ಮೈಸೂರಿನ ಮುಡಾ ಅಕ್ರಮ ಸೈಟ್ ಹಂಚಿಕೆ ಪ್ರಕರಣಕ್ಕೆ (Muda scam) ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಿಎಂ ಸಿದ್ದರಾಮಯ್ಯ (Cm siddaramaiah) ಪತ್ನಿ ಹಾಗೂ ಮೈಸೂರು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಗೆ ಇಡಿ (Bairathi suresh) ನೋಟಿಸ್ ನೀಡಿದೆ.

ಆದ್ರೆ ಈ ನೋಟಿಸ್ ಪ್ರಶ್ನಿಸಿ ಪಾರ್ವತಿ ಸಿದ್ದರಾಮಯ್ಯ (Parvati siddaramaiah) ಹಾಗೂ ಬೈರತಿ ಸುರೇಶ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಇಂದು ಮಧ್ಯಾಹ್ನ ಈ ಅರ್ಜಿಯ ವಿಚಾರಣೆ ನಡೆಯಲಿದೆ.
ಧಾರವಾಡ ಹೈಕೋರ್ಟ್ ನಲ್ಲೇ ವಿಚಾರಣೆ ನಡೆಯಲಿದ್ದು, ಈ ಬಗ್ಗೆ ಕೋರ್ಟ್ ಏನು ಆದೇಶ ನೀಡಬಹುದು ಎಂಬ ಕುತೂಹಲ ಹೆಚ್ಚಾಗಿದೆ. ಒಂದು ವೇಳೆ ಇಡಿ ನೋಟೀಸ್ ನೀಡಿ ವಿಚಾರಣೆಗೆ ಕರೆದಿರುವುದರಲ್ಲಿ ಲೋಪವೇನು ಇಲ್ಲವೆಂದಾದ್ರೆ ಆಗ ಅನಿವಾರ್ಯವಾಗಿ ಇಬ್ಬರು ವಿಚಾರಣೆಗೆ ಹಾಜರಾಗಬೇಕಿದೆ.