟ್ ಆಗಿ ಕಡಿಮೆಯಾಗುತ್ತೆ ಇದರ ಜೊತೆಗೆ ಗ್ಲೋಯಿಂಗ್ ಸ್ಕಿನ್ ನಿಮ್ಮದಾಗುತ್ತೆ. ಏನೇ ಒಂದು ಕಪ್ಪು ಕಲೆಗಳಿದ್ರು ಕೂಡ ಕ್ಲಿಯರ್ ಆಗುತ್ತೆ.
ಅಕ್ಕಿ ಹಿಟ್ಟು ಅರಿಶಿಣ
ಹೆಚ್ಚಿನ ಜನ ಕೊರಿಯನ್ ಹ್ಯಾಕ್ ನ ಟ್ರೈ ಮಾಡ್ತಾ ಇದ್ದಾರೆ ಇದರಲ್ಲಿ ಅವರು ಅಕ್ಕಿಯನ್ನು ಜಾಸ್ತಿ ಮುಖಕ್ಕೆ ಬಳಸುತ್ತಾರೆ.. ಒಂದು ಟೇಬಲ್ ಸ್ಪೂನ್ ಅಷ್ಟು ಅಕ್ಕಿಗೆ ಅದೇ ಪ್ರಮಾಣದ ನೀರು ಹಾಕಿ ನಂತರ ಚಿಟಿಕೆಯಷ್ಟು ಅರಿಶಿಣ ಪುಡಿಯನ್ನು ಬಳಸಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ಸ್ಕ್ರಬ್ ಮಾಡಿ ವಾಶ್ ಮಾಡಿ.. ಅಕ್ಕಿ ಹಿಟ್ಟು ಸ್ಕಿನ್ ಗೆ ತುಂಬಾನೆ ಒಳ್ಳೆಯದು..ಗ್ಲೋಯಿಂಗ್ ಸ್ಕಿನ್ ನಿಮ್ಮದಾಗುತ್ತದೆ.. ಇದರ ಜೊತೆಗೆ ಅರಿಶಿಣದಲ್ಲಿ ಔಷಧಿ ಅಂಶ ಜಾಸ್ತಿ ಇರೋದ್ರಿಂದ ನಮ್ಮ ಕ್ಲಿಯರ್ ಗೆ ಒಳಿತು. ಡಾರ್ಕ್ ಸರ್ಕಲ್ ಅರಿಶಿಣ ಮತ್ತೆ ಅಕ್ಕಿ ಹಿಟ್ಟು ತುಂಬಾನೇ ಒಳ್ಳೆಯದು..
ಬಾಳೆಹಣ್ಣು ಮತ್ತು ಜೇನು
ಒಂದು ಬಾಳೆಹಣ್ಣಿಗೆ ಒಂದು ಟೇಬಲ್ ಸ್ಪೂನ್ ಅಷ್ಟು ಜೇನುತುಪ್ಪವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ..ಅದಕ್ಕೆ ಸ್ವಲ್ಪ ಅರಿಶಿಣವನ್ನ ಹಾಕುದ್ರು ಕೂಡ ಒಳ್ಳೆಯದು ಆದ್ರೆ ಅರಿಶಿಣ ಒಪ್ಶನ್ ಅಷ್ಟೇ..ಈ ಪೇಸ್ಟ್ ನ ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿರುವಂತಹ ಡೆಡ್ ಸ್ಕಿನ್ ಹೋಗುತ್ತೆ ಬ್ಲಾಕೆಡ್ಸ್ ಅಥವಾ ವೈಟ್ಹೆಡ್ಸ್ ಕಡಿಮೆಯಾಗುತ್ತೆ ..ಸ್ಕಿನ್ ಗ್ಲೋ ಆಗುತ್ತೆ.
ಕಡಲೆ ಹಿಟ್ಟು ಮತ್ತು ಸಕ್ಕರೆ
ಒಂದು ಟೇಬಲ್ ಸ್ಪೂನ್ ಅಷ್ಟು ಕಡ್ಲೆ ಹಿಟ್ಟು ಅದಕ್ಕೆ ಅರ್ಧ ಟೇಬಲ್ ಸ್ಪೂನ್ ಅಷ್ಟು ಸಕ್ಕರೆ ಪುಡಿ ಹಾಗೂ ಅರ್ದ ಟೇಬಲ್ ಸ್ಪೂನ್ ಅಕ್ಕಿಹಿಟ್ಟು ಹಾಕಿ ನೀರು ಬಳಸಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ 20 ರಿಂದ 25 ನಿಮಿಷ ಬಿಟ್ಟು ಮುಖವನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ನಮ್ಮ ಮುಖದ ಹೊಳಪು ಜಾಸ್ತಿ ಆಗುತ್ತೆ, ಡಾರ್ಕ್ ಸರ್ಕಲ್ಸ್ ಬೇಗನೇ ಕಡಿಮೆಯಾಗುತ್ತೆ..
ಒಟ್ಟಿನಲ್ಲಿ ಮನೆಯಲ್ಲಿ ಸಿಗುವಂತ ಪದಾರ್ಥವನ್ನು ಬಳಸಿ ಫೇಸ್ ಪ್ಯಾಕ್ ಗಳನ್ನ ಮಾಡಿಕೊಳ್ಳುವುದರಿಂದ ನಮಗೆ ಯಾವುದೇ ರೀತಿಯ ದುಬಾರಿ ಖರ್ಚು ಆಗೋದಿಲ್ಲ ಇದರ ಜೊತೆಗೆ ನಮ್ಮ ಸ್ಕಿನ್ಗು ಕೂಡ ಕೆಮಿಕಲ್ ಇಂದ ಹಾನಿಯಾಗಲ್ಲ ನೈಸರ್ಗಿಕವಾಗಿ ನಮ್ಮ ತ್ವಚೆಯನ್ನ ಅದ್ಭುತವಾಗಿಡಬಹುದು.