
ಮೈಸೂರು : ಮಹತ್ವದ ಬೆಳವಣಿಗೆ ಎಂಬಂತೆ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಮುಡಾದ 14 ಸೈಟ್ಗಳನ್ನು ವಾಪಸ್ ನೀಡುವುದಾಗಿ ಕಮೀಷನರ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.

14 ಸೈಟ್ಗಳನ್ನು ಮುಡಾಗೆ ಹಸ್ತಾಂತರಿಸುವುದಾಗಿ ಸಿಎಂ ಪತ್ನಿ ಮುಡಾ ಕಮಿಷನರ್ ಅವರಿಗೆ ಪತ್ರ ಬರೆದಿದ್ದಾರೆ.ಇಡಿಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ, ಸಿಎಂ ಕುಟುಂಬ ಅಲರ್ಟ್ ಆಗಿದೆ ಎನ್ನಲಾಗುತ್ತಿದ್ದು, ಮುಡಾ ಸೈಟ್ ವಾಪಸ್ ಕೊಡುವೆ ಎಂದು ಕಮಿಷನರ್ಗೆ ಪತ್ರ ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಈ ಪ್ರಕರಣದಲ್ಲಿ ಮೈಸೂರು ಲೋಕಾಯುಕ್ತದಲ್ಲಿ ಸಿಎಂ ಹಾಗೂ ಅವರ ಪತ್ನಿ ಮತ್ತು ಬಾಮೈದ ವಿರುದ್ಧ FIR ದಾಖಲಾಗಿದೆ. ತನಿಖೆಯ ಹಂತದಲ್ಲಿರುವಾಗಲೇ ಈ ಮಹತ್ವದ ಬೆಳವಣಿಗೆ ಇದೀಗ ನಡೆದಿದೆ.





