• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ದ್ವಿತೀಯ ಪಿಯು, ಸಿಇಟಿ ಫಲಿತಾಂಶ ಪ್ರಕಟ: 29.91% ಪಿಯು ಫಲಿತಾಂಶ: ಮೈಸೂರಿನ ಮೇಘನ್‌ CET ಪ್ರಥಮ.!!

ಕರ್ಣ by ಕರ್ಣ
September 20, 2021
in ಕರ್ನಾಟಕ
0
ದ್ವಿತೀಯ ಪಿಯು, ಸಿಇಟಿ ಫಲಿತಾಂಶ ಪ್ರಕಟ: 29.91% ಪಿಯು ಫಲಿತಾಂಶ: ಮೈಸೂರಿನ ಮೇಘನ್‌ CET ಪ್ರಥಮ.!!
Share on WhatsAppShare on FacebookShare on Telegram

ಒಂದೇ ದಿನದಲ್ಲಿ ನಿರೀಕ್ಷಿತ ದ್ವಿತೀಯ ಹಾಗೂ ಸಿಇಟಿ ಫಲಿತಾಂಶ ಹೊರಬಿದ್ದಿದೆ. ಕೊರೋನಾ ನಡುವೆ ಸರ್ಕಾರ ಚಾಲೆಂಜಿಗ್ ಆಗಿ ಪರೀಕ್ಷೆಯನ್ನು ನಡೆಸಿತ್ತು. ಇದೇ ವೇಳೆ ಕಾಮನ್ ಎಂಟ್ರೆಸ್ ಟೆಸ್ಟ್ ಅನ್ನೂ ನಡೆಸಲಾಗಿತ್ತು. ಇದೀಗ ಎರಡರ ಫಲಿತಾಂಶ ಹೊರ ಬಿದ್ದಿದೆ. ನಿರೀಕ್ಷಿತ ದ್ವಿತೀಯ ಪಿಯುಸಿ ಹಾಗೂ ಸಿಇಟಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದೆ. ದ್ವಿತೀಯ ಪಿಯುಸಿಯಲ್ಲಿ ಈ ಬಾರಿ ಒಟ್ಟಾರೆ 29.91% ದಷ್ಟು  ಫಲಿತಾಂಶ ಬಂದಿದೆ. ಖಾಸಗಿ ವಿದ್ಯಾರ್ಥಿಗಳು, ಫಲಿತಾಂಶ ತಿರಸ್ಕರಿಸಿದ್ದ ವಿದ್ಯಾರ್ಥಿಗಳು ಹಾಗೂ ಪುನರಾವರ್ತಿ ಅಭ್ಯರ್ಥಿಗಳ ಫಲಿತಾಂಶ ಹೊರ ಬಿದ್ದಿದೆ. ಒಟ್ಟು 18,414 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಅದರಲ್ಲಿ 17,470 ಖಾಸಗಿ ವಿದ್ಯಾರ್ಥಿಗಳು, 351 ರಿಪೀಟರ್ಸ್, 592 ಫ್ರೆಶರ್ಸ್ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ADVERTISEMENT
ಸಾಂದರ್ಭಿಕ ಚಿತ್ರ

ವಿಜ್ಞಾನ ವಿಭಾಗದಲ್ಲಿ 600ಕ್ಕೆ 573 ಅತಿ ಹೆಚ್ಚು ಅಂಕ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ 600 ಅಂಕಕ್ಕೆ 592 ಅತಿ ಹೆಚ್ಚು ಅಂಕ ಪಡೆದಿದ್ದರೆ, ವಾಣಿಜ್ಯ ವಿಭಾಗದಲ್ಲಿ 600ಕ್ಕೆ 594 ಅತಿ ಹೆಚ್ಚು ಅಂಕ ಗಳಿಸಿದ್ದಾರೆ. 18,414 ವಿದ್ಯಾರ್ಥಿಗಳ ಪೈಕಿ 5,507 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 12,906 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆಂದು ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. 556 ಪ್ರೆಶರ್ಸ್, 183 ರಿಪೀಟರ್ಸ್ ಪಾಸ್ ಆಗಿದ್ದಾರೆ. 17,470 ಖಾಸಗಿ ವಿದ್ಯಾರ್ಥಿಗಳ ಪೈಕಿ 4,768 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.  ಬಾಲಕಿಯರು 36.72%, ಬಾಲಕರು 26.02% ಪಾಸ್ ಆಗಿದ್ದಾರೆ. ಮತ್ತು ಗ್ರಾಮಾಂತರ ಭಾಗದಲ್ಲಿ 32.59% ಹಾಗೂ ನಗರ ಭಾಗದಲ್ಲಿ 26.62% ಫಲಿತಾಂಶ ಈ ಬಾರಿ ಬಂದಿದೆ.

