ಬಿಬಿಎಂಪಿ ಚುನಾವಣೆ ಯಾವಾಗ ನಡೆಯುತ್ತೆ.? ರಾಜಕೀಯ ಪಕ್ಷಗಳಿಗೆ ಇದು ಬಹುವಾಗಿ ಕಾಡಿದೆ ಪ್ರಶ್ನೆ. ಈ ಪ್ರಶ್ನೆಗೆ ಇಂದಿನ ರಾಜ್ಯ ಚುನಾವಣಾ ಆಯೋಗ ಪತ್ರ ಉತ್ತರ ನೀಡಿದೆ. ಬೆಂಗಳೂರು ಪಾಲಿಕೆ ಚುನಾವಣೆಗೆ ಶೀಘ್ರವೇ ಮುಹೂರ್ತ ಫಿಕ್ಸ್ ಸಾಧ್ಯತೆಯಿದೆ. ಈ ಸಂಬಂಧ ನಾಡಿದ್ದು ಮಹತ್ವದ ಸಭೆಯನ್ನು ರಾಜ್ಯ ಚುನಾವಣಾ ಅಯೋಗ ಕರೆದಿದೆ.
ಬಿಬಿಎಂಪಿ ಚುನಾವಣೆಗೆ ಕೊನೆಗೂ ಕಾಲ ಕೂಡಿಬರುತ್ತಿದೆ. ಚುನಾವಣೆ ಆಗುತ್ತೋ ಇಲ್ಲವೊ ಎಂಬ ಗೊಂದಲ ತುಂಬ ಕಾಡ್ತಿತ್ತು. ಆಳುವ ಬಿಜೆಪಿ ಪಕ್ಷಕ್ಕೆ ಚುನಾವಣೆ ಬೇಡವಾದ್ರೆ ವಿಪಕ್ಷ ಕಾಂಗ್ರೆಸ್ ಕೂಡಲೇ ಚುನಾವಣೆ ಮಾಡಿ ಎಂದು ಒತ್ತಾಯಿಸುತ್ತಿತ್ತು. ಸುಪ್ರಿಂಕೋರ್ಟ್ ಸೂಚನೆ ಹಿನ್ನೆಲೆ ವಾರ್ಡ್ ವಾರು, ಮೀಸಲಾತಿಯ ಪಟ್ಟಿ ಪ್ರಕಟಿಸಿದೆ. ಇದೀಗ ಬಿಬಿಎಂಪಿ ಚುನಾವಣೆಗೆ ಶೀಘ್ರವೇ ಮುಹೂರ್ತ ಫಿಕ್ಸ್ ಆಗಲಿದೆ. ಯಾಕೆಂದರೆ ಆಗಸ್ಟ್ 20ರಂದು ಚುನಾವಣಾ ಆಯೋಗದ ಜತೆ ಪೂರ್ವಭಾವಿ ಸಭೆ ಕರೆದಿದೆ. ಪೂರ್ವಭಾವಿ ಸಭೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಭೆಯಲ್ಲಿ ವಾರ್ಡ್ ಮರುವಿಂಗಡಣೆ, ಮೀಸಲಾತಿ ಕುರಿತಂತೆ ಚರ್ಚೆ ಜರುಗಲಿದೆ. ಚುನಾವಣೆ ನಡೆಸೋಕೆ ಅಗತ್ಯವಿರೋ ಕ್ರಮಗಳ ಬಗ್ಗೆಯೂ ಸದಾಶಿವನಗರದಲ್ಲಿರುವ ರಾಜ್ಯ ಚುನಾವಣಾ ಆಯೋಗದ ಕಚೇರಿಯಲ್ಲಿ ಸಭೆಯಲ್ಲಿ ಚರ್ಚೆಯಾಗಲಿದೆ.

ಈಗಾಗಲೇ ಸುಪ್ರಿಂಕೋರ್ಟ್ ಸೂಚನೆ ಹಿನ್ನೆಲೆ ಬಿಬಿಎಂಪಿ ವಾರ್ಡ್ ಮರುವಿಂಗಡಣೆ ಹಾಗೂ ಮೀಸಲಾತಿ ಅಂತಿಮ ಪಟ್ಟಿ ಪ್ರಕಟಿಸಿದೆ. ಕಳೆದ 15 ದಿನಗಳ ಹಿಂದೆ ವಾರ್ಡ್ ವಾರು ಮೀಸಲಾತಿ ಕರುಡು ಪಟ್ಟಿ ಪ್ರಕಟಿಸಿದ್ದ ಸರ್ಕಾರ, 10 ದಿನಗಳ ಕಾಲ ಸಾರ್ವಜನಿಕ ಆಕ್ಷೇಪಣೆಗೆ ಅವಕಾಶ ನೀಡಲಾಗಿತ್ತು. ಈ ಮಧ್ಯೆ ಹೈ ಕೋರ್ಟ್ ಆಗಸ್ಟ್ 16 ರವರೆಗೆ ಅಂತಿಮ ಪಟ್ಟಿ ಪ್ರಕಟಿಸದಂತೆ ಸೂಚಿಸಿತ್ತು. 2000ಕ್ಕೂ ಹೆಚ್ಚು ಆಕ್ಷೇಪಣೆ ಸಲ್ಲಿಸಿಕೆಯಾಗಿತ್ತು. ಸಾರ್ವಜನಿಕ ಆಕ್ಷೇಪಣೆ ಪರಿಶೀಲನೆ ನಂತರ ಸರ್ಕಾರ ಅಂತಿಮ ಪಟ್ಟಿ ಪ್ರಟಿಸಿತು. 2011ರ ಜನಗಣತಿಯಂತೆ ಮೀಸಲಾತಿ ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಿತ್ತು.
ಬಿಬಿಎಂಪಿ ವ್ಯಾಪ್ತಿಯ 243 ವಾರ್ಡ್ ಗಳಿಗೆ ಮೀಸಲಾತಿಯಲ್ಲಿ ಮೇಲ್ನೋಟಕ್ಕೆ ಅಂತಹ ದೊಡ್ಡ ಬದಲಾವಣೆ ಕಾಣುತ್ತಿಲ್ಲ. ಎರಡು ಸಾವಿರಕ್ಕೂ ಹೆಚ್ಚು ಆಕ್ಷೇಪಣೆಗಳು ಹಾಗೂ ಮನವಿಗಳು ಸಲ್ಲಿಕೆಯಾಗಿದ್ದರೂ ಹೆಚ್ಚಿನ ಬದಲಾವಣೆಗಳನ್ನು ಸರಕಾರ ಮಾಡಿದಂತೆ ತೋರುತ್ತಿಲ್ಲ. ಕಾಂಗ್ರೆಸ್ ಜೆಡಿಎಸ್ ಕ್ಷೇತ್ರಗಳಲ್ಲಿ ಈ ಹಿಂದಿನಂತೆಯೆ ಮಹಿಳೆಯರಿಗೆ ಹೆಚ್ಚು ಮೀಸಲಾತಿ ನೀಡಲಾಗಿದೆ. ಹೆಚ್ಚಿನ ಸಾಮಾನ್ಯ ಮೀಸಲಾತಿಗಳು ಬಿಜೆಪಿ ಪ್ರಭಾವವಿರುವ ವಾರ್ಡ್ ಗಳಲ್ಲಿ ನಿಗಧಿ ಮಾಡಲಾಗಿದೆ.