ದ್ವಿತೀಯ ಪಿಯುಸಿ ಫಲಿತಾಂಶ ದಿನವೇ ಇಂದು ಸಿಇಟಿ ಫಲಿತಾಂಶ ಪ್ರಕಟವಾಗಿದೆ. ಉನ್ನತ ಶಿಕ್ಷಣ ಸಚಿವ ಡಾ ಅಶ್ವತ್ಥ ನಾರಾಯಣ ಮಲ್ಲೇಶ್ವರದ ಕೆಇಎ ಬೋರ್ಡ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಸಿಇಟಿ ಫಲಿತಾಂಶ ಪ್ರಕಟಿಸಿದರು. ಈ ಬಾರಿ ಸಿಇಟಿ ಪರೀಕ್ಷೆಗೆ  2,01,834 ಅರ್ಜಿ ಸಲ್ಲಿಕೆಯಾಗಿತ್ತು. ಇದರಲ್ಲಿ  1,93,867  ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ರು. ಇದೀಗ ಫಲಿತಾಂಶ ಪ್ರಕಟವಾಗಿದ್ದು, ಕೃಷಿ ಕೋರ್ಸ್ 152518, ಇಂಜಿನಿಯರಿಂಗ್ ಕೋರ್ಸ್ 183231, ಪಶುಸಂಗೋಪನೆ ಕೋರ್ಸ್ 155760, ನ್ಯಾಚುರೋಪತಿ 186638, ಯೋಗ 15590 ವರೆಗೆ ವಿದ್ಯಾರ್ಥಿಗಳು ರ್ಯಾಂಕ್ ‌ಪಡೆದಿದ್ದಾರೆ. ಐದು ವಿಭಾಗದಲ್ಲಿ ಮೊದಲ ರ್ಯಾಂಕ್ ಮೈಸೂರಿನ ಮೇಘನ್ ಹೆಚ್ ಕೆ ಪಡೆದು ಸಾಧನೆಗೈದಿದ್ದಾರೆ. ಇನ್ನು ಮೂರು ವಿಭಾಗದಲ್ಲಿ ಮೂರು ರ್ಯಾಂಕ್ ನೊಳಗೆ ಮಂಗಳೂರಿನ ವಿದ್ಯಾರ್ಥಿ ರೀತಮ್ ಸಾಧನೆ ಮಾಡಿದ್ದಾರೆ.

ಇಂಜಿನಿಯರಿಂಗ್ ಮೊದಲ ಮೂರು ರ್ಯಾಂಕ್  :

ಮೇಘನ್ ಹೆಚ್.ಕೆ , ಮೈಸೂರು – ಮೊದಲ ರ್ಯಾಂಕ್

ಪ್ರೇಮಂಕುರ್, ಬೆಂಗಳೂರು – ಎರಡನೇ ರ್ಯಾಂಕ್

ಬಿಎಸ್ ಅನಿರುಧ್, ಬೆಂಗಳೂರು – ತೃತೀಯ ರ್ಯಾಂಕ್

ಎಗ್ರಿಕಲ್ಚರ್ ವಿಭಾಗ  :

ಮೇಘನ್, ಹೆಚ್ .ಕೆ- ಮೊದಲ ರ್ಯಾಂಕ್

ರೀತಮ, ಬಿ- ಎರಡನೇ ರ್ಯಾಂಕ್

ಅದಿತ್ಯ ಪ್ರಭಾಶ್- ಮೂರನೇ ರ್ಯಾಂಕ್

ಮೇಘನ್‌ ಹೆಚ್.ಕೆ

 ವೆಟರ್ನರಿ ಸೈನ್ಸ್ ವಿಭಾಗ  :

ಮೇಘನ್ ಹೆಚ್.ಕೆ- ಮೊದಲ ರ್ಯಾಂಕ್

ವರುಣ್ ಆದಿತ್ಯ- ಎರಡನೇ ರ್ಯಾಂಕ್

ರೀತಮ್ ಬಿ- ಮೂರನೇ ರ್ಯಾಂಕ್

ಬಿ.ಫಾರ್ಮ್ ವಿಭಾಗ  :

ಮೇಘನ್ ಹೆಚ್.ಕೆ- ಮೊದಲ ರ್ಯಾಂಕ್

ಪ್ರೇಮಾಂಕರ್‌ – ಎರಡನೇ ರ್ಯಾಂಕ್

ಬಿಎಸ್.ಅನಿರುದ್ದ್- ಮೂರನೇ ರ್ಯಾಂಕ್

ನ್ಯಾಚರೋಪತಿ ವಿಭಾಗ :

ಮೇಘನ್ ಹೆಚ್.ಕೆ – ಮೊದಲ ರ್ಯಾಂಕ್

ವರುಣ್ ಆದಿತ್ಯ- ಎರಡನೇ ರ್ಯಾಂಕ್

ರೀತಮ್ ಬಿ- ಮೂರನೇ ರ್ಯಾಂಕ್

55 ಕ್ಕಿಂತಲೂ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳು 5235 ಇದ್ರೆ,  60 ಅಂಕ ಪಡೆದ ವಿದ್ಯಾರ್ಥಿಗಳು 59 ವಿದ್ಯಾರ್ಥಿಗಳು. ಈ ಬಾರಿ 6 ಗ್ರೇಸ್ ಮಾರ್ಕ್ಸ್ ನೀಡಲಾಗಿದೆ. ಭೌತಶಾಸ್ತ್ರದಲ್ಲಿ ಮೂರು, ಗಣಿತದಲ್ಲಿ 3 ಮೂರು ಗ್ರೇಸ್ ಮಾರ್ಕ್ಸ್ ನೀಡಲಾಗಿದೆ. ಕಳೆದ ಬಾರಿಗಿಂತ ಈ ಬಾರಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿದೆ. 54 ಸಾವಿರ ಸೀಟ್ ಗಳನ್ನ ಸಿಇಟಿಗಳ ಮೂಲಕ ಭರ್ತಿ ಮಾಡಲು ತೀರ್ಮಾನ ಮಾಡಿದ್ದು, 1.70 ಲಕ್ಷ ಸೀಟ್ ಗಳು ಲಭ್ಯವಿರಲಿದೆ. ಇದರಲ್ಲಿ 7 ಸಾವಿರ ವಿದ್ಯಾರ್ಥಿಗಳ ರ್ಯಾಂಕ್ ತಡೆಹಿಡಿಯಲಾಗಿದೆ. ಆರೂವರೆ ಸಾವಿರ ವಿದ್ಯಾರ್ಥಿಗಳು ಸರಿಯಾದ ಮಾರ್ಕ್ಸ್ ಕಾರ್ಡ್ ಕೊಟ್ಟಿಲ್ಲ ಎಂದು‌ ಉನ್ನತ ಶಿಕ್ಷಣ ಸಚಿವ ಡಾ ಅಶ್ವತ್ಥ ನಾರಾಯಣ ತಿಳಿಸಿದರು. ಅಂದಹಾಗೆ, ಕೋವಿಡ್ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಪಡಿಸಿ ಪ್ರಥಮ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಪಡೆದ ಅಂಕ ಆಧರಿಸಿಫಲಿತಾಂಶ ನೀಡಲಾಗಿತ್ತು. ಆದರೆ ಕೆಲ ವಿದ್ಯಾರ್ಥಿಗಳು ಆ ಫಲಿತಾಂಶ ತಿರಸ್ಕರಿಸಿ ಪರೀಕ್ಷೆ ಬರೆದಿದ್ದರು. ಇನ್ನು ಸಿಇಟಿ ಪರೀಕ್ಷೆ, ಆಗಸ್ಟ್ 28, 29, 30ರಂದು ನಡೆದಿತ್ತು. ಸಿಇಟಿಗೆ 2,01,834 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದರು. 1.89 ಲಕ್ಷ ವಿದ್ಯಾರ್ಥಿಗಳು ಗಣಿತ ಪರೀಕ್ಷೆ ಬರೆದಿದ್ದಾರೆ. 1.93 ಲಕ್ಷ ವಿದ್ಯಾರ್ಥಿಗಳು ಭೌತಶಾಸ್ತ್ರ ಪರೀಕ್ಷೆ ಬರೆದಿದ್ದರು.

Previous Post

ತಮಿಳುನಾಡಿನಂತೆ ನಮ್ಮ ರಾಜ್ಯ ಸರ್ಕಾರ ಯಾಕೆ ತೆರಿಗೆ ಕಡಿತಗೊಳಿಸಬಾರದು? – ಸಿದ್ಧರಾಮಯ್ಯ ಪ್ರಶ್ನೆ

Next Post

ದಾವಣಗೆರೆ ರಾಜ್ಯ ಕಾರ್ಯಕಾರಿಣಿ ಮೂಲಕ ಬಿಎಸ್ ವೈ ರವಾನಿಸಿದ ಸಂದೇಶವೇನು?

Related Posts

ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ  : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ
Top Story

ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

by ಪ್ರತಿಧ್ವನಿ
April 20, 2026
0

ಕೃಷ್ಣಗಿರಿ ತಮಿಳುನಾಡು : ನಾವೆಲ್ಲರೂ ಪರಸ್ಪರ ಅಣ್ಣ-ತಮ್ಮಂದಿರು. ಊರುಗಳಾಗಿ ಭಾಗವಾಗಿದ್ದೇವೆ ಅಷ್ಟೇ. ನಾವೆಲ್ಲರೂ ಇಂದು ದಕ್ಷಿಣ ಭಾರತದ ಸ್ವಾಭಿಮಾನ ಉಳಿಸಲು ಒಟ್ಟಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಕರ್ನಾಟಕದ...

Read moreDetails
“ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸಿನ ಸಮಾಜ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ”

“ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸಿನ ಸಮಾಜ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ”

April 20, 2026
ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

April 20, 2026
ಪ್ರಧಾನಿ ಕಿವಿಯಲ್ಲಿ ಏನು ಹೇಳಿದೆ ಅಂದ್ರೆ.. : ಮೋದಿ ಜೊತೆಗಿನ ಮಾತುಕತೆ ಗುಟ್ಟು ಬಿಚ್ಚಿಟ್ಟ ಸಿಎಂ..

ಪ್ರಧಾನಿ ಕಿವಿಯಲ್ಲಿ ಏನು ಹೇಳಿದೆ ಅಂದ್ರೆ.. : ಮೋದಿ ಜೊತೆಗಿನ ಮಾತುಕತೆ ಗುಟ್ಟು ಬಿಚ್ಚಿಟ್ಟ ಸಿಎಂ..

April 20, 2026
ಬಹಳ ದೂರದೃಷ್ಟಿಯುಳ್ಳ, ನಿಷ್ಠಾವಂತ ಡಾ.ಚೆಲ್ಲ ಕುಮಾರ್‌ ಬೆಂಬಲಿಸಿ : ತಮಿಳಿಗರಿಗೆ ಮೋಹನ್‌ ಕೊಂಡಜ್ಜಿ ಕರೆ

ಬಹಳ ದೂರದೃಷ್ಟಿಯುಳ್ಳ, ನಿಷ್ಠಾವಂತ ಡಾ.ಚೆಲ್ಲ ಕುಮಾರ್‌ ಬೆಂಬಲಿಸಿ : ತಮಿಳಿಗರಿಗೆ ಮೋಹನ್‌ ಕೊಂಡಜ್ಜಿ ಕರೆ

April 20, 2026
Next Post
ಲಿಂಗಾಯತರ ಕಡೆಗಣಿಸಿ ಸಿಎಂ ಪಟ್ಟ ಇತರೆ ಸಮುದಾಯಕ್ಕೆ ಕಟ್ಟುವ ಧೈರ್ಯ ಕೇಂದ್ರ ಬಿಜೆಪಿಗೆ ಇದೆಯೇ.!?

ದಾವಣಗೆರೆ ರಾಜ್ಯ ಕಾರ್ಯಕಾರಿಣಿ ಮೂಲಕ ಬಿಎಸ್ ವೈ ರವಾನಿಸಿದ ಸಂದೇಶವೇನು?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada